Kannadathi Serial Climax: ಇಂದು ಕನ್ನಡತಿ ಧಾರಾವಾಹಿ ಮುಕ್ತಾಯ, ಭಾವುಕದಿಂದ ಪೋಸ್ಟ್ ಮಾಡಿದ ರಂಜಿನಿ.

Kannadathi Serial End: ಕನ್ನಡದ ಜನಪ್ರಿಯ ಧಾರಾವಾಹಿಯಾದ ಕನ್ನಡತಿ (Kannadathi) ಇಂದು ಕೊನೆಯ ಸಂಚಿಕೆ ಪ್ರಸಾರವಾಗಲಿದೆ.

ಕನ್ನಡತಿ ಧಾರಾವಾಹಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಇಂದು ತನ್ನ ಕೊನೆಯ ಸಂಚಿಕೆಗಳಲ್ಲಿ ಕನ್ನಡತಿ ಮೂಡಿ ಬರಲಿದೆ. ಈ ಬಗ್ಗೆ ನಟಿ ರಂಜಿನಿ ರಾಘವನ್ ಇನ್ಸ್ಟಾಗ್ರಾಮ್ (Ranjani Raghavan Instagram) ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

Kannadati serial ends today, Ranjini dies in an emotional post
Image Credit: instagram

ಕನ್ನಡಿಗರ ಜನಪ್ರಿಯ ಧಾರಾವಾಹಿ ಕನ್ನಡತಿ
ಕನ್ನಡತಿ ಧಾರಾವಾಹಿ ಸಾಕಷ್ಟು ಕನ್ನಡಲಿಗರ ಮನಸ್ಸನ್ನು ಗೆದ್ದಿದೆ. ವಿಭಿನ್ನ ರೀತಿಯ ಪ್ರೇಮ ಕಥೆ ಇರುವಂತಹ ಕನ್ನಡತಿ ಎಲ್ಲರ ಮೆಚ್ಚುಗೆ ಪಡೆದಿದೆ. ಆದರೆ ಇಂದು ಕನ್ನಡತಿ ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರವಾಗಲಿದೆ. ಕನ್ನಡತಿ ಧಾರಾವಾಹಿ ಮುಗಿಯುವ ಬಗ್ಗೆ ಈ ಹಿಂದೆ ಸಾಕಷ್ಟು ಸುಳಿವು ಸಿಕ್ಕಿತ್ತು.

ಕನ್ನಡತಿ ಧಾರಾವಾಹಿಯ ನಾಯಕ ನಟ ಹರ್ಷ ಈ ಹಿಂದೆ ಕನ್ನಡತಿ ಜರ್ನಿ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದರು. ಆಗಲೇ ಕನ್ನಡತಿ ಮುಗಿಯುತ್ತದೆ ಎಂದು ಧಾರಾವಾಹಿ ಪ್ರಿಯರು ಊಹಿಸಿದ್ದರು. ಆದರೆ ಇಂದು ಕನ್ನಡತಿಯ ಕೊನೆಯ ಸಂಚಿಕೆ ಎಂದು ತಿಳಿದ ಧಾರಾವಾಹಿ ಪ್ರಿಯರು ಬೇಸರಗೊಳ್ಳುತ್ತಿದ್ದಾರೆ.

Join Nadunudi News WhatsApp Group

Popular serial Kannadathi will end today
Image Credit: timesofindia.indiatimes

ಕನ್ನಡತಿ ಧಾರಾವಾಹಿಯ ನಾಯಕಿ ರಂಜನಿ ಭಾವುಕ ಪೋಸ್ಟ್ ಹಾಕುವ ಮೂಲಕ ಕನ್ನಡತಿ ಧಾರಾವಾಹಿ ಪ್ರಿಯರಿಗೆ ವಿದಾಯ ಹೇಳಿದ್ದಾರೆ. ನಟಿ ಪೋಸ್ಟ್ ಮಾಡಿದ ಭಾವುಕ ಪೋಸ್ಟ್ ಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕನ್ನಡತಿ ಪ್ರಿಯರು ಕೂಡ ಕನ್ನಡತಿ ಧಾರಾವಾಹಿಯನ್ನು ಬಹಳ ಮಿಸ್ ಮಾಡಿಕೊಳ್ಳುದಾಗಿ ಕಮೆಂಟ್ ಮಾಡುತ್ತಿದ್ದಾರೆ.

ನಟಿ ರಂಜನಿಯ ಭಾವುಕ ಪೋಸ್ಟ್
ಕನ್ನಡತಿ ಧಾರಾವಾಹಿ ಇಂದು ಸಂಜೆ 7.30 ಕ್ಕೆ ತನ್ನ ಕೊನೆಯ ಸಂಚಿಕೆಯಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ಕನ್ನಡತಿ ಧಾರಾವಾಹಿಯ ನಾಯಕಿ ರಂಜನಿ ಭಾವುಕ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.

Ranjini Raghavan said that Kannadathi serial will end today
Image Credit: instagram

“ನಮ್ಮೆಲ್ಲರ ಹೆಮ್ಮೆಯ ಧಾರಾವಾಹಿ ‘ಕನ್ನಡತಿ’ಯಾ ಕಡೆಯ ಸಂಚಿಕೆ ಇಂದು ಪ್ರಸಾರವಾಗುತ್ತಿದೆ. ಇನ್ನಷ್ಟು ಸಂಚಿಕೆ ಬರಬಹುದಿತ್ತು, ನಿಮ್ಮನ್ನು ಮಿಸ್ ಮಾಡಿಕೊಳ್ತೀವಿ ಅಂತ ಹೇಳುವಾಗಲೇ ಗೌರವದಿಂದ ಮುಕ್ತಾಯ ಕಾಣುತ್ತಿರೋದು ನಮಗೆಲ್ಲ ಹೆಮ್ಮೆಯ ವಿಚಾರ.

ಮುಂದೆ ಅರ್ಥಪೂರ್ಣವಾದ ಪಾತ್ರಗಳ ಮೂಲಕ, ಒಳ್ಳೆಯ ಬರವಣಿಗೆ ಹೊಂದಿರೋ ಪ್ರಾಜೆಕ್ಟ್ ಗಳ ಮೂಲಕ ನಿಮ್ಮ ಮುಂದೆ ಬರುವ ನಿರೀಕ್ಷೆಯಲ್ಲಿದ್ದೇವೆ. ನಿಮ್ಮ ನಿರಂತರ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು. ಪ್ರೀತಿಯಿಂದ ರಂಜನಿ ರಾಘವನ್” ಎಂದು ಬರೆದು ನಟಿ ಪೋಸ್ಟ್ ಮಾಡಿದ್ದಾರೆ.

Join Nadunudi News WhatsApp Group