Krishi Bhagya: ಇನ್ನುಮುಂದೆ ಈ ಎಲ್ಲಾ ಸೌಲಭ್ಯ ಉಚಿತ, ಎಲ್ಲಾ ರೈತರಿಗೆ ಇನ್ನೊಂದು ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ.
ರಾಜ್ಯದ ರೈತರಿಗಾಗಿ ಕೃಷಿ ಭಾಗ್ಯ ಯೋಜನೆ ಜಾರಿ, ಇನ್ನುಮುಂದೆ ಈ ಎಲ್ಲಾ ಸೇವೆಗಳು ಉಚಿತ.
Karnataka Govt Krishi Bhagya Scheme: ರಾಜ್ಯದಲ್ಲಿ ಹೊಸ ಯೋಜನೆಗಳನ್ನು ಸಿದ್ದರಾಮಯ್ಯ ಸರ್ಕಾರ ಆಗಾಗ ಪರಿಚಯಿಸುತ್ತಿದೆ. ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿರುವ ರಾಜ್ಯ ಸರ್ಕಾರ ಒಂದೊಂದೇ ಯೋಜನೆಗಳ ಲಾಭವನ್ನು ಜನರಿಗೆ ನೀಡುತ್ತಿದೆ.
ಇನ್ನು ಪ್ರತಿ ಬಾರಿ ರಾಜ್ಯದ ಜನತೆಗೆ ವಿಶೇಷ ಸೌಲಭ್ಯವನ್ನು ನೀಡಲು ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಸಭೆಯನ್ನು ನಡೆಸುತ್ತಿರುತ್ತದೆ. ಈ ಬಾರಿ ಮಹತ್ವದ ಸಚಿವ ಸಂಪುಟ ಸಭೆ ನಡೆಸಿ ರಾಜ್ಯದ ರೈತರಿಗಾಗಿ ವಿಶೇಷ ಸೌಲಭ್ಯವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಬಾರಿ ನಡೆದ ಸಭೆಯಲ್ಲಿ ರೈತರ ಕೃಷಿ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.
ಇನ್ನುಮುಂದೆ ರೈತರಿಗೆ ಈ ಎಲ್ಲಾ ಸೌಲಭ್ಯ ಉಚಿತ
ಕರ್ನಾಟಕ ಸರ್ಕಾರದಿಂದ ಕೃಷಿ ಭಾಗ್ಯ ಯೋಜನೆಯನ್ನು ಪುನರಾರಂಭಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಕೃಷಿ ಹೊಂಡ ನಿರ್ಮಾಣದ ಸೌಲಭ್ಯ ರೈತರಿಗೆ ಉಚಿತವಾಗಿ ದೊರೆಯಲಿದೆ. ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ 2023- 24ನೇ ಸಾಲಿನಲ್ಲಿ 24 ಜಿಲ್ಲೆಗಳ 106 ತಾಲೂಕುಗಳಿಗೆ 100 ಕೋಟಿ ರೂ. ಗಳ ಅನುದಾನದಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
ರಾಜ್ಯದ ರೈತರಿಗಾಗಿ “ಕೃಷಿ ಭಾಗ್ಯ” ಯೋಜನೆ ಜಾರಿ
ಮಳೆ ಆಧಾರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ಪರಿವರ್ತಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೈತರಿಗಾಗಿ “ಕೃಷಿ ಭಾಗ್ಯ” ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯು ಸಾಕಷ್ಟು ಮಳೆನೀರು ಕೊಯ್ಲು ಮತ್ತು ಪ್ರಯೋಜನಕಾರಿ ಬಳಕೆಯ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಕೃಷಿ ಆದಾಯವನ್ನು ಹೆಚ್ಚಿಸಲು ಈ ಯೋಜನೆ ಸಹಾಯವಾಗಲಿದೆ.
ಈ ಯೋಜನೆಯಡಿ ಸಿಗಲಿದೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ
ಮಳೆ ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ಮತ್ತು ರಕ್ಷಣಾತ್ಮಕ ನೀರಾವರಿ ಒದಗಿಸಲು ಆಯ್ದ ಸ್ಥಳಗಳಲ್ಲಿ ಕೃಷಿ ಬಾವಿಗಳನ್ನೂ ನಿರ್ಮಾಣ ಮಾಡಲು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೋಂಡಾ ನಿರ್ಮಾಣಕ್ಕೆ ಸಬ್ಸಿಡಿ ಸಾಲ ಸೌಲಭ್ಯ ನೀಡಲಾಗುತ್ತದೆ. ಇನ್ನು ಸಾಮಾನ್ಯ ಸಾಮಾನ್ಯ ವರ್ಗದವರು ಕೃಷಿ ಬಾವಿ ನಿರ್ಮಾಣಕ್ಕೆ ಶೇ. 80 ರಷ್ಟು ಸಹಾಯಧನದೊಂದಿಗೆ ಸಾಲ ಸೌಲಭ್ಯ ಹಾಗೆಯೆ SC, ST ಸಮುದಾಯಕ್ಕೆ ಶೇ. 90 ರಷ್ಟು ಸಹಾಯಧನ ನೀಡಲಾಗುತ್ತದೆ.