Karnataka BPL Ration Card Income Limit 2025: ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ಈಗಾಗಲೇ BPL ರೇಷನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಅನೇಕ ಹೊಸ ನಿಯಮಗಳನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ BPL ರೇಷನ್ ಕಾರ್ಡುಗಳನ್ನು ರದ್ದುಮಾಡಲಾಗಿದೆ. ಈಗ ಇನ್ನೊಂದು ಕರ್ನಾಟಕ ಸರ್ಕಾರ ಇನ್ನೊಂದು ಎಚ್ಚರಿಕೆ ಕೊಟ್ಟಿದ್ದು ಅಧಿಕ ಆದಾಯ ಹೊಂದಿರುವ ಕುಟುಂಬದ ರೇಷನ್ ಕಾರ್ಡುಗಳನ್ನು ರದ್ದುಮಾಡಲು ತೀರ್ಮಾನ ಮಾಡಿದೆ. ಹಾಗಾದರೆ ವಾರ್ಷಿಕವಾಗಿ ಎಷ್ಟು ಆದಾಯ ಹೊಂದಿರುವವರ BPL ಕಾರ್ಡ್ ರದ್ದಾಗಲಿದೆ ಮತ್ತು ಇದರ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಏನು ಅನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶದಲ್ಲಿ ರದ್ದಾಗುತ್ತಿದೆ ಹಲವು ಕುಟುಂಬಗಳ BPL ರೇಷನ್ ಕಾರ್ಡ್
ಕರ್ನಾಟಕ ಆಹಾರ ಮತ್ತು ನಾಗರೀಕ ಇಲಾಖೆ ಈಗಾಗಲೇ ಲಕ್ಷಾಂತರ ಅನರ್ಹ ಕುಟುಂಬಗಳ ಮಾಹಿತಿಯನ್ನು ಪಡೆದುಕೊಂಡಿದ್ದು ಅವರ BPL ರೇಷನ್ ಕಾರ್ಡುಗಳನ್ನು ರದ್ದು ಮಾಡುತ್ತಿದೆ. ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು BPL ರೇಷನ್ ಕಾರ್ಡ್ ಪಡೆದುಕೊಂಡರೆ ಮೇಲೆ ಕ್ರಮ ಕೈಗೊಳ್ಳಲು ಈಗ ಸರ್ಕಾರ ಮುಂದಾಗಿದ್ದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ BPL ರೇಷನ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ.
ವಾರ್ಷಿಕವಾಗಿ 1.2 ಲಕ್ಷ ರೂ ಆದಾಯವಿದ್ದರೆ ಕಾರ್ಡ್ ರದ್ದು
ಸರ್ಕಾರದ ಆದೇಶದ ಪ್ರಕಾರ, ಯಾವ ಕುಟುಂಬದವರು ವಾರ್ಷಿಕವಾಗಿ 1 .2 ಲಕ್ಷ ರೂಪಾಯಿಗಿಂತ ಅಧಿಕ ಆದಾಯ ಹೊಂದಿರುತ್ತಾರೋ ಅವರ BPL ರೇಷನ್ ಕಾರ್ಡುಗಳನ್ನು ರದ್ದುಮಾಡಲು ತೀರ್ಮಾನ ತಗೆದುಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದ ಆಹಾರ ಇಲಾಖೆಯು ವಾರ್ಷಿಕ ಆದಾಯ 1.2 ಲಕ್ಷ ರೂ.ಗಿಂತ ಹೆಚ್ಚು ಇರುವ ಕುಟುಂಬಗಳ BPL ರೇಷನ್ ಕಾರ್ಡ್‌ಗಳನ್ನು APLಗೆ ಪರಿವರ್ತಿಸುತ್ತಿದೆ ಎಂಬುದು ದೃಢಪಟ್ಟಿದೆ.
