Karmika Card: ರಾಜ್ಯದ ಎಲ್ಲಾ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ 2 ಲಕ್ಷ ರೂ ಉಚಿತ, ಇಂದೇ ಅರ್ಜಿ ಸಲ್ಲಿಸಿ.

ರಾಜ್ಯದ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಎರಡು ಲಕ್ಷ ಸಹಾಯಧನ ಘೋಷಣೆ ಮಾಡಿದ ಸರ್ಕಾರ.

Karmika Card Benefits: ಸದ್ಯ ರಾಜ್ಯದಲ್ಲಿ ತನ್ನ ಅಧಿಕಾರವನ್ನ ಸ್ವೀಕಾರ ಮಾಡಿರುವ ಕಾಂಗ್ರೆಸ್ ಸರ್ಕಾರ ಜನರ ಮೆಚ್ಚುಗೆಗೆ ಪಾತ್ರರಾಗುವ ಕೆಲಸವನ್ನ ಮಾಡುತ್ತಿದೆ ಎಂದು ಹೇಳಬಹುದು. ಹೌದು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಐದು ಗ್ಯಾರೆಂಟಿಗಳನ್ನ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಈಗ ಐದು ಗ್ಯಾರೆಂಟಿಗಳನ್ನ ಜಾರಿಗೆ ತರುವ ಕೆಲಸವನ್ನ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಈಗಾಗಲೇ ಮೂರೂ ಯೋಜನೆಯನ್ನ ಯಶಸ್ವಿಯಾಗಿ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಈಗ ರಾಜ್ಯದ ಎಲ್ಲಾ ಕಾರ್ಮಿಕರಿಗೆ ಇನ್ನೊಂದು ಯೋಜನೆಯನ್ನ ಜಾರಿಗೆ ತರುವುದರ ಮೂಲಕ ಕಾರ್ಮಿಕರ ಮೆಚ್ಚುಗೆಗೆ ಕಾರಣವಾಗಿದೆ.

Karmika Card Benefits
Image Credit: Dvara

ರಾಜ್ಯದ ಕಾರ್ಮಿಕರಿಗೆ ಹೊಸ ಯೋಜನೆ ಜಾರಿಗೆ
ಹೌದು ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಎರಡು ಲಕ್ಷ ರೂಪಾಯಿ ಸಹಾಯಧನ ಕೊಡುವಂತಹ ಯೋಜನೆಯನ್ನ ಜಾರಿಗೆ ತಂದಿದೆ. ಹೌದು ಕಟ್ಟಡ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದ ಹೊಸ ಯೋಜನೆಯನ್ನ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಕಾರ್ಮಿಕರಿಗೆ 2 ಲಕ್ಷ ರೂಪಾಯಿಗಳ ವೈದ್ಯಕೀಯ ನೆರವನ್ನ ನೀಡಲು ಮುಂದಾಗಿದೆ. ಎಲ್ಲಾ ಕಟ್ಟಡ ಕಾರ್ಮಿಕರು ರಾಜ್ಯ ಸರ್ಕಾರದ ಈ ವೈದ್ಯಕೀಯ ನೆರವನ್ನ ಪಡೆದುಕೊಳ್ಳಬೇಕು ಅನ್ನುವುದು ಸರ್ಕಾರದ ಆಶಯ ಕೂಡ ಆಗಿದೆ.

ಹಣ ಪಡೆದುಕೊಳ್ಳಲು ಏನು ಮಾಡಬೇಕು
ಹೌದು ಕಾರ್ಮಿಕರು ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ಎಲ್ಲಾ ದಿನಗಳ ಚಿಕಿತ್ಸ ವೆಚ್ಚದ ಬಿಲ್ಲುಗಳನ್ನಅರ್ಜಿ ಸಲ್ಲಿಸಿವುವಾಗ ನೀಡಬೇಕಾಗುತ್ತದೆ. ಇನ್ನು ಅದರ ಜೊತೆಗೆ ಮಂಡಳಿ ನೀಡುವ ಗುರುತಿನ ಚೀಟಿ ಅಥವಾ ಸ್ಮಾರ್ಟ್ ಕಾರ್ಡ್ ಅನ್ನು ಅರ್ಜಿ ಜೊತೆ ನೀಡುವುದರ ಜೊತೆಗೆ ಬ್ಯಾಂಕ್ ಖಾತೆಯ ವಿವರವನ್ನ ಕೂಡ ನೀಡಲಾಗುತ್ತದೆ. ಇನ್ನು ಕಾರ್ಮಿಕರು ಖಾಸಗಿ ಅಥವಾ ಸರ್ಕಾರೀ ಆಸ್ಪತ್ರೆಯಲ್ಲಿ ಕನಿಷ್ಠ ಎರಡು ದಿನ ದಾಖಲಾಗಿರುವುದು ಅಗತ್ಯ ಆಗಿರುತ್ತದೆ.

The government has announced a subsidy of two lakhs for all the construction workers of the state.
Image Credit: Newindianexpress

ಎಷ್ಟು ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು
ಕಾರ್ಮಿಕರು ಆಸ್ಪತ್ರೆಯಿಂದ ಬಿಡುಗಡೆಯಾದ ಆರು ತಿಂಗಳ ಒಳಗಾಗಿ ಅರ್ಜಿ ಸಲ್ಲಿಸುವುದು ಅಗತ್ಯ. ನಿಮ್ಮ ಅರ್ಜಿಯನ್ನು ಕಾರ್ಮಿಕ ನಿರೀಕ್ಷಕರು ಒಮ್ಮೆ ಪರಿಶೀಲಿಸಿ ಅದಕ್ಕೆ ಒಪ್ಪಿಗೆ ನೀಡಬೇಕು. ಇನ್ನು ಇದಾದ ನಂತರ ಕಾರ್ಮಿಕ ಅಧಿಕಾರಿಗಳಿಂದ ಪರಿಶೀಲನೆ ಮತ್ತು ಅನುಮೋಧನೆ ದೊರೆತರೆ ಎರಡು ಲಕ್ಷದ ತನಕ ವೈದ್ಯಕೀಯ ನೆರವನ್ನ ಪಡೆದುಕೊಳ್ಳಬಹುದು.

Join Nadunudi News WhatsApp Group

ಸರ್ಕಾರದ ಈ ಯೋಜನೆ ಸಾಕಷ್ಟು ಕಾರ್ಮಿಕರಿಗೆ ಸಹಾಯಕವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಎಲ್ಲಾ ಕಾರ್ಮಿಕರು ಇನ್ನುಮುಂದೆ ಈ ಯೋಜನೆಯ ಅಡಿಯಲ್ಲಿ ಎರಡು ಲಕ್ಷದ ತನಕ ಉಚಿತ ವೈದ್ಯಕೀಯ ನೆರವು ಪಡೆದುಕೊಳ್ಳಬಹುದು.

Join Nadunudi News WhatsApp Group