Shah Rukh Khan Jawan: ಶಾರುಖ್ ಖಾನ್ ಜವಾನ್ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ, ಮೊದಲ ಹಿಂದಿ ಸಿನಿಮಾ.

Shiva Rajkumar In Shah Rukh Khan Jawan Movie: ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ ಸಿನಿಮಾ ವಿಶ್ವದೆಲ್ಲೆಡೆ ಭರ್ಜರಿ ಯಶಸ್ಸು ಗಳಿಸಿದೆ. ಇನ್ನು ಪಠಾಣ್ ಸಿನಿಮಾದ ನಂತರ ಶಾರುಖ್ ಖಾನ್ ಅವರ ಮುಂದಿನ ಚಿತ್ರದ ಬಗ್ಗೆ ಕೂಡ ಮಾಹಿತಿ ಹೊರಬಂದಿದೆ.

ಇನ್ನು ಪಠಾಣ್ ಮುಗಿದ ಬಳಿಕ ಶಾರುಖ್ ಅವರು ಜವಾನ್ (Jawan) ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಸಾಕಷ್ಟು ಸ್ಟಾರ್ ನಟರು ಕೂಡ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಶಾರುಖ್ ಖಾನ್ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವ ರಾಜಕುಮಾರ್ (Shivaraj Kumar) ನಟಿಸಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

Shiva Rajkumar In Shah Rukh Khan Jawan Movie
Image Source: India Today

ಶಾರುಖ್ ಖಾನ್ ಜವಾನ್ ಚಿತ್ರದಲ್ಲಿ ಶಿವಣ್ಣ
ಇನ್ನು ಜವಾನ್ (Javan Movie) ಚಿತ್ರದಲ್ಲಿ ದಕ್ಷಿಣ ಭಾರತದ ಅನೇಕ ಸ್ಟಾರ್ ನಂತರ ಹೆಸರು ಕೇಳಿ ಬರುತ್ತಿದೆ. ಇದೀಗ ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ಜವಾನ್ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

Shiva Rajkumar In Shah Rukh Khan Jawan Movie
Image Source: Times Of India

ಈಗಾಗಲೇ ಶಿವರಾಜ್ ಕುಮಾರ್ ಅವರು ಪರ ಭಾಷೆ ಚಿತ್ರಗಳಲ್ಲಿ ನಟಿಸಿದ್ದಾರೆ. ಧನುಷ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಕೂಡ ಶಿವರಾಜ್ ಕುಮಾರ್ ನಟಿಸಿದ್ದಾರೆ. ಹಾಗು ರಜನಿಕಾಂತ್ ನಟನೆಯ ಜೈಲರ್ ಚಿತ್ರದಲ್ಲೂ ಕೂಡ ಶಿವರಾಜ್ ಕುಮಾರ್ ನಟಿಸಿದ್ದಾರೆ. ಹಾಗಾಗಿ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ಶಿವಣ್ಣ ನಟಿಸಿದರು ಅಚ್ಚರಿ ಪಡೆಬೇಕಿಲ್ಲ.

Shiva Rajkumar In Shah Rukh Khan Jawan Movie
Image Source: Times Of India

ಇನ್ನು ಜವಾನ್ ಸಿನಿಮಾ ಜೂನ್ ನಲ್ಲಿ ತೆರೆಕಾಣುವ ಸಾಧ್ಯತೆ ಇದೆ ಎನ್ನಲಗುತ್ತಿದೆ. ಇನ್ನು ಜವಾನ್ ಚಿತ್ರದಲ್ಲಿ ನಯನ ತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ತಮಿಳಿನಿಂದ ದಳಪತಿ ವಿಜಯ್ ಹಾಗೂ ತೆಲುಗಿನಿಂದ ಅಲ್ಲೂ ಅರ್ಜುನ್ ಜವಾನ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Join Nadunudi News WhatsApp Group

ಇನ್ನು ಜವಾನ್ ಚಿತ್ರದಲ್ಲಿ ಶಿವಣ್ಣ ನಟಿಸುದರ ಬಗ್ಗೆ ಚಿತ್ರ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ದೊರಕಿಲ್ಲ. ಚಿತ್ರತಂಡ ಈ ಬಗ್ಗೆ ಘೋಷಿಸುವವರೆಗೂ ಕಾದು ನೋಡಬೇಕಿದೆ.

Shiva Rajkumar In Shah Rukh Khan Jawan Movie
Image Source: India Today

Join Nadunudi News WhatsApp Group