Ads By Google

Kantara: ದೇಶದಲ್ಲಿ ಇನ್ನೊಂದು ಇತಿಹಾಸ ಸೃಷ್ಟಿಮಾಡಿದ ಕಾಂತಾರ, ಈ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ.

Kantara movie made a huge collection

Image Credit: instagram

Ads By Google

Kantara Movie Budget: ಕನ್ನಡದ ಕಾಂತಾರ ಸಿನಿಮಾ ಬಿಡುಗಡೆಯಾಗಿ ಹೆಚ್ಚು ಜನಪ್ರಿಯತೆ ಪಡೆದಿದೆ. ಕಾಂತಾರ ಸಿನಿಮಾದಿಂದ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಕಾಂತಾರ ಸಿನಿಮಾ ಕನ್ನಡದ ಹೆಮ್ಮೆಯ ಸಿನಿಮಾವಾಗಿದೆ.

ಈ ಸಿನಿಮಾ ಎಲ್ಲ ಭಾಷೆಯಲ್ಲಿಯೂ ತೆರೆ ಕಂಡು ಅಪಾರ ಮೆಚ್ಚಿಗೆ ಪಾತ್ರವಾಗಿದೆ. ಕಾಂತಾರ ಸಿನಿಮಾ ಮೊದಲನೇ ಭಾಗ ನೋಡಿದ ಜನರು ಎರಡನೇ ಭಾಗದ ವೀಕ್ಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

Image Credit: Bookmyshow

ದಾಖಲೆಯ ಕಾಂತಾರ ಸಿನಿಮಾ
ಕಾಂತಾರ ಸಿನಿಮಾದ ಎರಡನೇ ಭಾಗದ ಶೂಟಿಂಗ್ ಶುರು ಮಾಡಲು ಸಿದ್ಧತೆ ನಡೆಯುತ್ತಿದೆ. ಕಾಂತಾರ 2 ಸಿನಿಮಾ ಬಿಡುಗಡೆಗಾಗಿ ಹೆಚ್ಚಿನ ಜನರು ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ವರ್ಷ ಅಂದರೆ 2022 ರಲ್ಲಿ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಈ ಚಿತ್ರದ ಬಜೆಟ್ ತುಂಬಾ ಕಡಿಮೆಯಾಗಿತ್ತು ಮತ್ತು ಕಥೆಯು ತುಂಬಾ ವಿಶೇಷವಾಗಿತ್ತು. ಈ ಚಿತ್ರವು ಅನೇಕ ಚಿತ್ರಗಳನ್ನು ಸೋಲಿಸಿದೆ. ಕಾಂತಾರ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಿಗೆ ಹಿಟ್ ಆಗಿದೆ.

ಕಾಂತಾರ ಸಿನಿಮಾ ಕಥೆ
ಕಾಂತಾರ ಸಿನಿಮಾ ಶೂಟಿಂಗ್ ಆಗಿದ್ದು ದಟ್ಟ ಕಾಡಿನಲ್ಲಿ. ಈ ಚಿತ್ರದ ಕಥೆ ಕಾಡಿನಲ್ಲಿ ಶಾಂತಿಯನ್ನು ಹುಡುಕುತ್ತ ಅಲೆದಾಡುವ ರಾಜನಿಗೆ ಸಂಬಂಧಿಸಿದೆ. ಕಾಡಿನಲ್ಲಿ ಕಲ್ಲಿನ ರೂಪದಲ್ಲಿ ದೇವರನ್ನು ಕಂಡ ರಾಜನಿಗೆ ಶಾಂತಿಯ ಅನುಭವ ಆಗುತ್ತದೆ.

ದೈವವನ್ನು ತನಾಗೆ ನೀಡಲು ಗ್ರಾಮಸ್ಥರನ್ನು ಕೇಳಿದಾಗ ದೈವ ಒಂದು ಷರತ್ತು ಹಾಕುತ್ತದೆ ತನ್ನ ಕೂಗು ಎಲ್ಲಿಯವರೆಗೂ ಕೇಳುತ್ತೋ ಅಲ್ಲಿಯವರೆಗಿನ ಜಾಗ ಊರ ಜನರಿಗೆ ಸೇರಬೇಕು ಎನ್ನುತ್ತದೆ. ಈ ಮಾತಿನ ಮೇಲೆ ಸಿನಿಮಾ ಶುರುವಾಗುತ್ತದೆ. ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಕಥೆಯನ್ನು ತೆರೆಗೆ ತಂದಿದ್ದಾರೆ.

Image Credit: Mathrubhumi

ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ
ಕಾಂತಾರ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರಕ್ಕೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ನಂತರ ಹಿಂದಿ ಭಾಷೆಯಲ್ಲಿ ಸಹ ಚಿತ್ರ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ಕಾಂತಾರ ಚಿತ್ರದಲ್ಲಿ ಸ್ವತಃ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಕಾಂತಾರ ಸಿನಿಮಾದ ಎಲ್ಲ ದೃಶ್ಯಗಳು ಜನರನ್ನು ಬೆಚ್ಚಿಬಿಳಿಸುವಂತಿದ್ದವು.

ಈ ಚಿತ್ರದ ಎಲ್ಲ ದೃಶ್ಯಗಳನ್ನು ಕೂಡ ಕಾಡಿನಲ್ಲಿಯೇ ತೋರಿಸಲಾಗಿದೆ. ಈ ಸಿನಿಮಾ ಕೇವಲ 16 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್ ನ ಧೂಳಿಪಟ ಮಾಡಿತ್ತು. ಈ ಸಿನಿಮಾ ಭಾರತದಲ್ಲಿ ಸುಮಾರು 300 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಕಾಂತಾರ ಸಿನಿಮಾದ ಹೆಸರು ಕೂಡ ಕಡಿಮೆ ಬಜೆಟ್ ಬ್ಲಾಕ್ ಬಸ್ಟರ್ ಗಳ ಪಟ್ಟಿಯಲ್ಲಿ ಸೇರಿದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in