BPL Ration Card Rules Karnataka: ಕರ್ನಾಟಕ ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ BPL ಕಾರ್ಡ್ ಹಾಗೆ ಬಡತನ ರೇಖೆಗಿಂತ ಮೇಲಿರುವವರಿಗೆ APL ಕಾರ್ಡ್ ಅನ್ನು ನೀಡುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ, ಅಂದರೆ BPL ಕಾರ್ಡ್ ನಲ್ಲಿ ಸಬ್ಸಿಡಿ, ಆಹಾರ ಧಾನ್ಯಗಳು, ಹಾಗೆ ಸರ್ಕಾರೀ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬಹುದು. ಇದುವರೆಗೆ ಕರ್ನಾಟಕ ರಾಜ್ಯಸರ್ಕಾರ 1.28 ಕೋಟಿ BPL ಕಾರ್ಡ್ ಗಳನ್ನ ವಿತರಿಸಿದೆ. ಅರ್ಹತೆ ಇಲ್ಲದ ಕುಟುಂಬದವರು BPL ಕಾರ್ಡ್ ಗೆ ಅರ್ಜಿ ಸಲ್ಲಿಸಿ ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದು, ಇದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದ್ದು ಅರ್ಹತೆ ಇಲ್ಲದ ಕುಟುಂಬದ BPL ಕಾರ್ಡ್ ರದ್ದು ಮಾಡುತ್ತಿದೆ. ನಾವೀಗ BPL ಕಾರ್ಡ್ ಗೆ ಅರ್ಜಿ ಸಲ್ಲಿಸುದು ಹೇಗೆ ಅನ್ನುವ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳೋಣ.
BPL ಕಾರ್ಡ್ ಎಂದರೇನು..? ಹಾಗೆ ಅದರ ಪ್ರಯೋಜನಗಳು..?
BPL ( ಬಡತನ ರೇಖೆಗಿಂತ ಕೆಳಗಿರುವ ) ಕಾರ್ಡ್, ಅಂದರೆ ಒಂದು ನಿರ್ದಿಷ್ಟ ಆದಾಯದ ಮಿತಿಗಿಂತ ಕಡಿಮೆ ಇರುವ ಕುಟುಂಬಗಳಿಗೆ ಭಾರತ ಸರ್ಕಾರ ನೀಡುವ ಗುರುತಿನ ದಾಖಲೆ ಆಗಿದೆ. ಈ ಕಾರ್ಡ್ ಇರುವವರಿಗೆ ಪ್ರತಿ ತಿಂಗಳು ಕಡಿಮೆ ಬೆಲೆಗೆ ಅಕ್ಕಿ, ರಾಗಿ ಹಾಗೆ ಇನ್ನಿತರ ಆಹಾರ ದಾನ್ಯಗಳು ಸಿಗುತ್ತಿವೆ. ಕರ್ನಾಟಕ ರಾಜ್ಯಸರ್ಕಾರ ಜಾರಿಗೆ ತಂದ ಗೃಹ ಲಕ್ಷ್ಮಿ, ಅನ್ನ ಭಾಗ್ಯ ಯೋಜನೆಗಳ ಲಾಭವನ್ನು ಸಹ ಪಡೆದುಕೊಳ್ಳಬಹುದಾಗಿದೆ.
ಅರ್ಹತೆ
* ಕುಟುಂಬದ ವಾರ್ಷಿಕ ಆದಾಯ 1.2 ಲಕ್ಷಕ್ಕಿಂತ ಅಧಿಕವಾಗಿರಬಾರದು.
* ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
* ಆಧಾರ್ ಕಾರ್ಡ್ ಕಡ್ಡಾಯ
* ಕುಟುಂಬದಲ್ಲಿ ಸರ್ಕಾರೀ ನೌಕರಿ ಇರಬಾರದು
* ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಗಿಂತ ಹೆಚ್ಚು ಭೂಮಿ ಅಥವಾ ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚಾಗಿ ಮನೆ ಇರಬಾರದು.
ಅನರ್ಹತೆ
* ನಾಲ್ಕು ಚಕ್ರದ ವಾಹನ (White board)
* ಆದಾಯ ತೆರಿಗೆ ಅಥವಾ GST ಪಾವತಿ ಮಾಡುವವರು ಹಾಗೆ ಪ್ರೊಫೆಷನಲ್ ಟ್ಯಾಕ್ಸ್ ಪಾವತಿ ಮಾಡುವವರು
ಈ ರೀತಿಯಾಗಿ ಹೊಸ BPL ಕಾರ್ಡ್ ಗೆ ಅರ್ಜಿ ಸಲ್ಲಿಸಿ
ಹೊಸ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ನೀವು ಮೊದಲು http://ahara.kar.nic.in/ ಗೆ ಭೇಟಿ ನೀಡಿ ಅರ್ಜಿ ಸ್ಥಿತಿಯನ್ನ ಪರಿಶೀಲಿಸಿಕೊಳ್ಳಿ. ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರದಲ್ಲಿ ಮಾಹಿತಿ ಪಡೆದು, ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ವಾಸಸ್ಥಳದ ಪುರಾವೆ, ಹಾಗೆ ಫೋಟೋ ನೋಡಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ರಾಜ್ಯದಲ್ಲಿ ರದ್ದಾಗಿದೆ ಸುಮಾರು 20 ಲಕ್ಷ BPL ಕಾರ್ಡ್
ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಸುಮಾರು 20 ಲಕ್ಷಕ್ಕೂ ಅಧಿಕ BPL ಕಾರ್ಡುಗಳನ್ನು ರದ್ದುಮಾಡಿದೆ. ಮಾನದಂಡಗಳನ್ನು ಪಾಲನೆ ಮಾಡದ ಕುಟುಂಬದವರ BPL ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಅನೇಕರು ಸುಳ್ಳು ಮಾಹಿತಿಗಳನ್ನು ಕೊಟ್ಟು BPL ರೇಷನ್ ಕಾರ್ಡುಗಳನ್ನು ಮಾಡಿಸಿಕೊಂಡಿರುವುದು ಈಗ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದ್ದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ BPL ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಒಂದುವೇಳೆ ತಪ್ಪಾಗಿ BPL ಕಾರ್ಡ್ ರದ್ದಾಗಿದ್ದರೆ ಅವರಿಗೆ ಕಾರ್ಡ್ ಮರಳಿ ಕೊಡಲು ಕೂಡ ತೀರ್ಮಾನ ಮಾಡಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications

