Grama One Franchise 2026: ಇದೀಗ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅಭ್ಯರ್ಥಿಗಳು ಜನರಿಗೆ ಸೇವೆ ಸಲ್ಲಿಸಲು ಹಾಗೆ ಗೌರವಾನ್ವಿತ ಆದಾಯವನ್ನು ಗಳಿಸಲು ಉತ್ತಮ ಅವಕಾಶ. ಕರ್ನಾಟಕ ರಾಜ್ಯ ಸರ್ಕಾರ ಸ್ಥಳೀಯ ಮಟ್ಟದಲ್ಲಿ ನಾಗರಿಕರಿಗೆ ಅಗತ್ಯ ಸರ್ಕಾರಿ ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಒಂದು ಸುವರ್ಣಾವಕಾಶವನ್ನು ನೀಡಿದೆ. ಆಸಕ್ತರು ತಮ್ಮ ಊರಿನಲ್ಲಿ ಕೇಂದ್ರ ತೆರೆದು ಉತ್ತಮ ಆದಾಯ ಗಳಿಸಬಹುದು. ಹಾಗಾದರೆ ಗ್ರಾಮ ಒನ್ ಕೇಂದ್ರವನ್ನು ತೆರೆಯಲು ಬೇಕಾದ ಅಗತ್ಯ ದಾಖಲೆ ಮತ್ತು ಅರ್ಹತೆ ಏನು? ಅರ್ಜಿ ಸಲ್ಲಿಕೆ ಹೇಗೆ ಮತ್ತು ಎಷ್ಟು ಆದಾಯ ಗಳಿಸಬಹುದು..? ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವೀಗ ತಿಳಿದುಕೊಳ್ಳೋಣ.
ಗ್ರಾಮ ಒನ್ ಎಂದರೇನು?
ಗ್ರಾಮ ಒನ್ (Grama One) ಎಂದರೆ ಕರ್ನಾಟಕದ ಗ್ರಾಮ ಮಟ್ಟದ ನಾಗರಿಕರಿಗೆ ಸರ್ಕಾರಿ ಸೇವೆಗಳು, ಬ್ಯಾಂಕಿಂಗ್ ಮತ್ತು ಇತರ ಸೇವೆಗಳನ್ನು ಒಂದೇ ಸ್ಥಳದಲ್ಲಿ, ಸುಲಭವಾಗಿ, ಮಧ್ಯವರ್ತಿಗಳಿಲ್ಲದೆ ಒದಗಿಸುವ ಒಂದು ಏಕೈಕ ಸಹಾಯ ಕೇಂದ್ರ ವ್ಯವಸ್ಥೆ ಆಗಿದೆ. ಗ್ರಾಮ ಒನ್ ಕಚೇರಿ ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 8 ರವರೆಗೆ ಕಾರ್ಯನಿರ್ವಹಿಸುತ್ತದೆ.
ತಿಂಗಳ ಆದಾಯ ಎಷ್ಟು?
ಅಂದಾಜಿನ ಪ್ರಕಾರ ಆದಾಯ ದೈನಂದಿನ ಟ್ರಾನ್ಸಾಕ್ಷನ್ ಮೇಲೆ ಅವಲಂಬಿತವಾಗಿರುತ್ತದೆ. ಜನಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ದಿನಕ್ಕೆ 50 ರಿಂದ 100 ಅಥವಾ ಅದಕ್ಕಿಂತ ಹೆಚ್ಚಿನ ಟ್ರಾನ್ಸಾಕ್ಷನ್ ಇದ್ದರೆ ತಿಂಗಳಿಗೆ 20,000 ರಿಂದ 50,000 ರೂಪಾಯಿ ಆದಾಯ ಅಥವಾ ಅದಕ್ಕಿಂತ ಹೆಚ್ಚು ಗಳಿಸಬಹುದಾಗಿದೆ. ಜನಸಂಖ್ಯೆ ಕಡಿಮೆ ಇರುವ ಪ್ರದೇಶದಲ್ಲಿ ಟ್ರಾನ್ಸಾಕ್ಷನ್ ಕಡಿಮೆಯಾಗಿ ಆದಾಯ ಕಡಿಮೆಯಾಗಬಹುದು.
