Sapthami Gowda Father: ಅಪ್ಪನ ಜೊತೆ ಫೋಟೋ ತೆಗೆಸಿಕೊಂಡ ಕಾಂತಾರ ಬೆಡಗಿ, ಫೋಟೋಗಳು ವೈರಲ್.

Sapthami Gowda Father: ಕಾಂತಾರ ಸಿನಿಮಾದಲ್ಲಿ ನಟಿಸಿರುವ ಸಪ್ತಮಿ ಗೌಡ (Sapthami Gowda) ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಸಪ್ತಮಿ ಗೌಡ ಕಾಂತಾರ (Kantara) ಸಿನಿಮಾದಲ್ಲಿ ನಟಿಸಿ ಹಲವಾರು ಜನರ ಮೋಡಿಗೆ ಕಾರಣವಾದರು.

ಕಾಂತಾರ ಚೆಲುವೆ ಸಪ್ತಮಿ ಗೌಡ ಹೊಸ ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡ ಸಪ್ತಮಿಗೆ ಕಾಂತಾರ ಯಶಸ್ಸಿನ ಬಳಿಕ ಸಿನಿಮಾ ರಂಗದಲ್ಲಿ ಸಾಕಷ್ಟು ಆಫರ್ ಗಳು ಬರುತ್ತಿದೆ. ಇದೀಗ ನಟಿ ಸಪ್ತಮಿ ತನ್ನ ಅಪ್ಪನ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ.

Kantara Bedagi took a photo with her father, the photos went viral.
Image Source: India Today

ಅಪ್ಪನ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ ಸಪ್ತಮಿ
ಕಾಂತಾರ ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ ಅವರು ತಂದೆಯ ಜೊತೆ ಒಂದಷ್ಟು ಫೋಟೋಗಳನ್ನು ಇನ್​ಸ್ಟಾಗ್ರಾಮ್ (Instagram)​ನಲ್ಲಿ ಶೇರ್ ಮಾಡಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಂದೆಯೊಂದಿಗೆ ಸಪ್ತಮಿ ಗೌಡ ಅವರೂ ಸಾಥ್ ಕೊಟ್ಟಿದ್ದು ಅಪ್ಪ ಮಗಳ ಬೆಸ್ಟ್ ಮೊಮೆಂಟ್ಸ್ ಫೋಟೋ ಪೋಸ್ಟ್ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಪ್ತಮಿ ಹಾಗು ಅವರ ತಾಯಿ ಶಾಂತ ಮಾದಯ್ಯ ಅವರು ಎಸ್ ಕೆ ಉಮೇಶ್ (SK Umesh) ಅವರ ಈ ಸ್ಪೆಷಲ್ ಮೊಮೆಂಟ್ ನಲ್ಲಿ ಜೊತೆಗಿದ್ದರು. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸಿರುವ ಸಪ್ತಮಿ ಗೌಡ ಅವರ್ ತಂದೆ ಎಸ್. ಕೆ. ಉಮೇಶ್ ದೊಡ್ಡಿ ಅವರು ಮೂಲತಃ ರಾಮನಗರ ಜಿಲ್ಲೆಯ ಸೋರೆಕಾಯಿ ದೊಡ್ಡಿಯವರು.

Kantara Bedagi took a photo with her father, the photos went viral.
Image Source: Instagram

 

View this post on Instagram

 

A post shared by Sapthami Gowda ???? (@sapthami_gowda)

Join Nadunudi News WhatsApp Group

ಸಪ್ತಮಿ ಫೋಟೋಗೆ ಕಾಮೆಂಟ್ ಮಾಡಿದ ಅಭಿಮಾನಿಗಳು
ಸಪ್ತಮಿ ಗೌಡ ಶೇರ್ ಮಾಡಿರುವ ಫೋಟೋಗಳಿಗೆ ಕಾಮೆಂಟ್ ಮಾಡಿದ್ದ ನೆಟ್ಟಿಗರು ಅತ್ತೆ ಮಾವನನ್ನು ತೋರಿಸಿದಕ್ಕೆ ಧನ್ಯವಾದಗಳು ಎಂದು ಕೀಟಲೆ ಮಾಡಿದ್ದಾರೆ.

ಇನ್ನು ಕೆಲವರು ಮಾವ ಪೊಲೀಸ್. ಇನ್ನು ಮುಂದೆ ಹುಷಾರಾಗಿರಿ ಎಂದು ತಮಾಷೆ ಮಾಡಿದ್ದಾರೆ. ನಟಿಯ ಈ ಫೋಟೋಗಳು ಅಭಿಮಾನಿಗಳಿಗೆ ಸಕತ್ ಇಷ್ಟ ಆಗಿದೆ. ಅಭಿಮಾನಿಗಳು ಈ ಫೋಟೋಗಳಿಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ.

Join Nadunudi News WhatsApp Group