ಯಾವ ಕುಟುಂಬದ ಆದಾಯ ವಾರ್ಷಿಕವಾಗಿ 1.2 ಲಕ್ಷ ರೂಪಾಯಿಗಿಂತ ಅಧಿಕವಾಗಿದೆಯೋ ಅಂತಹ ಕುಟುಂಬಗಳ BPL ಕಾರ್ಡುಗಳನ್ನು APL ಕಾರ್ಡುಗಳಾಗಿ ಪರಿವರ್ತನೆ ಮಾಡಲಾಗುತ್ತದೆ. ಅನರ್ಹರು ಕೂಡ ಬಡವರ ಪಡಿತರ ದಾನ್ಯಗಳನ್ನು ಪಡೆದುಕೊಳ್ಳುತ್ತಿರುವ ಕಾರಣ ಸರ್ಕಾರ ಸರ್ಕಾರ ಈ ತೀರ್ಮಾನ ತಗೆದುಕೊಂಡಿದೆ.
ಕರ್ನಾಟಕದಲ್ಲಿ BPL ಕಾರ್ಡ್ ಅರ್ಹತಾ ಮಾನದಂಡಗಳು
* BPL ಕಾರ್ಡ್ ಪಡೆಯಲು ಕುಟುಂಬದ ವಾರ್ಷಿಕ ಆದಾಯ 1.2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
* ಸರ್ಕಾರೀ ನೌಕರರು BPL ಕಾರ್ಡ್ ಪಡೆದುಕೊಳ್ಳಲು ಅರ್ಹತೆ ಪಡೆದುಕೊಂಡಿಲ್ಲ.
* ಪ್ರತಿ ವರ್ಷ ಆದಾಯ ತೆರಿಗೆ ಪಾವತಿ ಮಾಡುವವರು BPL ಕಾರ್ಡಿಗೆ ಅರ್ಹರಲ್ಲ
* GST ಪಾವತಿ ಮಾಡುವವರು BPL ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿಲ್ಲ.
* ನಾಲ್ಕು ಚಕ್ರದ ವೈಟ್ ಬೋರ್ಡ್ ವಾಹನ ಇದ್ದವರು BPL ಕಾರ್ಡ್ ಬಳಸುವಂತಿಲ್ಲ.
* ನಗರ ಪ್ರದೇಶದಲ್ಲಿ 3 ಹೆಕ್ಟೇರ್ ಮತ್ತು ಹಳ್ಳಿ ಪ್ರದೇಶದಲ್ಲಿ 7 ಹೆಕ್ಟೇರ್ ಅಧಿಕ ಭೂಮಿ ಇದ್ದವರು BPL ಕಾರ್ಡ್ ಬಳಸುವಂತಿಲ್ಲ.
ಕಾರ್ಡ್ ತಪ್ಪಾಗಿ ರದ್ದಾಗಿದ್ದರೆ ಮರಳಿ ಪಡೆದುಕೊಳ್ಳಬಹುದು
ನವೆಂಬರ್ 2024ರಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದ್ದಾರೆ. ಬಡ ಕುಟುಂಬಗಳ ರೇಷನ್ ಕಾರ್ಡ್ ರದ್ದು ಮಾಡಬಾರದು ಎಂದು ಆದೇಶ ಹೊರಡಿಸಿದ್ದಾರೆ ಮತ್ತು ತಪ್ಪಾಗಿ ಯಾವುದಾದರೂ ಕುಟುಂಬದ BPL ಕಾರ್ಡ್ ರದ್ದಾಗಿದ್ದರೆ ಅವರಿಗೆ ಕಾರ್ಡ್ ಮರಳಿ ಕೊಡುವಂತೆ ಸೂಚನೆ ನೀಡಲಾಗಿದೆ. 1.2 ಲಕ್ಷ ರೂಪಾಯಿ ಪ್ರಸ್ತಿತ ಹಳೆಯ ಆದಾಯ ಮಿತಿ ಆಗಿದೆ ಮತ್ತು ಆದಾಯ ಮಿತಿ ಹೆಚ್ಚಳ ಮಾಡಬೇಕು ಅನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications

