Compassion Recruitment: ತಂದೆ ಅಥವಾ ತಾಯಿ ಮರಣ ಹೊಂದಿದರೆ ಅವರ ಕೆಲಸ ಮಗಳಿಗೆ ಕೊಡುವಂತಿಲ್ಲ, ಹೈಕೋರ್ಟ್ ತೀರ್ಪು.
ಅನುಕಂಪದ ಉದ್ಯೋಗಕ್ಕೆ ಮದುವೆಯಾದ ಮಗಳು ಅರ್ಹತೆ ಹೊಂದಿಲ್ಲ.
Karnataka High Court Verdict About Compassion Recruitment: ಭಾರತೀಯ ನ್ಯಾಯಾಲಯದಲ್ಲಿ ಅನೇಕ ರೀತಿಯ ನಿಯಮಗಳಿವೆ. ಆಸ್ತಿ ಸಮಬಂಧಿತ ನಿಯಮಗಳಿಂದ ಹಿಡಿದು ವಿವಾಹ ವಿಚ್ಛೇದನಗಳಿಗೂ ಭಾರತೀಯ ಕಾನೂನಿನಲ್ಲಿ ನಿಯಮಗಳಿಗೆ. ಯಾವುದೇ ರೀತಿಯ ಪ್ರಾಣಕರಣಗಳಿಗೂ ಕಾನೂನಿನಲ್ಲಿ ಅದರದ್ದೇ ಆದ ತಿದ್ದುಪಡಿಗಳಿರುತ್ತವೆ.
ಕಾನೂನಿನಲ್ಲಿ ನೌಕರರ ಉದ್ಯೋಗದ ಹಕ್ಕಿಗೂ ಕೂಡ ಪ್ರತ್ಯೇಕ ನಿಯಮವಿದೆ. ಸದ್ಯ ಕರ್ನಾಟಕ ಹೈಕೋರ್ಟ್ ಹೊಸ ಆದೇಶವನ್ನು ಹೊರಡಿಸಿದೆ. ಅನುಕಂಪದ ಉದ್ಯೋಗಕ್ಕೆ ವಿವಾಹಿತ ಪುತ್ರಿಯ ಹಕ್ಕಿನ ಬಗ್ಗೆ ಸದ್ಯ ಹೈಕೋರ್ಟ್ ನಲ್ಲಿ ಮಹತ್ವದ ತೀರ್ಪನ್ನು ನೀಡಲಾಗಿದೆ.
ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಇದೀಗ ಕರ್ನಾಟಕ ಹೈಕೋರ್ಟ್ LIC ಉದ್ಯೋಗಿಯ ಮರಣದ ನಂತರ ಉದ್ಯೋಗಿಯ ಉದ್ಯೋಗ ಯಾರು ಪಡೆಯಲು ಅರ್ಹರು ಎನ್ನುವ ಬಗ್ಗೆ ಆದೇಶ ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವಿವಾಹಿತ ಮಹಿಳೆಯೋರ್ವರು ಅರ್ಜಿ ಸಲ್ಲಿಸಿದ್ದಾರೆ. LIC ಉದ್ಯೋಗಿಯ ಮರಣದ ನಂತರ LIC ಉದ್ಯೋಗಿಯ ಮಗಳು ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಕರ್ನಾಟಕ ಹೈಕೋರ್ಟ್ ನಡೆಸಿದೆ. ಸದ್ಯ ಈ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದೆ.
ಅನುಕಂಪದ ನೇಮಕಾತಿಗೆ ವಿವಾಹಿತ ಪುತ್ರಿ ಅರ್ಹಳಲ್ಲ
ನ್ಯಾಯಾಲಯದಲ್ಲಿ ವಿವಾಹಿತ ಮಹಿಳೆಯು ತನ್ನ ಮೃತ ತಂದೆಯ ಮಗನಂತೆಯೇ ಅನುಕಂಪದ ನೇಮಕಾತಿಗೆ ಅರ್ಹಳಾಗಿದ್ದಾಳೆ ಎಂದು ವಾದಿಸಲಾಗಿದೆ. ಈ ವೇಳೆ LIC ನಿಯಮದ ಅಡಿಯಲ್ಲಿಯೂ ವಿವಾಹಿತ ಮಹಿಳೆಯು ಅನುಕಾಮಪದ ನೇಮಕಾತಿಗೆ ಅರ್ಹಳಲ್ಲ ಎಂದು ಹೇಳಿದೆ. ವಿವಾಹಿತ ಮಹಿಳೆಯು ಉದ್ಯೋಗಿಯ ಮರಣದ ಸಮಯದಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿಯ ವ್ಯಾಪ್ತಿಯನ್ನು ಮೀರಿದ್ದಾಳೆ ಎಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ಅನುಕಂಪದ ನೇಮಕಾತಿಯನ್ನು ನೀಡುವ ಮೂಲ ಉದ್ದೇಶವು ಅಂತಹ ದುರಂತ ಪರಿಸ್ಥಿತಿಯಲ್ಲಿ ಮೃತ ಉದ್ಯೋಗಿಯ ಕುಟುಂಬ ಸದಸ್ಯರನ್ನು ಅಪಾಯದಿಂದ ಹೊರಗಿಡುವುದು ಮತ್ತು ಅನುಕಂಪದ ನೇಮಕಾತಿಯ ಮುಖ್ಯ ಆಧಾರವು ಮೂಲತಃ ಕೆಲಸದ ಸಮಯದಲ್ಲಿ ಸಾವನ್ನಪ್ಪುವ ವ್ಯಕ್ತಿಯ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಒತ್ತಾಯಿಸುವುದಿಲ್ಲ ಎಂಬ ಅಂಶವನ್ನು ಆಧರಿಸಿದೆ ಎಂದು ನ್ಯಾಯಾಲಯ ತಿಳಿಸಿದೆ.