Arecanut Price Karnataka: ಕರ್ನಾಟಕದಲ್ಲಿ ಅಡಿಕೆ ಬೆಳೆಗಾರರಿಗೆ ವರ್ಷದ ಕೊನೆಯಲ್ಲಿ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಅಡಿಕೆ ಮಾರಾಟ ಮಾಡಲು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾಯುತ್ತಿರುವವರಿಗೆ ಇದೀಗ ಸಿಹಿ ಸುದ್ದಿ ಲಭಿಸಿದೆ. ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯ ನಡುವೆ ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ ಆಗಿದೆ. ರಾಜ್ಯದ ಹಲವು ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಗಳು ಗಣೀಯವಾಗಿ ಏರಿಕೆ ಆಗಿದ್ದು, ಎಷ್ಟು ಏರಿಕೆ ಆಗಿದೆ ಮತ್ತು ಏರಿಕೆಗೆ ಕಾರಣ ಏನು ಅನ್ನುವ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
ಭರ್ಜರಿ ಏರಿಕೆ ಕಂಡ ಅಡಿಕೆ ಬೆಲೆ
ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ವಿಶೇಷವಾಗಿ ಡಿಸೆಂಬರ್ 2025 ರ ಕೊನೆಯ ವಾರದಲ್ಲಿ ಕ್ವಿಂಟಾಲ್ ಗೆ ರಾಶಿ ಅಡಿಕೆ ದರ 60,000 ರೂಪಾಯಿಗಳ ಗಡಿ ತಲುಪುತ್ತಿದೆ, ಕೆಲವು ಕಡೆ 70,000 ರೂಪಾಯಿ ಗಡಿ ದಾಟಿದೆ. ಕಳೆದ ಕೆಲವು ದಿನಗಳಿಂದ ಬೆಲೆಗಳಲ್ಲಿ ಸ್ಥಿರ ಏರಿಕೆ ಕಂಡುಬಂದಿದ್ದು, ಮುಂದೆಯೂ ಇದೇ ರೀತಿ ಮುಂದುವರಿಯುವ ನಿರೀಕ್ಷೆ ಇದೆ. ಅಡಿಕೆ ಬೆಲೆ ಉತ್ತಮವಾಗಿರುವ ಈ ಸಮಯದಲ್ಲಿ ರೈತರು ತಮ್ಮ ಉತ್ಪನ್ನವನ್ನು ಸೂಕ್ತ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುದು ಉತ್ತಮ, ಆದರೆ ಮಾರುಕಟ್ಟೆಯ ಏರಿಳಿತವನ್ನು ಗಮನಿಸುದು ಅಗತ್ಯ.
ಬೆಲೆ ಏರಿಕೆಗೆ ಕಾರಣ
- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣ
- ಉತ್ತಮ ಗುಣಮಟ್ಟದ ರಾಶಿ ಮತ್ತು ಇತರ ಜಾತಿಗಳಿಗೆ ಖರೀದಿದಾರರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
- ಕೊಳೆರೋಗ ಮತ್ತು ಇಳುವರಿ ಕುಸಿತದಿಂದಾಗಿ ಮಾರುಕಟ್ಟೆಯಲ್ಲಿ ಅಡಿಕೆ ಪೂರೈಕೆ ಕಡಿಮೆಯಾಗಿದ್ದು, ಇದು ಬೆಲೆ ಏರಿಕೆಗೆ ಕಾರಣವಾಗಿದೆ.
ಅಡಿಕೆಯ ವಿಧಗಳು
- ರಾಶಿ ಅಡಿಕೆ – ದೊಡ್ಡ ಗಾತ್ರದ, ಉತ್ತಮ ಗುಣಮಟ್ಟದ ಅಡಿಕೆ.
- ಚಾಲಿಗೆ ಅಡಿಕೆ – ಅಡಿಕೆ ಕತ್ತರಿಸುವಾಗ ಸಿಗುವ ಮಧ್ಯಮ ಗಾತ್ರದ ಅಡಿಕೆ.
- ಚಿಕಣಿ ಅಡಿಕೆ – ಸಣ್ಣ ಗಾತ್ರದ ಅಡಿಕೆ.
APMC ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರ
- ಹೊಳಲ್ಕೆರೆ ತಾಲೂಕಿನಲ್ಲಿ ರಾಶಿ ಜಾತಿಗೆ ಕನಿಷ್ಠ 51,899, ಗರಿಷ್ಠ 55,600, ಸರಾಸರಿ 54,283 ಆಗಿದೆ.
- ಹೊನ್ನಾಳಿ ತಾಲೂಕಿನಲ್ಲಿ ರಾಶಿ ಜಾತಿಗೆ ಸರಾಸರಿ 55,199 ಆಗಿದೆ.
- ತುಮಕೂರು ಜಿಲ್ಲೆಯಲ್ಲಿ ರಾಶಿ ಜಾತಿಗೆ ಕನಿಷ್ಠ 50,000, ಗರಿಷ್ಠ 53,200, ಸರಾಸರಿ 51,000 ಆಗಿದೆ.
- ಕುಮಟ ತಾಲೂಕಿನಲ್ಲಿ ಚಾಲಿ ಜಾತಿಗೆ ಸರಾಸರಿ 45,719 ಆಗಿದೆ.
- ಪುತ್ತೂರು ಮತ್ತು ಸುಳ್ಯದಲ್ಲಿ ಹೊಸ ಜಾತಿ ಮತ್ತು CQCA ಗೆ 30,000 ದಿಂದ 41,500 ರೂ. ನಡುವೆ ಇರುತ್ತದೆ.
- ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ 92,500 ರೂ. ಗಡಿ ದಾಟಿದೆ.
ಸಂತಸದಲ್ಲಿ ರೈತರು
ರಾಜ್ಯದಲ್ಲಿ ಅಡಿಕೆ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದ್ದು ಇದು ಅಡಿಕೆ ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ. ವರ್ಷಾಂತ್ಯದಲ್ಲಿ ಅಡಿಗೆ ಬೆಲೆ ಗಗನಕ್ಕೇರಿದ್ದು ಮುಂದಿನ ವರ್ಷ ಇನ್ನಷ್ಟು ಏರಿಕೆ ಆಗುವ ನಿರೀಕ್ಷೆಯಿದೆ. ರೈತರು ಅಡಿಕೆ ಬೆಳೆಗೆ ಬೇಡಿಕೆ ಹೆಚ್ಚಾಗಿದ್ದು ರೈತರು ಗುಣಮಟ್ಟದ ಹೆಚ್ಚಿನ ಗಮನ ಕೊಡಬೇಕಾಗಿದೆ.
ವಿಶೇಷ ಸೂಚನೆ: ನಾಡುನುಡಿ ಮಾದ್ಯಮದಲ್ಲಿ ಯಾವುದೇ ಸುಳ್ಳುಸುದ್ದಿ ಪ್ರಕಟಿಸಲಾಗುವುದಿಲ್ಲ. ಇದು ನೈಜ ಸುದ್ದಿಯಾಗಿದೆ ಮತ್ತು ರೈತರು ಹೆಚ್ಚಿನ ಬೆಲೆ ಮಾಹಿತಿಯನ್ನು ಮಾರುಕಟ್ಟೆಯಲ್ಲಿ ತಿಳಿದುಕೊಳ್ಳಬಹುದು.

