Karnataka 2026 Public Holidays Complete Details: ಪ್ರತಿ ವರ್ಷದ ಹಾಗೆ 2026 ರ ವರ್ಷದ ಸರ್ಕಾರೀ ರಜೆಗಳ ವಿವರ ಬಿಡುಗಡೆ ಮಾಡಲಾಗಿದೆ. ಪ್ರತಿ ವರ್ಷದ ಹಾಗೆ 2026 ರ ವರ್ಷದಲ್ಲಿ ಸಾಕಷ್ಟು ಸರ್ಕಾರೀ ರಜೆಗಳು ಇದ್ದು ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ರಜೆಗಳು ಸೇರಿದೆ. 2026 ರ ವರ್ಷದಲ್ಲಿ ಒಟ್ಟಾರೆ 20 ದಿನಗಳ ಸರ್ಕಾರಿ ರಜೆಗಳು ಇರಲಿದ್ದು, ಇದರಲ್ಲಿ ರಾಷ್ಟ್ರೀಯ ಹಬ್ಬಗಳು, ನಾಡಹಬ್ಬಗಳು ಸೇರಿವೆ. ಹಾಗಾದರೆ 2026 ರ ವರ್ಷದಲ್ಲಿ ಯಾವ ಯಾವ ದಿನಗಳು ಸರ್ಕಾರೀ ರಜೆ ಇರಲಿದೆ ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
2026 ರಸರ್ಕಾರೀ ರಜೆಗಳ ಸಂಪೂರ್ಣ ಪಟ್ಟಿ
* ಜನವರಿ 15 (ಗುರುವಾರ) – ಮಕರ ಸಂಕ್ರಾಂತಿ
* ಜನವರಿ 26 (ಸೋಮವಾರ) – ಗಣರಾಜ್ಯೋತ್ಸವ
* ಮಾರ್ಚ್ 19 (ಗುರುವಾರ) – ಯುಗಾದಿ
* ಮಾರ್ಚ್ 21 (ಶನಿವಾರ) – ರಂಜಾನ್
* ಮಾರ್ಚ್ 31 (ಮಂಗಳವಾರ) – ಮಹಾವೀರ ಜಯಂತಿ
* ಏಪ್ರಿಲ್ 3 (ಶುಕ್ರವಾರ) – ಗುಡ್ ಫ್ರೈಡೇ
* ಏಪ್ರಿಲ್ 14 (ಮಂಗಳವಾರ) – ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
* ಏಪ್ರಿಲ್ 20 (ಸೋಮವಾರ) – ಬಸವಜಯಂತಿ / ಅಕ್ಷಯ ತೃತೀಯ
ಮೇ ತಿಂಗಳಿನಿಂದ ಜೂನ್ ವರೆಗೆ ರಜೆಗಳು
ಮೇ ಮತ್ತು ಜೂನ್‌ನಲ್ಲಿ ಕೆಲವು ಮುಖ್ಯ ಹಬ್ಬಗಳು ಬರುತ್ತವೆ. ಹಾಗಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ನಾವು ಕೆಲವು ವಿಶೇಷ ಸರ್ಕಾರೀ ರಜೆ ಕಾಣಬಹುದು.
* ಮೇ 1 (ಶುಕ್ರವಾರ) – ಮೇ ದಿನಾಚರಣೆ (ಕಾರ್ಮಿಕ ದಿನ)
* ಮೇ 28 (ಗುರುವಾರ) – ಬಕ್ರೀದ್
* ಜೂನ್ 26 (ಶುಕ್ರವಾರ) – ಮೊಹರಂ ಕಡೆಯ ದಿನ
ಆಗಸ್ಟ್‌ನಿಂದ ಡಿಸೆಂಬರ್ ವರೆಗೆ ಮುಖ್ಯ ರಜೆಗಳು
* ಆಗಸ್ಟ್ 15 (ಶನಿವಾರ) – ಸ್ವಾತಂತ್ರ್ಯ ದಿನ
* ಆಗಸ್ಟ್ 26 (ಬುಧವಾರ) – ಈದ್ ಮಿಲಾದ್
* ಸೆಪ್ಟೆಂಬರ್ 14 (ಸೋಮವಾರ) – ಗಣೇಶ ಚತುರ್ಥಿ
* ಅಕ್ಟೋಬರ್ 2 (ಶುಕ್ರವಾರ) – ಗಾಂಧೀಜಯಂತಿ
* ಅಕ್ಟೋಬರ್ 20 (ಮಂಗಳವಾರ) – ಮಹಾನವಮಿ / ಆಯುಧ ಪೂಜೆ
* ಅಕ್ಟೋಬರ್ 21 (ಬುಧವಾರ) – ವಿಜಯದಶಮಿ
* ನವೆಂಬರ್ 10 (ಮಂಗಳವಾರ) – ಬಲಿಪಾಡ್ಯಮಿ / ದೀಪಾವಳಿ
* ನವೆಂಬರ್ 27 (ಶುಕ್ರವಾರ) – ಕನಕದಾಸ ಜಯಂತಿ
* ಡಿಸೆಂಬರ್ 25 (ಬುಧವಾರ) – ಕ್ರಿಸ್ಮಸ್
ಈ ಸರ್ಕಾರೀ ರಜೆಯ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ. ಭಾನುವಾರ ಮತ್ತು ಎರಡನೆಯ ಶನಿವಾರ ಬರುವ ಹಬ್ಬದ ರಜಾ ದಿನಗಳನ್ನು ಈ ಪೆಟ್ಟಿಂದ ಹೊರಗಿಡಲಾಗಿದೆ. ಭಾನುವಾರ ಮತ್ತು ಎರಡನೆಯ ಶನಿವಾರ ಹೊರತುಪಡಿಸಿ 20 ಸರ್ಕಾರೀ ರಜೆಗಳನ್ನು ನಾವು 2026 ರ ವರ್ಷದಲ್ಲಿ ಕಾಣಬಹುದು. ಭಾನುವಾರ ಬರುವ ಹಬ್ಬದ ವಿವರವನ್ನು 2026 ರ ಕ್ಯಾಲೆಂಡರ್ ನಲ್ಲಿ ಕಾಣಬಹುದು. ಈ ರಜೆಯ ಹೊರತಾಗಿ ಸರ್ಕಾರೀ ನೌಕಕರು ಮತ್ತು ಕೆಲವು ನಿಗಮದ ಉದ್ಯೋಗಿಗಳು 21 ಪರಿಮಿತ ರಜೆಯನ್ನು ಕೂಡ ಪಡೆದುಕೊಳ್ಳಬಹುದು. ಆದರೆ ಪರಿಮಿತ ರಜೆ ತಗೆದುಕೊಳ್ಳಲು ಕೆಲವು ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

