Backward Reservation Income Limit: ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಈಗ ರಾಜ್ಯಾದ್ಯಂತ ಹೊಸ ನಿಯಮ ಜಾರಿಗೆ ತಂದಿದೆ. ಹಿಂದುಳಿದ ವರ್ಗಗಳ ಆದಾಯ ಮೀಸಲಾತಿ ನಿಯಮದಲ್ಲಿ ಈಗ ಕೆಲವು ಬದಲಾವಣೆ ಮಾಡಲಾಗಿದು ಈ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಇನ್ನುಮುಂದೆ ಆದಾಯದ ಆಧಾರದ ಮೇಲೆ ಮೀಸಲು ನೀಡಬೇಕು ಎಂದು ಹೈಕೋರ್ಟ್ ತೀರ್ಪು ಕೊಟ್ಟಿದ್ದು ಆದಾಯ ಮಿತಿಯನ್ನು ಕೂಡ ನಿಗದಿ ಮಾಡಲಾಗಿದೆ. ಹಾಗಾದರೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ನಿಗದಿ ಮಾಡಲಾಗಿರುವ ಆದಾಯದ ಮಿತಿ ಎಷ್ಟು ಅನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಕರ್ನಾಟಕ ಹೈಕೋರ್ಟ್ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಹಿಂದುಳಿದ ವರ್ಗಗಳ (ಬ್ಯಾಕ್‌ವರ್ಡ್ ಕ್ಲಾಸಸ್) ಮೀಸಲಾತಿ ಪಡೆಯಲು ಆದಾಯ ಮಿತಿಯನ್ನು ₹8 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈ ಮಿತಿಯನ್ನು ದಾಟಿದರೆ, ಕ್ರೀಮಿ ಲೇಯರ್ ವರ್ಗಕ್ಕೆ ಸೇರಿ ಮೀಸಲಾತಿ ಅರ್ಹತೆ ಕಳೆದುಕೊಳ್ಳಬೇಕಾಗುತ್ತದೆ. ಸರ್ಕಾರೀ ಉದ್ಯೋಗ ಆಗಿರಬಹುದು ಅಥವಾ ಶಿಕ್ಷಣ ಕ್ಷೇತ್ರವಾಗಿರಬಹುದು ಈ ನಿಯಮ ಅನ್ವಯ ಆಗಲಿದೆ.
ಹೈಕೋರ್ಟ್ ಆದೇಶದ ಮುಖ್ಯ ಉದ್ದೇಶ
ಸರ್ಕಾರೀ ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ನಿಯಂತ್ರಣ ಮಾಡುವುದು ಈ ಆದೇಶದ ಪ್ರಮುಖವಾದ ಉದ್ದೇಶವಾಗಿದೆ. ಈ ಆದೇಶವು ರಾಜ್ಯದ ಆರ್ಥಿಕವಾಗಿ ಬಲವಾದ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನಿರಾಕರಿಸುವ ಮೂಲಕ ನಿಜವಾದ ಅಗತ್ಯರಿಗೆ ಅವಕಾಶಗಳನ್ನು ಒದಗಿಸುವ ಗುರಿಯನ್ನು ಇಟ್ಟುಕೊಂಡಿದೆ. ಈ ಹಿಂದೆ ಆದಾಯದ ಮಿತಿಯ ನಿಯಮವನ್ನು ಕೆಲವು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು, ಆದರೆ ಇನ್ನುಮುಂದೆ ಯಾವುದೇ ಮೋಸ ಆಗಲ್ಲ.
ಪ್ರವರ್ಗ 2-ಎಗೆ ಸಂಬಂಧಿಸಿದಂತೆ ಸರ್ಕಾರದ ಮೇಲ್ಮನವಿ
ಪ್ರವರ್ಗ 2-ಎಗೆ ಸಂಬಂಧಿಸಿದಂತೆ ಸರ್ಕಾರದ ಮೇಲ್ಮನವಿಯನ್ನು ಮಾನ್ಯ ಮಾಡಲಾಗಿದೆ. ಇದರರ್ಥ, ಈ ವರ್ಗಕ್ಕೆ ಲಭ್ಯವಿರುವ ಮೀಸಲಾತಿ ವ್ಯಾಪ್ತಿಯನ್ನು ಕ್ರೀಮಿ ಲೇಯರ್ ಆಧಾರದಲ್ಲಿ ನಿಯಂತ್ರಿಸಬೇಕು ಮತ್ತು 8 ಲಕ್ಷಕ್ಕಿಂತ ಅಧಿಕ ಆದಾಯ ಇರುವವರನ್ನು ಮೀಸಲಾತಿಯಿಂದ ದೂರ ಇಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಈ ನಿರ್ಧಾರಗಳು ಸುಪ್ರೀಂ ಕೋರ್ಟ್ ಆದಹಾರದ ಮೇಲೆ ಬಂದಿವೆ, ಅಲ್ಲಿ 50% ಮೀಸಲಾತಿ ಮಿತಿಯನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ರಾಜ್ಯ ಸರ್ಕಾರ ಈಗ ಈ ಆದೇಶಗಳನ್ನು ಜಾರಿಗೊಳಿಸುವಂತೆ ಸೂಚಿಸಲಾಗಿದೆ, ಇದರಿಂದ ಭವಿಷ್ಯದ ನೇಮಕಾತಿಗಳು ಪ್ರಭಾವಿತವಾಗಬಹುದು ಮತ್ತು ಹೊಸ ನೇಮಕಾತಿಯ ಮೇಲೆ ಪ್ರಭಾವ ಉಂಟುಮಾಡಬಹುದು.
ಹೈಕೋರ್ಟ್ ಆದೇಶದಿಂದ ಆಗುವ ಪರಿಣಾಮಗಳು
* ಹೈಕೋರ್ಟ್ ಈ ತೀರ್ಪು ಉದ್ಯೋಗ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಉಂದುಮಾಡಲಾಗಿದೆ.
* ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಯುವಕ ಯುವತಿಯರಿಗೆ ಇನ್ನೊಂದು ಸವಾಲು ಎದುರಾಗಿದೆ.
* ಉದ್ಯೋಗ ಆಕಾಂಕ್ಷಿಗಳು ತಮ್ಮ ಕುಟುಂಬದ ಆದಾಯವನ್ನು ಪರಿಶೀಲನೆ ಮಾಡುವುದು ಕಡ್ಡಾಯ.
* ಹಿಂದುಳಿದ ವರ್ಗದ ಮೇಲೆ ಮೀಸಲಾತಿ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಲಿದೆ.
ಕೆಲವು ಹಿಂದುಳಿದ ವರ್ಗದವರು ಹೈಕೋರ್ಟ್ ಈ ತೀರ್ಪನ್ನು ಸ್ವಾಗತ ಮಾಡಿದರೆ ಇನ್ನೂ ಕೆಲವರು ಆದಾಯ ಮಿತಿ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ SC/ST ಮೀಸಲಾತಿ ಸುಧಾರಣೆಗಳು ನಡೆಯುತ್ತಿವೆ, ಆದರೆ OBCಗಳಿಗೆ ಈ ಮಿತಿ ಹೊಸ ಆಯಾಮವನ್ನು ನೀಡುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

