Anna Suvidha: ಅನ್ನಭಾಗ್ಯ ಯೋಜನೆಯ ಬೆನ್ನಲ್ಲೇ ಇನ್ನೊಂದು ಯೋಜನೆಗೆ ಜಾರಿಗೆ ತಂದ ಸಿದ್ದರಾಮಯ್ಯ ಸರ್ಕಾರ, ಅಧಿಕೃತ ಘೋಷಣೆ.
ಪಡಿತರ ವಿತರಣೆಯಲ್ಲಿ ಹೊಸ ಸೌಲಭ್ಯವನ್ನು ನೀಡಲು ಮುಂದಾದ ಸರ್ಕಾರ.
Karnataka Govt Anna Suvidha App: ಸದ್ಯ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ವಿವಿಧ ಯೋಜನೆಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರ ರಾಜ್ಯದ ಹಿರಿಯ ನಾಗರಿಕರು ವಿವಿದ ಸೌಲಭ್ಯವನ್ನು ನೀಡಲು ಮುಂದಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಜನತೆಗೆ ಉಚಿತ ಅಕ್ಕಿಯನ್ನು ಪಡೆಯುತ್ತಿದ್ದಾರೆ.
ವಿಧಾನಸಭಾ ಚುನಾವಣಾ ಸಮಯದಲ್ಲಿ ಘೋಷಿಸಿರುವ ಹಾಗೆಯೇ ಉಚಿತ 5kg ಅಕ್ಕಿ ಹಾಗೂ 5kg ಅಕ್ಕಿಯ ಬದಲಾಗಿ ಹೆಚ್ಚುವರಿ ಹಣವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಇದೀಗ ಸರ್ಕಾರ ಪಡಿತರ ವಿತರಣೆಯಲ್ಲಿ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ. ಈ ಮೂಲಕ BPL ಪಡಿತರ ಚೀಟಿ ಹೊಂದಿರುವವರಿಗೆ ಸಿಹಿ ಸುದ್ದಿ ನೀಡಿದೆ.
BPL ಪಡಿತರ ಚೀಟಿದಾರರಿಗೆ ಹೊಸ ಸೌಲಭ್ಯ
ರಾಜ್ಯ ಸರ್ಕಾರ ಇದೀಗ BPL ಪಡಿತರ ಚೀಟಿ ಹೊಂದಿರುವ ಹಿರಿಯ ನಾಗರಿಕರಿಗೆ ಸಹಾಯವಾಗಲು ಮುಂದಾಗಿದೆ. ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. BPL ಕಾರ್ಡ್ ಹೊಂದಿರುವ 90 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಇನ್ನುಮುಂದೆ ರೇಷನ್ ಪಡೆಯಲು ಚಿಂತೆ ಮಾಡುವ ಅಗತ್ಯ ಇಲ್ಲ. ನಿಮ್ಮ ಮನೆ ಬಾಗಿಲಿಗೆ ರೇಷನ್ ಅನ್ನು ತಲುಪುವಂತೆ ಮಾಡಲು ರಾಜ್ಯ ಸರ್ಕಾರ ಚಿಂತನೆ ಹೂಡಿದೆ ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ.
ಅನ್ನಭಾಗ್ಯ ಯೋಜನೆಯ ಬೆನ್ನಲ್ಲೇ ಇನ್ನೊಂದು ಯೋಜನೆಗೆ ಜಾರಿಗೆ ತಂದ ಸಿದ್ದರಾಮಯ್ಯ ಸರ್ಕಾರ
ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ 90 ವರ್ಷ ಮೇಲ್ಪಟ್ಟ ವೃದ್ದರು, ಮನೆಯಲ್ಲಿ ಒಬ್ಬಂಟಿ ಇರುವ ವೃದ್ದರು, ವಯಸ್ಸಾದವರಿಗೆ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲು ಸರ್ಕಾರ ಮುಂದಾಗಿದೆ. 90 ವರ್ಷ ಮೇಲ್ಪಟ್ಟವರು ಪಡಿತರ ಕೇಂದ್ರಕ್ಕೆ ಹೋಗಲು ತೊಂದರೆ ಎದುರಾಗುತ್ತಿದ್ದರೆ, ಅಂತವರ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲು ಆಹಾರ ಇಲಾಖೆಯಿಂದ ಹೊಸ App ಅನ್ನು ಅಭಿವೃದ್ದಿಪಡಿಸಲಾಗಿದೆ.
Anna Suvidha App
ಸದ್ಯ 90 ವರ್ಷ ಮೇಲ್ಪಟ್ಟವರು ಮನೆ ಬಾಗಿಲಲ್ಲಿಯೇ ಪಡಿತರನ್ನು ಪಡೆಯಲು ಸಹಾಯವಾಗಲು ರಾಜ್ಯ ಸರ್ಕಾರ “Anna Suvidha App ” ಅನ್ನು ಪರಿಚಯಿಸಿದೆ. ಈ ಆಪ್ ನ ಮೂಲಕ November ನಿಂದ 90 ವರ್ಷ ಮೇಲ್ಪಟ್ಟವರು ಮನೆ ಬಾಗಿಲಲ್ಲಿಯೇ ಪಡಿತರನ್ನು ಪಡೆಯಬಹುದಾಗಿದೆ.
ಇನ್ನು ಪಡಿತರ ಆಹಾರ ಧಾನ್ಯ ಉಚಿತವಾಗಿ ನೀಡುತ್ತಿದ್ದು, ಪ್ರತಿ ಮನೆಗೆ 50 ರೂ. ಡೆಲಿವರಿ ಶುಲ್ಕ ನಿಗದಿಪಡಿಸಲು ಸರ್ಕಾರ ಯೋಜನೆ ಹೂಡಿದೆ ಎನ್ನಲಾಗುತ್ತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ನೀಡುವ ಉದ್ದೇಶದಿಂದ ಶುಲ್ಕ ನಿಗದಿ ಮಾಡಲು ಸರ್ಕಾರ ಮುಂದಾಗಿದೆ.