2nd PUC Result: ಇಂದು 11 ಗಂಟೆಗೆ 2nd ಪಿಯುಸಿ ರಿಸಲ್ಟ್, ಹೀಗೆ ಚೆಕ್ ಮಾಡಿ ನಿಮ್ಮ ಫಲಿತಾಂಶ.
ಇಂದು ಬೆಳಿಗ್ಗೆ 11 ಘಂಟೆಗೆ ದ್ವಿತೀಯ PUC ಫಲಿತಾಂಶ ಪ್ರಕಟ ಆಗಲಿದೆ, ಈ ವಿಧಾನದ ಮೂಲಕ ಸುಲಭವಾಗಿ ಫಲಿತಾಂಶ ಚೆಕ್ ಮಾಡಿ.
2nd PUC Result Check: ಈಗಾಗಲೇ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆದು ಹೋಗಿದೆ. ಸಾಕಷ್ಟು ದಿನಗಳಿಂದ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯಾದ್ಯಂತ ಇಂದು 2022-23 ನೇ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.
ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ರಿಸಲ್ಟ್ ಪಡೆಯಬಹುದಾಗಿದೆ.
ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಇಷ್ಟು ದಿನ ಫಲಿತಾಂಶ ಪ್ರಕಟಣೆಗಾಗಿ ಕಾದಿದ್ದಾರೆ. ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸುದ್ದಿಗೋಷ್ಠಿ ಮಾಡಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ವೆಬ್ ಸೈಟ್ ನಲ್ಲಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.
ವಿದ್ಯಾರ್ಥಿಗಳು www.karresults.nic.in ವೆಬ್ ಸೈಟ್ ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಈ ಬಾರಿಯ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ 20 ಅಂಕಗಳಿಗೆ ಬಹು ಆಯ್ಕೆ ನೀಡಲಾಗಿತ್ತು. ಇಂದು ದ್ವಿತೀಯ ಪಿಯುಸಿ ಮಕ್ಕಳ ಫಲಿತಾಂಶವೂ ವರದಿಯಾಗಲಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ರಿಸಲ್ಟ್ ನೋಡುವುದು ಹೇಗೆ
ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ www.karresults.nic.in ಅಥವಾ https://kseab.karnataka.gov.in/ ಗೆ ಭೇಟಿ ನೀಡಿ ಇಲ್ಲಿ 2 nd ಪಿಯುಸಿ ಫಲಿತಾಂಶವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಹೊಸದೊಂದು ಪುಟ ತೆರೆಯುತ್ತದೆ. ನಂತರ ವಿದ್ಯಾರ್ಥಿಗಳು ಅವರ ರಿಜಿಸ್ಟರ್ ನಂಬರ್ ಅನ್ನು ನಮೂದಿಸಿ submit ಬಟನ್ ಕ್ಲಿಕ್ ಮಾಡಿ. ನಂತರ ಅವರ ಫಲಿತಾಂಶ ಕಾಣಿಸಿಕೊಳ್ಳುತ್ತದೆ.