Saptami Gowda Interview: ಹೆಣ್ಣು ಮಕ್ಕಳಿಗೆ ಬದುಕಿನ ನೀತಿ ಪಾಠ ಮಾಡಿದ ಕಾಂತಾರ ಬೆಡಗಿ ಸಪ್ತಮಿ ಗೌಡ.
Actress Saptami Gowda Interview : ಕಾಂತಾರ (Kantara) ಬೆಡಗಿ ಸಪ್ತಮಿ ಗೌಡ (Saptami Gowda) ಇದೀಗ ತಮ್ಮ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.
ಈ ನಡುವೆ ನಟಿ ಮಹಿಳಾ ದಿನಾಚರಣೆಯ ಪ್ರಯುಕ್ತ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ಸಿನಿಮಾರಂಗದಲ್ಲಿ ಹೆಣ್ಣು ಮಕ್ಕಳ ಸ್ಥಾನ ಮಾನದ ಬಗ್ಗೆ ನಟಿ ಸಪ್ತಮಿ ಗೌಡ ಮಾತನಾಡಿದ್ದಾರೆ.
ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದ ನಟಿ ಸಪಾಟಮಿ ಗೌಡ
ಸಂತೋಷ್ ಆನಂದ ರಾಮ್ ನಿರ್ದೇಶನದಲ್ಲಿ ಯುವರಾಜ್ ಕುಮಾರ್ ಅವರ ಮೊದಲ ಚಿತ್ರ ಯುವ ಮೂಡಿಬರಲಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ. ಯುವ- ಸಪ್ತಮಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಬರಲಿದೆ.
ಇನ್ನು ಈ ಚಿತ್ರಕ್ಕಾಗಿ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮಾಡುತಿದ್ದೇನೆ, ಸಂತೋಷ್ ಆನಂದ ರಾಮ್ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿರುವ ನನಗೆ ಕುಷಿತ ಸಂಗತಿಯಾಗಿದೆ. ಪಾತ್ರಕ್ಕೆ ಮಾನಸಿಕವಾಗಿ ಸಿದ್ಧಳಾಗಿದ್ದೇನೆ, ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ ಎಂದು ನಟಿ ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಮಹಿಳಾ ಪ್ರದಾನ ಸಿನಿಮಾ ಸಿಕ್ಕರೆ ನೀವು ನಟಿಸುತ್ತೀರಾ ಎನ್ನುವ ಪ್ರಶ್ನೆಗೆ ನಟಿ ಉತ್ತರಿಸಿದ್ದಾರೆ. ಸ್ಕ್ರಿಪ್ಟ್ ಚೆನ್ನಾಗಿದ್ದರೆ ಖಂಡಿತ ನಟಿಯಸುತ್ತೇನೆ. ಒಬ್ಬ ಕಲಾವಿದೆಯಾಗಿ ಈ ಥರದ ಪಾತ್ರಗಳನ್ನು ಮಾತ್ರ ಮಾಡೋದು ಎಂದು ನನಗೆ ನಾನು ಯಾವತ್ತೂ ರಿಸ್ಟ್ರಿಕ್ಷನ್ ಹಾಕಿಕೊಂಡಿಲ್ಲ ಎಂದಿದ್ದಾರೆ.
ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾಗಿರಬೇಕು ಎಂದ ನಟಿ
ನಮ್ಮ ಮನೆಯಲ್ಲಂತೂ ನನ್ನನು ಬಹಳ ಸ್ಟ್ರಾಂಗ್ ಆಗಿಯೇ ಬೆಳೆಸಿದ್ದಾರೆ. ಒನ್ನೊಬ್ಬರಿಗೆ ಹಾರ್ಟ್ ಮಾಡದ ಹಾಗೆ ಬದುಕಬೇಕು ಅನ್ನೋದನ್ನಷ್ಟೇ ಪದೇ ಪದೇ ಹೇಳಿದ್ದಾರೆ. ಆದರೂ ನನಗನಿಸೋದು ನಮ್ಮ ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಿರಬೇಕು.
ತಿಂಗಳಿಗೆ ಸಾವಿರ ರೂ. ಸಿಗಲಿ, ಲಕ್ಷ ರೂ. ಸಿಗಲಿ ಆರ್ಥಿಕ ಸ್ವಾವಲಂಬನೆ ಅವಳಿಗೆ ಸ್ವಾಭಿಮಾನಿಯಾಗಿ ಬದುಕೋದಕ್ಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಹೆಣ್ಣು ಮಕ್ಕಳು ಕಾರ್ಯ ಪ್ರವರ್ತರಾಗಬೇಕು ಎಂದು ನಟಿ ಮಾತನಾಡಿದ್ದಾರೆ.