Scheme Cancelled: ರಾಜ್ಯದ ರೈತರಿಗೆ ಬೇಸರದ ಸುದ್ದಿ, ಬಹುದೊಡ್ಡ ಯೋಜನೆಯನ್ನ ರದ್ದು ಮಾಡಿದ ರಾಜ್ಯ ಸರ್ಕಾರ.
ಕೃಷಿ ಪಂಪ್ ಸೆಟ್ ಗಳಿಗೆ ನೀಡಲಾಗುವ ಉಚಿತ ಯೋಜನೆ ಕೈಬಿಟ್ಟ ಸರ್ಕಾರ
Karnataka Govt Scheme Cancelled: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಾಲು ಸಾಲು ಯೋಜನೆಗಳನ್ನು ಪರಿಚಯಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಜೊತೆಗೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ರಾಜ್ಯ ಸರಕಾರ ಘೋಷಣೆ ಹೊರಡಿಸುತ್ತಿದೆ. ಈಗಾಗಲೇ ರಾಜ್ಯ ಸರಕಾರ ವಿವಿಧ ಯೋಜನೆನ್ನು ಅನುಷ್ಠಾನಗೊಳಿಸುವುದಾಗಿ ಘೋಷಣೆ ಹೊರಡಿಸಿತ್ತು. ಜನರು ಸರ್ಕಾರದ ಯೋಜನೆಯ ಅನುಷ್ಠಾನಕ್ಕಾಗಿ ಕಾಯುತ್ತಿದ್ದಾರೆ ಎನ್ನಬಹುದು.
ಅದರಲ್ಲೂ ರಾಜ್ಯ ಸರ್ಕಾರ ಇತ್ತೀಚಿಗೆ ರೈತರಿಗೆ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ಸೌಲಭ್ಯ ನೀಡುವುದಾಗಿ ಘೋಷಿಸಿತ್ತು. ಈ ಯೋಜನೆಯ ಅನುಷ್ಠಾನಕ್ಕಾಗಿ ಕಾಯುತ್ತಿದ್ದ ರೈತರಿಗೆ ಇದೀಗ ಸರ್ಕಾರ ಶಾಕ್ ನೀಡಿದೆ.
ರಾಜ್ಯ ಸರ್ಕಾರದಿಂದ ರೈತರಿಗೆ ಬಿಗ್ ಶಾಕ್
ಸಾಮಾನ್ಯವಾಗಿ ರೈತರು ಕೃಷಿಗಾಗಿ ಸಾಕಷ್ಟು ಕಷ್ಟ ಪಡುತ್ತಿರುತ್ತಾರೆ. ಯಾವುದೇ ರೀತಿಯ ಕೃಷಿ ಮಾಡಿದರು ಕೂಡ ಅದಕ್ಕೆ ಹೆಚ್ಚಿನ ನೀರು ಅಗತ್ಯವಿರುತ್ತದೆ. ಹೆಚ್ಚುವರಿ ನೀರಿಗಾಗಿ ರೈತರು ಬಾವಿಗಳನ್ನು, ಬೋರವೆಲ್ ಗಳನ್ನೂ ತೆಗೆಯಲು ಯೋಚಿಸುತ್ತಾರೆ.
ಆದರೆ ಇದಕ್ಕೆಲ್ಲ ಸಾಕಷ್ಟು ಖರ್ಚಾಗುತ್ತದೆ. ಇನ್ನು ಕೃಷಿ ಕೊಳವೆ ಬಾವಿಯನ್ನು ತೆರೆಯಲು ರೈತರಿಗೆ ಹೆಚ್ಚಿನ ಬಂಡವಾಳದ ಅಗತ್ಯವಿರುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಈ ಹಿಂದೆ ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫಾರ್ಮರ್ ಸಮೇತ ಉಚಿತವಾಗಿ ಮೂಲ ಸೌಕರ್ಯವನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಸದ್ಯ ಸರ್ಕಾರ ಈ ಯೋಜನೆಯ ಕುರಿತು ರೈತರಿಗೆ ಶಾಕ್ ನೀಡಿದೆ.
ಕೃಷಿ ಪಂಪ್ ಸೆಟ್ ಗಳಿಗೆ ನೀಡಲಾಗುವ ಉಚಿತ ಯೋಜನೆ ಕೈಬಿಟ್ಟ ಸರ್ಕಾರ
ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫಾರ್ಮರ್ ಸಮೇತ ಉಚಿತವಾಗಿ ಮೂಲ ಸೌಕರ್ಯವನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ ಸದ್ಯ ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿದೆ ಎನ್ನುವ ಬಗ್ಗೆ ವರದಿಯಾಗಿದೆ.
ಅಕ್ರಮ ಸಕ್ರಮ ವಿದ್ಯುತ್ ಯೋಜನೆಯಡಿ ರೈತರಿಂದ ಪ್ರತಿ ಕೊಳವೆ ಬಾವಿಗೆ ಶುಲ್ಕದ ರೂಪದಲ್ಲಿ 24000 ರೂ. ಮಾತ್ರ ಕಟ್ಟಿಸಿಕೊಳ್ಳುತ್ತಿತ್ತು. ಸದ್ಯ ರಾಜ್ಯ ಸರ್ಕಾರ ಈ ಯೋಜನೆಯನ್ನು ರದ್ದು ಮಾಡಿದೆ. ಸರ್ಕಾರವು ಈ ಬಗ್ಗೆ ಆದೇಶ ಹೊರಡಿಸಿದ್ದು, ಕೃಷಿ ಕೊಳವೆ ಬಾವಿಗಳಿಗೆ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಆದೇಶಿಸಿದೆ.