Madrasas: ಮದ್ರಸದಲ್ಲಿ ಓದುವ ಮಕ್ಕಳಿಗೆ ಇನ್ನುಮುಂದೆ ಹೊಸ ನಿಯಮ, ಝಮೀರ್ ಅಹ್ಮದ್ ಖಾನ್ ಘೋಷಣೆ.

ಮದ್ರಸದಲ್ಲಿ ಓದುವ ಮಕ್ಕಳಿಗೆ ಹೊಸ ನಿಯಮ ಜಾರಿಗೆ ತಂದ ಝಮೀರ್ ಅಹ್ಮದ್ ಖಾನ್.

Kannada Learning Is Compulsory On Madarsa: ಇದೀಗ ಸಮಗ್ರ ಶೈಕ್ಷಣಿಕ ಅನುಭವವನ್ನು ಬೆಳೆಸುವ ಸಲುವಾಗಿ ಕರ್ನಾಟಕ ವಸತಿ ಮತ್ತು ಅಲ್ಪಸಂಖ್ಯಾತ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರು ರಾಜ್ಯಾದ್ಯಂತ ಮದ್ರಸಾಗಳ ಪಠ್ಯ ಕ್ರಮದಲ್ಲಿ ಹೊಸ ನಿಯಮಗಳನ್ನ ಜಾರಿಗೆ ತರಲು ತೀರ್ಮಾನವನ್ನ ಮಾಡಿದ್ದು ಈ ನಿಯಮ ರಾಜ್ಯದ ಎಲ್ಲಾ ಮದ್ರಸಗಳಿಗೆ ಅನ್ವಯ ಆಗಲಿದೆ ಎಂದು ಅವರು ಹೇಳಿದ್ದಾರೆ. ಮಕ್ಕಳ ಭವಿಷ್ಯದ ವಿದ್ಯಾಭ್ಯಾಸದ ಉದ್ದೇಶದಿಂದ ಈ ಹೊಸ ನಿಯಮವನ್ನ ಸಚಿವರು ಜಾರಿಗೆ ತಂದಿರುತ್ತಾರೆ.

Kannada Learning Is Compulsory On Madarsa
Image Credit: AA

ಮದ್ರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ
ಕನ್ನಡ ದಲ್ಲಿ ಪ್ರಮಾಣವಚನವನ್ನು ಸ್ವೀಕರಿಸದೆ ಟೀಕೆಗೆ ಒಳಗಾಗಿದ್ದ ಜಮೀರ್ ಅಹಮದ್ ಖಾನ್ ಅವರು ಈಗ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಎಂದು ಆದೇಶ ಹೊರಡಿಸಿದ್ದಾರೆ. ಸೋಮವಾರ ನೆಡೆದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮದರಸಾಗಳಲ್ಲಿ ವಿಜ್ಞಾನ, ಗಣಿತ, ಕನ್ನಡ, ಇಂಗ್ಲಿಷ್ ಸೇರಿದಂತೆ ಎಲ್ಲ ವಿಷಯಗಳನ್ನು ಬೋಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವರ್ಕ್ ಬೋರ್ಡ್ ನಲ್ಲಿ 1265 ಮದರಸಾಗಳು ನೋಂದಣಿಯಾಗಿದ್ದು, ಅಧಿಕಾರಿಗಳು 100 ಮದರಸಾಗಳಲ್ಲಿ 5000 ಮಕ್ಕಳಿಗೆ ಪ್ರಾಯೋಗಿಕ ಆದರದ ಮೇಲೆ ಆ ವಿಷಯಗಳನ್ನು ಬೋಧನೆ ಮಾಡಬೇಕು ಎಂದು ಸಚಿವರ ಕಚೇರಿ ತಿಳಿಸಿದೆ. ಇದು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ ಎಲ್ಲ ಮದರಸಾಗಳಿಗೆ ವಿಸ್ತರಿಸಲು ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ.

zameer ahmed khan about kannada language compulsory in madrasa
Image Credit: Oneindia

ಕನ್ನಡ ಕಲಿಸುವ ನಿರ್ಧಾರಕ್ಕೆ ಮೆಚ್ಚುಗೆ
ಜಮೀರ್ ಅಹಮದ್ ಅವರ ಈ ಆದೇಶಕ್ಕೆ ಕನ್ನಡ ಪರ ಸಂಘಟನೆಗಳು ಹಾಗೂ ಸೋಶಿಯಲ್ ಮೀಡಿಯಾಗಳು ವ್ಯಾಪಕ ಮೆಚ್ಚುಗೆಯನ್ನು ಸೂಚಿಸಿವೆ. ಇದು ಕೇವಲ ಆದೇಶವಾಗಿ ಉಳಿಯಬಾರದು, ಮುಂದಿನ ವರ್ಷದಿಂದ ಇದು ಸಮರ್ಪಕವಾಗಿ ಜಾರಿಗೆ ಬರಬೇಕು, ಎಲ್ಲಾ ಮದರಸಾಗಳಲ್ಲಿ ಕನ್ನಡ ಕಲಿಸುವ ಕೆಲಸ ಶುರು ಆಗಬೇಕು ಎಂದು ಹಲವರು ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group