Shrama Shakti Scheme: ಈ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 50 ಸಾವಿರ, 25 ಸಾವಿರ ರೂ ಫ್ರೀ

ಈ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 50 ಸಾವಿರ

Karnataka Govt Shrama Shakti Scheme: ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಿಂದ ರಾಜ್ಯದಲ್ಲಿ ಹೊಸ ಹೊಸ ಯೋಜನೆಗಳು ಜಾರಿಯಾಗುತ್ತಿವೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಘೋಷಿಸಿರುವ ಹಾಗೆ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಿದೆ. ಇನ್ನು ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಯೋಜನ ಲಭ್ಯವಾಗಿದೆ ಎನ್ನಬಹುದು.

ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ ಎಲ್ಲವು ಕೂಡ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ರೂಪಿಸಿದೆ. ಸದ್ಯ ಈ ಎರಡು ಯೋಜನೆಯಡಿ ಮಹಿಳೆಯರ ಸಬಲೀಕರಣದತ್ತ ಗಮನ ಹರಿಸಿದ ಕಾಂಗ್ರೆಸ್ ಸರ್ಕಾರ ಇದೀಗ ಮಗದೊಂದು ಮಹತ್ವದ ಯೋಜನೆಯನ್ನು ಜಾರಿಗೆ ತರಲು ಸಜ್ಜಾಗಿದೆ.

Karnataka Shrama Shakti Scheme
Image Credit: PM Modi Yojana

ಈ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 50 ಸಾವಿರ
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಇದೀಗ ಕಾಂಗ್ರೆಸ್ ಸರ್ಕಾರ “ಶ್ರಮ ಶಕ್ತಿ” ಯೋಜನೆಯನ್ನು ಜಾರಿಗೆ ತಂದಿದೆ. ಈ ಶ್ರಮ ಶಕ್ತಿ ಯೋಜನೆಯ ಮೂಲಕ 50 ಸಾವಿರ ರೂ. ಸಾಲ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯಡಿ 250000 ರೂ. ಮರುಪಾವತಿ ಮಾಡಿದರೆ, ಉಳಿದ 25000 ರೂ. ಸಹಾಯಧನವನ್ನು ನೀಡಲು ಸರ್ಕಾರ ಮುಂದಾಗಿದೆ. ಅಧಿಕೃತ ವೆಬ್‌ ಸೈಟ್ www.kmdcoonline.karnataka.gov.in ಗೆ ಭೇಟಿ ನೀಡುವ ಮೂಲಕ ರಾಜ್ಯ ಸರ್ಕಾರದ ಶ್ರಮ ಶಕ್ತಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಶ್ರಮಶಕ್ತಿ ಯೋಜನೆಯ ಸಾಲ ಪಡೆಯಲು ಯಾವ ಯಾವ ದಾಖಲೆಗಳು ಬೇಕು…?
•ಪಾಸ್ಪೋರ್ಟ್ ಗಾತ್ರದ ಫೋಟೋ
•ಆಧಾರ್ ಕಾರ್ಡ್
•ಆದಾಯ ಪ್ರಮಾಣಪತ್ರ
•ಯೋಜನಾ ವರದಿ
•ಶ್ಯೂರಿಟಿ ಸ್ವಯಂ ಘೋಷಣೆ ನಮೂನೆ
•ಸ್ವಯಂ ಘೋಷಣೆ ನಮೂನೆ
•ಬ್ಯಾಂಕ್ ಖಾತೆ ವಿವರಗಳು
•ಕರ್ನಾಟಕದ ನಿವಾಸ ಪುರಾವೆ
•ಆನ್‌ ಲೈನ್ ಅರ್ಜಿ ನಮೂನೆ
•ಜಾತಿ ಪ್ರಮಾಣ ಪತ್ರ
•ಅಲ್ಪಸಂಖ್ಯಾತರ ಪ್ರಮಾಣಪತ್ರ

Shrama Shakti Scheme
Image Credit: Karunaadavaani

ಶ್ರಮ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು..?
*ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿಗಳು ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

*ಅರ್ಜಿದಾರರ ವಯಸ್ಸು 18 ರಿಂದ 55 ವರ್ಷವಾಗಿರಬೇಕು.

*ಇನ್ನು ವಾರ್ಷಿಕ ಆದಾಯವು 3 .50 ಲಕ್ಷಕ್ಕಿಂತ ಹೆಚ್ಚಿರಬಾರದು.

*ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾನವಶಕ್ತಿ ಯೋಜನೆ 2023-24 ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಆಂಗ್ಲೋ ಇಂಡಿಯನ್ ಮತ್ತು ಪಾರ್ಸಿ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.

*ಅರ್ಜಿದಾರರ ಕುಟುಂಬದಲ್ಲಿ ಯಾವುದೇ ವ್ಯಕ್ತಿಯು ಸರ್ಕಾರೀ ನೌಕರಿಯನ್ನು ಹೊಂದಿರುವಂತಿಲ್ಲ.

*ಇನ್ನು ಅರ್ಜಿದಾರರು KMDC ಸಾಲಗಳನ್ನು ಮರುಪಾವತಿ ಮಾಡದಿರುವ ಆರೋಪ ಇರಬಾರದು.

*ಇನ್ನು https://kmdc.karnataka.gov.in/?utm_source=DH-MoreFromPub&utm_medium=DH-app&utm_campaign=DH ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅಗತ್ಯ ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

Karnataka Govt Shrama Shakti Scheme 2024
Image Credit: Original Source

Join Nadunudi News WhatsApp Group