Kantara 2: ಕಾಂತಾರ 2 ಬಜೆಟ್ ಎಷ್ಟು…? ದುಬಾರಿ ಖರ್ಚಿನಲ್ಲಿ ತಯಾರುತ್ತಿದೆ ಕನ್ನಡದ ಹೆಮ್ಮೆಯ ಚಿತ್ರ ಕಾಂತಾರ 2.
ಇದೀಗ ಕಾಂತಾರ 2 ಎಷ್ಟು ಬಜೆಟ್ ನಲ್ಲಿ ನಿರ್ಮಾಣಗೊಳ್ಳಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.
Kantara 2 Budget: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದ ಕನ್ನಡದ ಕಾಂತಾರ (Kantara) ಇದೀಗ ಸ್ವೀಕ್ವೆಲ್ ತಯಾರಿಯಲ್ಲಿದೆ. ಈಗಾಗಲೇ ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ 2 ಬಗ್ಗೆ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದೆ. ಸೆಪ್ಟೆಂಬರ್ 2022 ರಲ್ಲಿ ಕಾಂತಾರ ಚಿತ್ರ ಬಿಡುಗಡೆಗೊಂಡಿದ್ದು, ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿದೆ. ಇನ್ನು ಕಾಂತಾರ ಚಿತ್ರ 450 ಕೋಟಿಗೂ ಅಧಿಕ ಹಣ ಗಳಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸ್ರಷ್ಟಿಸಿದೆ.
ಇನ್ನು ಕಾಂತಾರ ಚಿತ್ರ ನೋಡಿದ ಮೇಲೆ ಕಾಂತಾರ 2 ಬಗ್ಗೆ ಸಿನಿ ಪ್ರಿಯರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ರೇಕ್ಷಕರ ನಿರೀಕ್ಷೆಯ ಮೇರೆಗೆ ಕಾಂತಾರ 2 ಶೀಘ್ರದಲ್ಲೇ ಬರುವುದಾಗಿ ರಿಷಬ್ ಶೆಟ್ಟಿ ಘೋಷಿಸಿದ್ದರು. ಆಗಾಗ ರಿಷಬ್ ಶೆಟ್ಟಿ ಅವರು ಕಾಂತಾರ 2 ಬಗ್ಗೆ ಅಪ್ಡೇಟ್ ನೀಡುತ್ತಲೇ ಇರುತ್ತರೆ. ಇನ್ನು ಕಾಂತಾರ ಮುಂದುವರೆದ ಭಾಗದ ಬಗ್ಗೆ ಸಿನಿಪ್ರಿಯರು ಕುತೂಹಲರಾಗಿದ್ದಾರೆ. ಇದೀಗ ರಿಷಬ್ ಶೆಟ್ಟಿ ಕಾಂತಾರ 2 ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ.
ಕಾಂತಾರ 2 ಬಿಗ್ ಅಪ್ಡೇಟ್
ಕನ್ನಡದ ಹೆಮ್ಮೆಯ ಕಾಂತಾರ ಸಾಕಷ್ಟು ದಾಖಲೆ ಬರೆದಿದೆ. ರಿಷಬ್ ಶೆಟ್ಟಿ ಅವರು ಈ ಚಿತ್ರದ ಮೂಲಕ ಡಿವೈನ್ ಸ್ಟಾರ್ ಎನ್ನುವ ಖ್ಯಾತಿ ಪಡೆದಿದ್ದಾರೆ. ರಿಷಬ್ ಶೆಟ್ಟಿ ಅವರ ಸಿನಿ ಪಯಣಕ್ಕೆ ಕಾಂತಾರ ಚಿತ್ರ ಮಹತ್ತರ ತಿರುವನ್ನು ನೀಡಿದೆ. ಇದೀಗ ರಿಷಬ್ ಕಾಂತಾರ ಸೀಕ್ವೆಲ್ ಸಿದ್ಧತೆಯಲ್ಲಿದ್ದಾರೆ. ಇನ್ನು ಕಾಂತಾರ ಚಿತ್ರ ಸರಿಸುಮಾರು 16 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿತ್ತು.
ಆದರೆ ಸಿನಿಮಾ ತರೆಕಂಡ ಬಳಿಕ ಬರೋಬ್ಬರಿ 450 ಕೋಟಿಗೂ ಅಧಿಕ ಹಣ ಗಳಿಸಿದೆ.ಕಡಿಮೆ ಬಜೆಟ್ ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಖ್ಯಾತಿ ಕಾಂತಾರ ಪಡೆದುಕೊಂಡಿದೆ. ಇದೀಗ ಕಾಂತಾರ 2 ಚಿತ್ರದ ಬಜೆಟ್ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಈ ಚಿತ್ರದ ಮೇಲೇ ನಿರೀಕ್ಷೆ ಹೆಚ್ಚಿರುವ ಕಾರಣ ಹೆಚ್ಚಿನ ಬಜೆಟ್ ನಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದು ಊಹಿಸಲಾಗಿದೆ. ಇದೀಗ ಕಾಂತಾರ 2 ಎಷ್ಟು ಬಜೆಟ್ ನಲ್ಲಿ ನಿರ್ಮಾಣಗೊಳ್ಳಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.
ಭರ್ಜರಿ ಬಜೆಟ್ ನಲ್ಲಿ ರೆಡಿಯಾಗುತ್ತಿದೆ ಕಾಂತಾರ 2
ಕಾಂತಾರ 2 ರಲ್ಲಿ ಹೊಸ ಹೊಸ ಪ್ರದೇಶದಲ್ಲಿ ಚಿತ್ರೀಕರಣ ಇರಿಸಲಾಗಿದೆ. ಕಾಡು, ಹಳ್ಳಿ, ನೀರು ಇರುವಂತಹ ಪ್ರದೇಶಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಈ ಎಲ್ಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿರುವ ಕಾರಣ ಮೊದಲ ಸಿನಿಮಾದ ಬಜೆಟ್ ಗಿಂತ ಹೆಚ್ಚಿನ ಬಜೆಟ್ ಬೇಕಾಗಲಿದೆ. ಕಾಂತಾರ 2 ಸ್ವೀಕ್ವೆಲ್ ಗಾಗಿ ಚಿತ್ರತಂಡ ಬರೋಬ್ಬರಿ 100 ಕೋಟಿ ಬಜೆಟ್ ಖರ್ಚು ಮಾಡಲಿದೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.