Kangana Ranaut WhatsApp: ಕಂಗನಾ ರಣಾವತ್ ವಾಟ್ಸಾಪ್ ಮೆಸೇಜ್ ಲೀಕ್, ಆರೋಪ ಮಾಡಿದ ನಟಿ.

Actress Kangana Ranaut whatsapp Message Leaked: ಬಾಲಿವುಡ್ (Bollywood) ನ ಖ್ಯಾತ ನಟಿ ಕಂಗನಾ ರಣಾವತ್ (Kangana ranaut) ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಕಂಗನಾ ರಣಾವತ್ ಇತ್ತೀಚಿಗೆ ಭಾರಿ ಸುದ್ದಿಯಲ್ಲಿದ್ದಾರೆ.

ಬಾಲಿವುಡ್ ಇಂಡಸ್ಟ್ರಿಯಲ್ಲಿನ ಪಕ್ಷಪಾತಗಳ ಬಗ್ಗೆ ನಿರ್ದಾಕ್ಷಣ್ಯವಾಗಿ ಮಾತನಾಡುವ ಅಥವಾ ಸರಿ ತಪ್ಪು ಎಂದು ಬೆರಳನ್ನು ತೋರಿಸುವ ರೆಬೆಲ್ ನಟಿ ಕಂಗನಾ ರಣಾವತ್ ಯಾವಾಗಲು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿತ್ತಾರೆ.

Kangana Ranaut is the actress accused of WhatsApp message leak
Image Credit: instagram

ನಟಿ ಕಂಗನಾ ರಣಾವತ್ ಅವರ ವಾಟ್ಸಾಪ್ ಮೆಸೇಜ್ ಲೀಕ್
ಬೋಲ್ಡ್‌ ಆಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ನಟಿ ಕಂಗನಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮನೋರಂಜನಾ ಸದಸ್ಯರೊಬ್ಬರು ತಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ.

ಸದ್ಯ ಎಮರ್ಜೆನ್ಸಿ ಸಿನಿಮಾದ ಪೋಸ್ಟ್ ಪ್ರಾಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಕಂಗನಾ, ಇದೀಗ ಅವರ ವಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ.

Actress Kangana Ranaut has alleged that her WhatsApp messages were leaked
Image Credit: instagram

ನಟಿ ಕಂಗನಾ ರಣಾವತ್ ಅವರ ವಾಟ್ಸಾಪ್ ಮೆಸೇಜ್ ಲೀಕ್ ಆಗಿದೆ ಎಂಬ ಸುದ್ದಿಯಲ್ಲಿದ್ದಾರೆ. ನಟಿ ಕಂಗನಾ ರಣಾವತ್ ಅವರ ವಾಟ್ಸಾಪ್ ಮೆಸೇಜ್ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ. ಸ್ವತಃ ಕಂಗನಾ ಅವರೇ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

ತಮ್ಮ ಮೇಲೆ ಗೂಢಚಾರಿಕೆ ಮಾಡಲಾಗಿದೆ. ಇದನ್ನೆಲ್ಲಾ ಮಾಡುತ್ತಿರುವುದು ಬಾಲಿವುಡ್ ನ ಸ್ಟಾರ್ ದಂಪತಿ ಎಂದು ಕಂಗನಾ ಆರೋಪಿಸುತ್ತಿದ್ದಾರೆ.

Kangana Ranaut accused Bollywood star couple of spying on me
Image credit: instagram

ಸ್ಟಾರ್ ದಂಪತಿಗಳಿಗೆ ಎಚ್ಚರಿಕೆ ನೀಡಿದ ಕಂಗನಾ ರಣಾವತ್
ನಟಿ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ವಿಭಾಗದಲ್ಲಿ ಎರಡು ವಿಚಾರಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಒಂದಿಷ್ಟು ದಿನಗಳಿಂದ ಅವರನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಕಂಗನಾ ಹೇಳಿದ್ದಾರೆ.

ತಾವು ಹೋದಲ್ಲಿ ಬಂದಲ್ಲಿ ಅವರ ಫೋಟೋಗಳನ್ನು ಸೆರೆ ಹಿಡಿಯಲಾಗುತ್ತಿದೆ. ಇದಲ್ಲದೆ ಅವರ ಆನ್ ಲೈನ್ ಚಟುವಟಿಕೆಗಳನ್ನು ಸಹ ಟ್ರ್ಯಾಪ್ ಮಾಡಲಾಗುತ್ತಿದೆ. ಇದನ್ನೆಲ್ಲಾ ಸ್ಟಾರ್ ದಂಪತಿ ಮಾಡಿಸುತ್ತಿದ್ದಾರೆ ಅಂತ ಕಂಗನಾ ರಣಾವತ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

Join Nadunudi News WhatsApp Group