ಗ್ರಾಮ ಒನ್ ಕಚೇರಿಯ ಸೇವೆಯ ವಿವರ
- ಭೂ ದಾಖಲೆಗಳು – ಪಹಣಿ (RTC), ವಂಶಾವಳಿ, ಭೂ ಪರಿವರ್ತನೆ ಅರ್ಜಿ, ಖಾತಾ ತಿದ್ದುಪಡಿ
- ಪ್ರಮಾಣ ಪತ್ರಗಳು – ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರ, ಜನನ / ಮರಣ ಪ್ರಮಾಣಪತ್ರ ( 75 ರೂಪಾಯಿ ಶುಲ್ಕ )
- ರೇಷನ್ ಕಾರ್ಡ್ – ಹೊಸ ರೇಷನ್ ಕಾರ್ಡ್ ಅರ್ಜಿ, ತಿದ್ದುಪಡಿ, ಸದಸ್ಯ ಸೇರ್ಪಡೆ / ತೆಗೆದುಹಾಕುವಿಕೆ
- ಆಧಾರ್ ಸೇವೆಗಳು – ಆಧಾರ್ ನೋಂದಣಿ, ಆಧಾರ್ ಅಪ್ಡೇಟ್
- ಪಿಂಚಣಿ ಮತ್ತು ಕಲ್ಯಾಣ ಯೋಜನೆಗಳು – ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ಅಂಗವಿಕಲ ಪಿಂಚಣಿ ಅರ್ಜಿ
- ಆರೋಗ್ಯ ಮತ್ತು ವಿಮೆ – ಆಯುಷ್ಮಾನ್ ಭಾರತ್ ಕಾರ್ಡ್, ಬೆಳೆ ವಿಮೆ, ವಾಹನ ವಿಮೆ
- ಉದ್ಯೋಗ ಮತ್ತು ಕೌಶಲ್ಯ – ಉದ್ಯೋಗ ನೋಂದಣಿ, ಕೌಶಲ್ಯ ಅಭಿವೃದ್ಧಿ ಯೋಜನೆಗಳು
- ಬಿಲ್ ಪಾವತಿ – ವಿದ್ಯುತ್ ಬಿಲ್, ನೀರು ಬಿಲ್, ತೆರಿಗೆ ಪಾವತಿ
ಗ್ರಾಮ ಒನ್ ಕೇಂದ್ರಗಳಲ್ಲಿ ಪ್ರಾರಂಭದಲ್ಲಿ 25 ರಿಂದ 100 ಸೇವೆಗಳು ಲಭ್ಯವಿದ್ದು, ಈಗ ಸೇವಾ ಸಿಂಧುವಿನ ಹೆಚ್ಚಿನ ಸೇವೆಗಳು ಸೇರಿದೆ.
ಗ್ರಾಮ ಒನ್ ಕಚೇರಿಯ ಉದ್ದೇಶ
- ಒಂದೇ ಕೇಂದ್ರದಲ್ಲಿ ಎಲ್ಲ ಸೇವೆಗಳು ಲಭ್ಯ (ಉದಾಹರಣೆಗೆ – G2C ಸೇವೆಗಳು, ಬ್ಯಾಂಕಿಂಗ್, RTI, ಆಧಾರ್, ರೇಷನ್ ಕಾರ್ಡ್, ಪಹಣಿ, ವಂಶಾವಳಿ, ಜಾತಿ / ಆದಾಯ ಪ್ರಮಾಣಪತ್ರ, ವಿಮೆ ಇತ್ಯಾದಿ)
- ಗ್ರಾಮೀಣ ಜನರು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಅಳೆಯುವ ಬದಲು, ಸ್ಥಳೀಯವಾಗಿ ಸೇವೆಗಳನ್ನು ಪಡೆದುಕೊಳ್ಳಬಹುದು. ಇದರಿಂದ ಸಂಚಾರ ವೆಚ್ಚ ಮತ್ತು ಸಮಯದ ಉಳಿತಾಯ.
