Kantara 2 Heroine: ಕಾಂತಾರ 2 ನಲ್ಲಿ ಊರ್ವಶಿ ರೌಟೇಲಾ ನಾಯಕಿ, ಸ್ಪಷ್ಟನೆ ನೀಡಿದ ಚಿತ್ರ ತಂಡ.

Urvashi Rautela Heroine In Kantara 2: ಇತ್ತೀಚಿನ ದಿನಗಳಲ್ಲಿ ಕಾಂತಾರ 2 (Kantara 2) ಬಗ್ಗೆ ಹೊಸ ಹೊಸ ಅಪ್ಡೇಟ್ ಗಳು ಸಿಗುತ್ತಿವೆ. ಈ ನಡುವೆ ಕಾಂತಾರ 2 ನಲ್ಲಿ ಹೊಸ ಹೊಸ ಕಲಾವಿದರು ನಟಿಸಲಿದ್ದಾರೆ ಎನ್ನುವ ಮಾಹಿತಿ ಕೂಡ ಹೊರಬಂದಿತ್ತು.

ಇನ್ನು ಐರಾವತ ಚಿತ್ರದ ಬೆಡಗಿ ಊರ್ವಶಿ ರೌಟೇಲಾ (Urvashi Routela) ಕಾಂತಾರ 2 ನಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಡಿತ್ತು. ಇದೀಗ ಈ ವಿಷಯದ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

Urvashi Rautela is the heroine in Kantara 2, the film team clarified.
Image Credit: instagram

ಕಾಂತಾರ 2 ನಲ್ಲಿ ನಟಿಸಲಿರುವ ಊರ್ವಶಿ ರೌಟೇಲಾ
ಕಾಂತಾರ 2 ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದಲ್ಲಿ ನಟಿಸಿರುವ ನಟಿ ಊರ್ವಶಿ ರೌಟೇಲಾ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದ್ದವು. ಕಾಂತಾರ ಚಿತ್ರದಲ್ಲಿ ನಟಿ ನಟಿಸುವ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ರಿಷಬ್ ಶೆಟ್ಟಿ (Rishab Shetty) ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ ಎನ್ನುವ ವದಂತಿ ಹರಿದಾಡಿತ್ತು.

The film team clarified that Urvashi Rautela is not an actress in Kantara 2
Image Credit: instagram

ಕಾಂತಾರ 2 ಎಂಬ ಹ್ಯಾಶ್ ಟ್ಯಾಗ್ ಜೊತೆಗೆ ರಿಷಬ್ ಹೆಸರು ಮತ್ತು ಹೊಂಬಾಳೆ ಫಿಲ್ಮ್ಸ್ ಅನ್ನು ನಮೂದಿಸಿ, ಕಾಂತಾರ 2 ಲೋಡಿಂಗ್ ಎಂದು ರಿಷಬ್ ಶೆಟ್ಟಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಟಿಯ ಪೋಸ್ಟ್ ನಿಂದಾಗಿ ಊರ್ವಶಿ ರೌಟೇಲಾ ಕಾಂತಾರ 2 ನಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಪ್ರೊಡಕ್ಷನ್ ಹೌಸ್ ಸಂಬಂದಿತ ಮೂಲದಿಂದ ಮಾಹಿತಿ ದೊರಕಿದೆ.

Join Nadunudi News WhatsApp Group

Kantara team says Urvashi Rautela acting in Kantara 2 is fake news
Image Credit: instagram

ಕಾಂತಾರ 2 ನಲ್ಲಿ ಊರ್ವಶಿ ರೌಟೇಲಾ ನಟಿಸಲ್ಲ
“ಕಾಂತಾರ 2 ನಲ್ಲಿ ಊರ್ವಶಿ ರೌಟೇಲಾ ನಟಿಸಲಿದ್ದಾರೆ ಎನ್ನುವ ವಿಚಾರ ಶುದ್ಧ ಸುಳ್ಳು. ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಆಧಾರರಹಿತವಾಗಿದೆ. ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ಇದ್ದ ಹೋಟೆಲ್ ನಲ್ಲಿ ಊರ್ವಶಿ ಸಹ ಇದ್ದರು.

ಈ ವೇಳೆ ರಿಷಬ್ ಅವರನ್ನು ಭೇಟಿ ಮಾಡಿಸುವಂತೆ ಊರ್ವಶಿ ಕೇಳಿದ್ದರು. ಅದಕ್ಕೆ ಅಷ್ಟೇ ರಿಷಬ್ ಒಪಿದ್ದಾರೆಲ್. ಊರ್ವಶಿ ಅವರನ್ನು ಭೇಟಿಯಾಗಿದ್ದಾರೆ. ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ಊರ್ವಶಿ ಶೇರ್ ಮಾಡಿಕೊಂಡಿದ್ದಾರೆ” ಎಂದು ಮೂಲಗಳಿದ ತಿಳಿದುಬಂದಿದೆ.

Join Nadunudi News WhatsApp Group