Mangalya Bhagya: ರಾಜ್ಯದಲ್ಲಿ ಜಾರಿಗೆ ಬಂತು “ಮಾಂಗಲ್ಯ ಭಾಗ್ಯ” ಯೋಜನೆ, ಮದುವೆಯಾಗುವವರಿಗೆ ಸರ್ಕಾರಿಂದ ಈ ಯೋಜನೆ.
ಕಾಂಗ್ರೆಸ್ ಸರ್ಕಾರದ ಮಾಂಗಲ್ಯ ಭಾಗ್ಯ ವಿವಾಹ ಕಾರ್ಯಕ್ರಮ.
Karnataka Govt Mangalya Bhagya Scheme: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಹೊಸ ಹೊಸ ಯೋಜನೆನ್ನು ಪರಿಚಯಿಸುತ್ತಲೇ ಇದೆ. ಜನಸಾಮಾನ್ಯರಿಗೆ ಕಾಂಗ್ರೆಸ್ ನ ಉಚಿತ ಗ್ಯಾರಂಟಿ ಯೋಜನೆಗಳ ಲಾಭ ದೊರೆಯುತ್ತಿದೆ ಎನ್ನಬಹುದು. ಈಗಾಗಲೇ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಉಚಿತ 5 ಗ್ಯಾರಂಟಿಗಳ ಜೊತೆಗೆ ಇನ್ನಿತರ ಯೋಜನೆಗಳನ್ನು ಸರ್ಕಾರ ಪರಿಚಯಿಸಿದೆ.
ರಾಜ್ಯದ ಜನರ ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಯೋಜನೆಗಳನ್ನು ಕೂಡ ರಾಜ್ಯ ಸರ್ಕಾರ ಘೋಷಿಸಿದೆ. ಇದೀಗ ಕಾಂಗ್ರೆಸ್ ಸರ್ಕಾರ ಈ ಹಿಂದೆ ಅಧಿಕಾರದಲ್ಲಿದ್ದ BJP ಸರ್ಕಾರ ಪರಿಚಯಿಸಿರುವ ಯೋಜನೆಯನ್ನು ಹೆಸರನ್ನು ಬದಲಾಯಿಸುವುದರ ಜೊತೆಗೆ ಈ ಯೋಜನೆಯಲ್ಲಿ ಮತ್ತಷ್ಟು ಸೌಲಭ್ಯವನ್ನು ನೀಡಲು ಮುಂದಾಗಿದೆ.
ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ
2023 ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ BJP ಸರ್ಕಾರ ಅಧಿಕಾರದಲ್ಲಿತ್ತು. ಈ ವೇಳೆ BJP ಸರ್ಕಾರ ‘ಸಪ್ತಪದಿ ಸರಳ ಸಾಮೂಹಿಕ ವಿವಾಹ’ ಯೋಜನೆಯನ್ನು ಪರಿಚಯಿಸಿತ್ತು. ಸದ್ಯ ಈ ವಿವಾಹ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಬಿಜೆಪಿ ಸರ್ಕಾರದ ಇಟ್ಟಿದ್ದ ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆಯ ಹೆಸರನ್ನು “ಮಾಂಗಲ್ಯ ಭಾಗ್ಯ” ಯೋಜನೆ ಎಂದು ಕಾಂಗ್ರೆಸ್ ಸರ್ಕಾರ ಮರು ನಾಮಕರಣ ಮಾಡಿದೆ.
ಮದುವೆಯಾಗುವವರಿಗೆ ಸರ್ಕಾರಿಂದ ಮಾಂಗಲ್ಯ ಭಾಗ್ಯ ಯೋಜನೆ
ನವೆಂಬರ್ ನಿಂದ ಜನವರಿವರೆಗೆ ರಾಜ್ಯದ ಮುಜರಾಯಿ ದೇಗುಲಗಳಲ್ಲಿ ನಿಗದಿತ ದಿನದಂದು ಸಾಮೂಹಿಕ ಸರಳ ವಿವಾಹ ನಡೆಯಲಿದೆ. ಮುಜರಾಯಿ ಇಲಾಖೆಯ ಎ ಮತ್ತು ಬಿ ದೇವಸ್ಥಾನಗಳಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾಂಗಲ್ಯ ಭಾಗ್ಯ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನವೆಂಬರ್, ಡಿಸೆಂಬರ್ 2023 ಮತ್ತು ಜನವರಿ, 2024 ರಲ್ಲಿ ಸಾಮೂಹಿಕ ವಿವಾಹಗಳಿಗೆ ವಧು ವರರ ಹೆಸರನ್ನು ನೋಂದಾಯಿಸಲು ದೇವಸ್ಥಾನಗಳು ಸಿದ್ಧವಾಗುವಂತೆ ಸರ್ಕಾರ ಸುತ್ತೋಲೆ ಹೊರಡಿಸಲಾಗಿದೆ. ನವೆಂಬರ್ ತಿಂಗಳಿನಲ್ಲಿ ದಿನಾಂಕಗಳನ್ನು 16, 19 ಮತ್ತು 29, ಡಿಸೆಂಬರ್ 7,10 ರಂದು ಜನವರಿ 28 ಮತ್ತು 31 ರಂದು ದಿನಾಂಕ ನಿಗದಿಪಡಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವ ದಿನಾಂಕದಲ್ಲಿ ಮದುವೆಯಾಗಲು ಬಯಸುವವರು ಮಾಂಗಲ್ಯ ಭಾಗ್ಯ ಯೋಜನೆಯಡಿ ವಿವಾಹ ಆಗುವ ಅವಕಾಶ ಇರುತ್ತದೆ.