- ಮಧ್ಯವರ್ತಿಗಳು ಇಲ್ಲದೆ, ಕಡಿಮೆ ಶುಲ್ಕದಲ್ಲಿ ಪಾರದರ್ಶಕವಾಗಿ ಸೇವೆಗಳನ್ನು ಒದಗಿಸುವುದು.
- ಫ್ರಾಂಚೈಸಿ ಮಾದರಿಯಲ್ಲಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು.
ಗ್ರಾಮ ಒನ್ ತೆರೆಯಲು ಬೇಕಾದ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಭಾವಚಿತ್ರ
- ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್
- ಜಾಗದ ಮಾಲೀಕತ್ವ / ಬಾಡಿಗೆ ಒಪ್ಪಂದದ ದಾಖಲೆ
- ಜಾಗದ ಫೋಟೋ ಗಳು (ಕನಿಷ್ಠ 100-150 ಚದರ ಅಡಿ ಜಾಗ, ಮುಖ್ಯ ಸ್ಥಳದಲ್ಲಿ – ಒಳಗೆ, ಹೊರಗೆ, ಸೈನ್ ಬೋರ್ಡ್ ಸ್ಥಳ ಇತ್ಯಾದಿ ಫೋಟೋ ಗಳು)
- ಶೈಕ್ಷಣಿಕ ಅರ್ಹತೆ ಪ್ರಮಾಣಪತ್ರಗಳು (ಕನಿಷ್ಠ ಪದವಿ ಅಥವಾ ಡಿಪ್ಲೊಮಾ, ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್)
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
ಇತರ ಮುಖ್ಯ ಅಂಶಗಳು
- ಅರ್ಜಿದಾರರು ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
- ಪ್ರಾರಂಭಿಕ ಹೂಡಿಕೆ 1 ರಿಂದ 2 ಲಕ್ಷ (ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ಬಯೋಮೆಟ್ರಿಕ್ ಡಿವೈಸ್, ಇಂಟರ್ನೆಟ್, CCTV, ಫರ್ನಿಚರ್ , ಇತ್ಯಾದಿ)
- ಸಾರ್ವಜನಿಕರು ಸುಲಭವಾಗಿ ತಲುಪುವ ಪ್ರಮುಖ ಸ್ಥಳದಲ್ಲಿ ಇರಬೇಕು
- ಅರ್ಜಿ ಶುಲ್ಕ (ಕನಿಷ್ಠ 100 ಅಥವಾ ಅದಕ್ಕಿಂತ ಹೆಚ್ಚಿರಬಹುದು)
ಅರ್ಜಿ ಸಲ್ಲಿಕೆ
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
- ಅರ್ಜಿ ಸಲ್ಲಿಕೆ ಮಾಡಲು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
- ಅಧಿಕೃತ ವೆಬ್ ಸೈಟ್ ಆಗಿರುವ https://www.karnatakaone.gov.in/ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
- ಪ್ರಾಂಚೈಸಿ ವಿಭಾಗದಲ್ಲಿ ಅರ್ಜಿ ಫಾರ್ಮ್ ಭರ್ತಿ ಮಾಡಬೇಕು
- ಆಧಾರ್ ಕಾರ್ಡ್, ಪಾನ್ ಕ್ರೇಡ್, ಪಾಸ್ ಬುಕ್, ಜಾಗದ ಫೋಟೋ, ಮತ್ತು ಮ್ಯಾಪ್ ಅನ್ನು ಅಪ್ಲೋಡ್ ಮಾಡಬೇಕು
ನಿಖರವಾದ ಮಾಹಿತಿಗೆ https://www.karnatakaone.gov.in/ ಅಥವಾ 8431906919, 9019026687, 080-44554455 ಗೆ ಕರೆ ಮಾಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

