KASS Update: ರಾಜ್ಯ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ಸೆಪ್ಟೆಂಬರ್ 15ರೊಳಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ.

ಸೆಪ್ಟೆಂಬರ್ 15 ರೊಳಗೆ ಆರೋಗ್ಯ ಸಂಜೀವಿನಿ ಯೋಜನೆ ರಾಜ್ಯದಾದ್ಯಂತ ಜಾರಿಗೊಳಿಸುವುದಾಗಿ ಸುವರ್ಣ ಆರೋಗ್ಯ ಟ್ರಸ್ಟ್ ನ ನಿರ್ದೇಶಕಿ ಶ್ರೀಮತಿ ವಿನುತ್ ಪ್ರಿಯ ಮಾಹಿತಿ ನೀಡಿದ್ದಾರೆ.

Karnataka Arogya Sanjeevini Yojana: ರಾಜ್ಯ ಸರ್ಕಾರೀ ನೌಕರರಿಗೆ ಈಗಾಗಲೆ ಸಾಕಷ್ಟು ಯೋಜನೆಗಳನ್ನು ನೀಡಲಾಗಿದೆ. ಇನ್ನು ಸರ್ಕಾರೀ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಹಾಗೂ ಹಳೆಯ ಪಿಂಚಣಿ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ಸಿದ್ದರಾಮಯ್ಯ ಅವರು ಘೋಷಣೆ ಹೊರಡಿಸಿದ್ದಾರೆ. ಇದೀಗ ಸರ್ಕಾರೀ ನೌಕರರಿಗೆ ಹೊಸ ಯೋಜನೆ ಜಾರಿಗೊಳಿಸುವ ಕುರಿತು ಘೋಷಣೆ ಹೊರಡಿಸಿದ್ದಾರೆ. ಈ ಹೊಸ ಯೋಜನೆಯು ರಾಜ್ಯದ ಸರ್ಕಾರೀ ನೌಕರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.

Aarogya Sanjeevini Yojana will be implemented by September 15
Image Credit: Blog.ipleaders

ರಾಜ್ಯ ಸರ್ಕಾರೀ ನೌಕರರಿಗಾಗಿ ಆರೋಗ್ಯ ಸಂಜೀವಿನಿ ಯೋಜನಾ (Karnataka Arogya Sanjeevini Yojana) 
ರಾಜ್ಯ ಸರ್ಕಾರವು ಈಗಾಗಲೇ ಸರ್ಕಾರೀ ನೌಕರರಿಗಾಗಿ ವಿವಿಧ ಸೌಲಭ್ಯವನ್ನು ಜಾರಿಗೊಳಿಸಿದೆ. ಕರ್ನಾಟಕ ಸರ್ಕಾರ ಸರ್ಕಾರೀ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿ ಯೋಜನೆ (KASS) ಘೋಷಣೆ ಮಾಡಿದೆ. ಈ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಸಿದ್ದರಾಮಯ್ಯ ಅವರು ಈಗಾಗಲೇ ಮಾಹಿತಿ ನೀಡಿದ್ದಾರೆ. ಇದೀಗ ಕರ್ನಾಟಕ ಆರೋಗ್ಯ ಸಂಜೀವಿ ಯೋಜನೆ ಅನುಷ್ಠಾನದ ಬಗ್ಗೆ ಸುವರ್ಣ ಆರೋಗ್ಯ ಟ್ರಸ್ಟ್ ನ ಕಾರ್ಯಕಾರಿ ನಿರ್ದೇಶಕಿಯಾದ ಶ್ರೀಮತಿ ವಿನುತ್ ಪ್ರಿಯ ಮಾಹಿತಿ ನೀಡಿದ್ದಾರೆ.

ನಗದು ರಹಿತ ಆರೋಗ್ಯ ಸಂಜೀವಿನಿ ಯೋಜನಾ
ಕರ್ನಾಟಕ ರಾಜ್ಯ ಸರಕಾರಿ ನೌಕರರು(State Government Employees) ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರವು ರೂಪಿಸಿರುವ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕರ್ನಾಟಕ ಸರ್ಕಾರ ನೌಕರರ ನಿಯಮಗಳು 1963 ರ ಭಾಗವಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತದೆ. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಗಸ್ಟ್ 17 2021 ರ ಸರ್ಕಾರೀ ಆದೇಶದಂತೆ ಮಾರ್ಗಸೂಚಿಯನ್ನು ಹೊರಡಿಸಲಾಗುತ್ತದೆ ಎನ್ನಲಾಗಿದೆ.

Good news for state government employees
Image Credit: Policeresults

ಸೆಪ್ಟೆಂಬರ್ 15 ರೊಳಗೆ ಆರೋಗ್ಯ ಸಂಜೀವಿನಿ ಯೋಜನೇ ಜಾರಿ
ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಸೇವೆಯನ್ನು ಜಾರಿಗೆ ತರಲು ಖಾಸಗಿ ಆಸ್ಪತ್ರೆಗಳ ಜೊತೆ ನೂತನವಾಗಿ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾರ್ಯವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಶಾಟ್ಸ್) ಪ್ರಗತಿಯಲ್ಲಿದೆ.

ಸೆಪ್ಟೆಂಬರ್ 15 ರೊಳಗೆ ಆರೋಗ್ಯ ಸಂಜೀವಿನಿ ಯೋಜನೆ ರಾಜ್ಯದಾದ್ಯಂತ ಜಾರಿಗೊಳಿಸುವುದಾಗಿ ಶ್ರೀಮತಿ ವಿನುತ್ ಪ್ರಿಯ ಹೇಳಿಕೆ ನೀಡಿದ್ದಾರೆ. ನಗದು ರಹಿತ ಆರೋಗ್ಯ ಸೇವೆಯಿಂದ ರಾಜ್ಯದ ಅಂದಾಜು 5 ಲಕ್ಷಕ್ಕೂ ಹೆಚ್ಚಿನ ಸರ್ಕಾರೀ ನೌಕರರು ಮತ್ತು ಅವರ ಕುಟುಂಬ ಒಂದಕ್ಕೆ ಸರಾಸರಿ 5 ಸದಸ್ಯರಂತೆ ಸುಮಾರು 25 ರಿಂದ 30 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ.

Join Nadunudi News WhatsApp Group

Join Nadunudi News WhatsApp Group