Sapthami Gowda Trend: ಟ್ರೆಂಡ್ ಆಯಿತು ಕಾಂತಾರ ಸಪ್ತಮಿ ಗೌಡ ಮೂಗುತಿ, ಟ್ರೆಂಡ್ ಬಗ್ಗೆ ಮಾತನಾಡಿದ ಸಪ್ತಮಿ ಗೌಡ.

Actress Sapthami Gowda Nose Ring: ಕಾಂತಾರ (Kantara) ಸಿನಿಮಾದ ಯಶಸ್ಸಿನ ನಂತರ ಈ ಸಿನಿಮಾದ ನಾಯಕಿ ಸಪ್ತಮಿ ಗೌಡ (Sapthami Gowda)ಸುದ್ದಿಯಲ್ಲಿದ್ದಾರೆ. ಕಾಂತಾರ ಸಿನಿಮಾದಲ್ಲಿ ನಟಿಸಿ ಕರುನಾಡ ಜನರ ಮನ ಗೆದ್ದ ನಟಿ ಸಪ್ತಮಿ ಗೌಡ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.

ನಟಿ ಸಪ್ತಮಿ ಗೌಡ ತಮ್ಮ ನಟನೆಯ ಮೂಲಕ ಸಾಕಷ್ಟು ಜನರನ್ನು ಮೋಡಿ ಮಾಡಿದ್ದು ಕಾಂತಾರ ಸಿನಿಮಾದ ನಂತರ ಬೇರೆ ಬೇರೆ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.ಕಾಂತಾರ ಚೆಲುವೆ ನಟಿ ಸಪ್ತಮಿ ಗೌಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು ಸಹ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಆಗಿದ್ದಾರೆ.

Sapthami Gowda nose trend
Image Source: India Today

 

ಮೂಗುತಿ ಸುಂದರಿ ನಟಿ ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ ಮೂಗುತಿ ಸುಂದರಿ ಅಂತಾನೆ ಹೆಸರುವಾಸಿ ಆಗಿರುವ ನಟಿ. ಕಾಂತಾರ ಸಿನಿಮಾಗಾಗಿ ಮೂಗಿನ ಎರಡೂ ಕಡೆ ಚುಚ್ಚಿಸಿ ಮೂಗುತಿ ಧರಿಸಿದೆ ಎಂದು ನಟಿ ಸಪ್ತಮಿ ಗೌಡ ಹೇಳಿದ್ದಾರೆ. ಇದೀಗ ಈ ಫ್ಯಾಷನ್‌ ಯಾವ ಮಟ್ಟಿಗೆ ಟ್ರೆಂಡ್‌ ಸೆಟ್‌ ಆಗಿದೆ ಎಂದರೆ ನನಗೆ ಹೆಮ್ಮೆಯೆನಿಸುತ್ತದೆ.

Sapthami Gowda nose trend
Image Source: India Today

ನಮ್ಮ ಸಂಸ್ಕೃತಿಯ ಟ್ರೆಡಿಷನಲ್‌ ಆಭರಣ ನನ್ನಿಂದ ಮರುಹುಟ್ಟು ಪಡೆದಿರುವುದಕ್ಕೆ ಖುಷಿಯೆನಿಸುತ್ತದೆ. ಎಲ್ಲಿ ಹೋದರೂ ನನ್ನ ಮೂಗುತಿ ಪ್ರೇಮದ ಬಗ್ಗೆಯೇ ಜನ ಕೇಳುತ್ತಾರೆ, ಮಾತನಾಡುತ್ತಾರೆ. ಟ್ರೆಂಡ್‌ ಸೆಟ್ಟರ್‌ ಆಗಿರುವುದಕ್ಕೆ ಸಂತಸವಾಗಿದೆ ಎಂದಿದ್ದಾರೆ.

Join Nadunudi News WhatsApp Group

Sapthami Gowda nose trend
Image Source: India Today

ಕಾಂತಾರ ಚೆಲುವೆ ನಟಿ ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ ಕಾಂತಾರ ಸಿನಿಮಾದಲ್ಲಿ ಎರಡು ಕಡೆ ಮೂಗು ಚುಚ್ಚಿಸಿ ಮೂಗುತಿ ಧರಿಸಿದರು. ಕಾಂತಾರ ಚೆಲುವೆ ಸಪ್ತಮಿ ಗೌಡ ಅವರಿಗೆ ಈ ರೀತಿಯಾಗಿ ಅವರಿಗೆ ಮೂಗುತಿ ಸುಂದರಿ ಎಂದು ಕರೆಯುತ್ತಾರೆ.

ನಟಿ ಸಪ್ತಮಿ ಗೌಡ ಕಾಂತಾರ ಸಿನಿಮಾದಲ್ಲಿ ಧರಿಸಿದ ಮೂಗುತಿ ಈಗ ಟ್ರೆಂಡ್ ಆಗಿದೆ. ಇದೀಗ ಎಲ್ಲ ಹುಡುಗಿಯರು ಸಪ್ತಮಿ ಗೌಡ ಅವರು ಧರಿಸಿದ ರೀತಿಯಾಗಿ ಮೂಗುತಿಯನ್ನು ಧರಿಸುತ್ತಿದ್ದಾರೆ.

Sapthami Gowda nose trend
Image Source: India Today

Join Nadunudi News WhatsApp Group