karnataka gov post metric and pre matric scholarship: ಬಡ ಮತ್ತು ಮಧ್ಯಮ ಕುಟುಂಬದ ಮಕ್ಕಳಿಗೆ ಕರ್ನಾಟಕ ರಾಜ್ಯ ಸರ್ಕಾರ ಈಗ ಗುಡ್ ನ್ಯೂಸ್ ನೀಡಿದೆ. ಕರ್ನಾಟಕ ರಾಜ್ಯ ಸರ್ಕಾರ ಈಗ 1 ರಿದ 10ನೇ ತರಗತಿ ವರೆಗಿನ ಮಕ್ಕಳಿಗೆ ವಿದ್ಯಾರ್ಥಿವೇತನ ಬಿಡುಗಡೆ ಮಾಡಿದ್ದು ಮಕ್ಕಳು ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಹಾಗಾದರೆ 1 ರಿಂದ 10ನೇ ತರಗತಿ ಮಕ್ಕಳಿಗೆ ಬಿಡುಗಡೆಯಾಗಿರುವ ವಿದ್ಯಾರ್ಥಿವೇತನ ಯಾವುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೇಕಾಗಿರುವ ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಸರ್ಕಾರದಿಂದ 2025 ರ ವರ್ಷದ ವಿದ್ಯಾರ್ಥಿವೇತನ
ಕರ್ನಾಟಕ ರಾಜ್ಯ ಸರ್ಕಾರ ಈಗ ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ SC/ST ಮತ್ತು ಇತರ ಹಿಂದುಳಿದ ವರ್ಗದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಿಡುಗಡೆ ಮಾಡಿದೆ. ಈ ವಿದ್ಯಾರ್ಥಿವೇತನವು ಪ್ರೀಮ್ಯಾಟ್ರಿಕ್ (1-10ನೇ ತರಗತಿ) ಮತ್ತು ಪೋಸ್ಟ್‌ಮ್ಯಾಟ್ರಿಕ್ ಯೋಜನೆಗಳಡಿ ಬರುತ್ತದೆ. ಶಾಲಾ ಮಕ್ಕಳು ಈ ವಿದ್ಯಾರ್ಥಿವೇತನ ಬಳಸಿಕೊಂಡು ಶಾಲಾ ಸಾಮಗ್ರಿ, ಪರೀಕ್ಷಾ ಶುಲ್ಕಗಳು ಮತ್ತು ಇತರ ಖರ್ಚುಗಳನ್ನು ನಿಭಾಯಿಸಿಕೊಳ್ಳಬಹುದು.
ಯೋಜನೆಗೆ ಯಾರು ಅರ್ಹರು ಮತ್ತು ಯೋಜನೆಯ ಷರತ್ತುಗಳು
* ಸರ್ಕಾರಿ ಅಥವಾ ಸಹಾಯಕ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇದ್ದವರು ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
*ಕರ್ನಾಟಕದ ನಿವಾಸಿಯಾಗಿರುವುದು ಕಡ್ಡಾಯ
* ಸರ್ಕಾರೀ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು.
* ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯ.
* OBC ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು
ವಿದ್ಯಾರ್ಥಿವೇತನ ಮೊತ್ತ ಮತ್ತು ಅರ್ಜಿ ಸಲ್ಲಿಸುವ ವಿಧಾನ
SC/ST ವಿದ್ಯಾರ್ಥಿಗಳಿಗೆ 1ರಿಂದ 10ನೇ ತರಗತಿಯಲ್ಲಿ ₹1,500ರಿಂದ ₹3,000 ವರೆಗೆ ವಿದ್ಯಾರ್ಥಿವೇತನ ಪಡೆದುಕೊಳ್ಳಬಹುದು. ಮಕ್ಕಳು ಅಗತ್ಯ ದಾಖಲೆಗಳ ಜೊತೆಗೆ SSP ಪೋರ್ಟಲ್‌ಗೆ (ssp.postmatric.karnataka.gov.in) ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ನೋಂದಣಿ ಮಾಡಿ, SSID ರಚಿಸಿ. ನಂತರ, ಆಧಾರ್, ಬ್ಯಾಂಕ್ ವಿವರಗಳು, ಜಾತಿ/ಆದಾಯ ಸನದಗಳನ್ನು ಅಪ್‌ಲೋಡ್ ಮಾಡಿ. ಶಾಲೆಯಿಂದ ಪರಿಶೀಲನೆಯ ನಂತರ, ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನ ಪಡೆದುಕೊಳ್ಳಬಹುದು. ಜನವರಿ 15 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

