Kalpana: ಟಾಪ್ ನಟಿಯಾಗಿದ್ದ ನಟಿ ಕಲ್ಪನಾ ಪ್ರಾಣ ಕಳೆದುಕೊಂಡಿದ್ದು ಯಾಕೆ, ಅದೊಂದು ಘೋರ ದುರಂತ.

ಟಾಪ್ ನಟಿಯಾಗಿದ್ದ ನಟಿ ಕಲ್ಪನಾ ಅವರು ಪ್ರಾಣ ಕಳೆದುಕೊಳ್ಳಲು ಕಾರಣ ಏನು ನೋಡಿ.

Kannada Actress Kalpana: ಕನ್ನಡ ಚಿತ್ರರಂಗದ ಹಿರಿಯ ನಟಿ ಮಿನುಗುತಾರೆ ಕಲ್ಪನಾ (Kalpana) ಸುಮಾರು 78 ಸಿನಿಮಾದಲ್ಲಿ ನಟಿಸಿ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ನಟಿ ಕಲ್ಪನಾ ಅವರ ನಟನೆಗೆ ಸಾಕಷ್ಟು ಜನರು ಫಿದಾ ಆಗಿದ್ದರು.

ನಟಿ ಕಲ್ಪನಾ ಶರಪಂಜರ ಚಿತ್ರದಲ್ಲಿ ನಾ ನೋಡ್ದೆ, ನಾ ಬಂದೆ ಎನ್ನುವ ವಿಚಿತ್ರವಾದ ಡೈಲಾಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇವರ ಈ ಡೈಲಾಗ್ ಈಗಲೂ ಸಹ ಸಖತ್ ಫೇಮಸ್ ಆಗಿದೆ.

Kannada Actress Kalpana
Image Source: Vijaykarnataka

ಕನ್ನಡ ಹಿರಿಯ ನಟಿ ಕಲ್ಪನಾ
ನಟಿ ಕಲ್ಪನಾ ಹಿಂದಿನ ಕಾಲದ ನಟಿಯಾಗಿದ್ದರು ಸಹ ಈಗಿನ ಕಾಲದಲ್ಲಿ ಅವರ ಡೈಲಾಗ್ ಫೇಮಸ್ ಆಗಿಯೇ ಉಳಿದಿದೆ. ನಟಿ ಕಲ್ಪನಾ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಪ್ರಾಣವನ್ನು ಕಳೆದುಕೊಂಡರು. ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಆ ಕಾರಣದಿಂದ ತಮ್ಮ ಪ್ರಾಣವನ್ನು ಕಳೆದುಕೊಂಡರು ಎಂಬ ಸುದ್ದಿ ಆಗಿತ್ತು. ನಟಿ ಮಿನುಗುತಾರೆ ಕಲ್ಪನಾ ತಮ್ಮ 36 ನೇ ವಯಸ್ಸಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸಿನಿಮಾವನ್ನು ಮಾಡಿ ಯಶಸ್ಸು ಪಡೆಯುವ ಸಂದರ್ಭದಲ್ಲಿ ಅವರಿಬ್ಬರಿಗೂ ಭಿನ್ನಾಭಿಪ್ರಾಯ ಮೂಡತ್ತದೆ. ಈ ಕಾರಣದಿಂದ ನಟಿ ಕಲ್ಪನಾ ಅವರಿಗೆ ಸಿನಿಮಾದಲ್ಲಿ ಆಫರ್ ಗಳು ಕಡಿಮೆ ಆಗುತ್ತದೆ.

Kannada Actress Kalpana
Image Source: Kannada News

ಹಿರಿಯ ನಟಿ ಕಲ್ಪನಾ ಪ್ರಾಣ ಕಳೆದುಕೊಳ್ಳಲು ಕಾರಣ
ನಟಿ ಕಲ್ಪನಾ ಚಿಕವಯಸ್ಸಿನಲ್ಲಿ ಸಿನಿಮಾರಂಗದಿಂದ ದೂರ ಉಳಿಯುತ್ತಾರೆ. ಇದರಿಂದ ಚಿತ್ರರಂಗ ಅವರ ಬಗ್ಗೆ ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತದೆ. ಇದರಿಂದ ಅವರು ಖಿನ್ನತೆಗೆ ಒಳಗಾಗಿ ಪ್ರತಿದಿನ ರಾತ್ರಿ ನಿದ್ದೆ ಮಾತ್ರ ಸೇವಿಸುತ್ತಿದ್ದರಂತೆ.

Join Nadunudi News WhatsApp Group

ಇದಾದ ನಂತರ ಅವರು ನಾಟಕ ಒಂದರಲ್ಲಿ ತಪ್ಪಾಗಿ ಡೈಲಾಗ್ ಹೇಳಿದ್ದಕ್ಕೆ ಬಸವರಾಜ್ ಅವರು ಕಲ್ಪನಾ ಅವರ ಕೆನ್ನೆಗೆ ಬಾರಿಸುತ್ತಾರಂತೆ. ಇದರಿಂದ ಬೇಸರಗೊಂಡ ನಟಿ 56 ಮಾತ್ರೆಗಳನ್ನು ನುಂಗಿ ಕೈಬೆರಳಿನ ಉಂಗುರವನ್ನು ನುಂಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರಂತೆ.

Kannada Actress Kalpana
Image Source: India Today

Join Nadunudi News WhatsApp Group