Crop Compensation Karnataka 2025: ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಈಗ ಕರ್ನಾಟಕ ರಾಜ್ಯ ಸರ್ಕಾರ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡುವುದರ ಮೂಲಕ ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಬೆಳೆಪರಿಹಾರದ ಹಣವನ್ನು ಈಗ ಬಿಡುಗಡೆ ಮಾಡಲಾಗಿದ್ದು ರೈತರು ಸದ್ಯದಲ್ಲೇ ಆ ಹಣ ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಎಷ್ಟು ಬೆಳೆ ಪರಿಹಾರದ ಹಣ ಬಿಡುಗಡೆ ಆಗಿದೆ ಮತ್ತು ಯಾವ ಬೆಳೆಗೆ ಎಷ್ಟು ಪರಿಹಾರ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಬೆಳೆ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಕರ್ನಾಟಕ ರಾಜ್ಯ ಸರ್ಕಾರ ಸುಮಾರು 14.24 ಲಕ್ಷ ರೈತರಿಗೆ ಈಗ ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಿದೆ. ಬೆಳೆ ಪರಿಹಾರದ ಹಣವು ಸುಮಾರು 1033.60 ಕೋಟಿ ರೂಪಾಯಿ ಹಣವನ್ನು ಈಗ ಬಿಡುಗಡೆ ಮಾಡಲಾಗಿದೆ. ರೈತರಿಗೆ ಎಷ್ಟು ಬೆಳೆ ನಷ್ಟವಾಗಿದೆ ಮತ್ತು ಹೆಕ್ಟೇರ್ ಗೆ ಎಷ್ಟು ಹಣವನ್ನು ಬಿಡುಗಡೆ ಮಾಡಬೇಕು ಅನ್ನುವುದನ್ನು ಲೆಕ್ಕಾಚಾರ ಮಾಡಿಕೊಂಡು ಈಗ ಬೆಳೆಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ.
ಬೆಳೆ ನಷ್ಟಕ್ಕೆ ಬಿಡುಗಡೆಯಾದ ಪರಿಹಾರದ ಹಣ
ಕರ್ನಾಟಕದಲ್ಲಿ ಮುಂಗಾರು ಮಳೆಯಿಂದ 14.58 ಲಕ್ಷ ಹೆಕ್ಟೇರ್‌ಗಳಷ್ಟು ಬೆಳೆಗಳು ನಾಶವಾಗಿವೆ. ಇದರಿಂದ ₹10,748 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರವು ರಾಷ್ಟ್ರೀಯ ವಿಪತ್ತು ನಿಧಿ ಮೂಲಕ ಈಗಾಗಲೇ ಸುಮಾರು 1218 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಅದರ ಹೊರತಾಗಿ ಕರ್ನಾಟಕ ರಾಜ್ಯ ಸರ್ಕಾರ ಈಗ 1033.60 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಒಟ್ಟಾರೆಯಾಗಿ 2251 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ.
ಯಾವ ಬೆಳೆಗೆ ಎಷ್ಟು ಪರಿಹಾರದ ಹಣ ಬಿಡುಗಡೆ
* ಪರಿಹಾರವು ಹೆಕ್ಟೇರ್ ಗೆ ಸೀಮಿತವಾದ ಕಾರಣ ಗರಿಷ್ಟ 2 ಹೆಕ್ಟೇರ್ ಗಳಿಗೆ ರೈತರು ಪರಿಹಾರದ ಹಣ ಪಡೆದುಕೊಳ್ಳಬಹುದು.
* ಮಳೆಯಾಶ್ರಿತ ಬೆಳೆಗಳ ನಷ್ಟಕ್ಕೆ ಪ್ರತಿ ಹೆಕ್ಟೇರ್ ಗೆ ೮೫೦೦ ರೂಪಾಯಿಯಿಂದ 17000 ರೂಪಾಯಿಯ ವರೆಗೆ ಪರಿಹಾರದ ಹಣ ಪಡೆದುಕೊಳ್ಳಬಹುದು.
* ನೀರಾವರಿ ಬೆಳೆಗಳಿಗೆ 17000 ರೂಪಾಯಿಯಿಂದ 25500 ರೂಪಾಯಿ ವರೆಗೆ ನಷ್ಟ ಪರಿಹಾರ ಪಡೆದುಕೊಳ್ಳಬಹುದು.
* ಬಹು ವಾರ್ಷಿಕ ಬೆಳೆಗಳಿಗೆ 25500 ರೂಪಾಯಿಯಿಂದ 31 ಸಾವಿರ ರೂಪಾಯಿಯ ತನಕ ನಷ್ಟ ಪರಿಹಾರ ಪಡೆದುಕೊಳ್ಳಬಹುದು.
ರೈತರಿಗೆ ಇದು ಕಡಿಮೆ ಮೊತ್ತದ ಪರಿಹಾರದ ಹಣವಾದ ಕಾರಣ ರೈತರು ಕೇಂದ್ರದಿಂದ ಇನ್ನಷ್ಟು ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಳೆಯಿಂದಾಗಿ ಧಾರವಾಹಿಗಳು, ಹವೇರಿ, ಗದಗ್‌ನಂತಹ ಜಿಲ್ಲೆಗಳಲ್ಲಿ ತೀವ್ರ ನಷ್ಟ ಅನುಭವಿಸಿದ್ದು ಕೇಂದ್ರ ಸರ್ಕಾರ ಎಷ್ಟು ಪರಿಹಾರ ಹಣ ಬಿಡುಗಡೆ ಮಾಡುತ್ತೆ ಅಂತ ಕಾದು ನೋಡಬೇಕಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಸಿದ ಅರ್ಹ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

