Marriage Sustenance: ಇಂತಹ ಮಹಿಳೆಯರು ವಿಚ್ಛೇಧನದ ನಂತರ ಗಂಡನಿಂದ ಯಾವುದೇ ಜೀವನಾಂಶ ಕೇಳುವಂತಿಲ್ಲ, ಹೈಕೋರ್ಟ್ ತೀರ್ಪು.
ಕರ್ನಾಟಕ ಹೈಕೋರ್ಟ್ ಇಂತಹ ಮಹಿಳೆಯರು ವಿಚ್ಛೇಧನದ ನಂತರ ಗಂಡನಿಂದ ಯಾವುದೇ ಜೀವನಾಂಶ ಕೇಳುವಂತಿಲ್ಲ.
Karnataka High Court Verdict About Marriage Sustenance: ಭಾರತೀಯ ನ್ಯಾಯಾಲಯದಲ್ಲಿ (Indian Law) ಸಾಕಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲವು ನ್ಯಾಯಪರವಾದ ಆದೇಶವನ್ನು ಹೊರಡಿಸುತ್ತಲೇ ಇರುತ್ತದೆ. ಆಸ್ತಿಯ ವಿಚಾರವಾಗಿ ನಡೆದ ಸಾಕಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್ ಅನೇಕ ರೀತಿಯ ತೀರ್ಪುಗಳನ್ನು ನೀಡಿದೆ.
ಇನ್ನು ಕಾನೂನಿನಲ್ಲಿ ವಿಚ್ಛೇದನ ಪಡೆಯಲು ಅನೇಕ ನಿಯಮವನ್ನು ಜಾರಿಗೊಳಿಸಲಾಗಿದೆ.ದಂಪತಿಗಳು ವಿಚ್ಛೇದನ ಪಡೆಯಲು ನಿರ್ಧರಿಸಿದರೆ ಕಾನೂನಿನ ನಿಯಮದ ಪ್ರಕಾರವೇ ವಿಚ್ಛೇದನವನ್ನು ಪಡೆಯಬೇಕು. ಇನ್ನು ವಿಚ್ಛೇಧನ (Divorce) ಪಡೆದ ದಂಪತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲದಲ್ಲಿ ವಿವಿಧ ರೀತಿಯ ಪ್ರಕರಣ ದಾಖಲಾಗಿರುತ್ತದೆ.
ಮದುವೆಯ ವಿಚ್ಛೇದನದ ಜೀವನಾಂಶ
ಇನ್ನು ನ್ಯಾಯಾಲಯದಲ್ಲಿ ಮದುವೆಯು ವಿಚ್ಛೇದನ ಪಡೆದ ನಂತರ ಪತ್ನಿಯು ಜೀವನಾಂಶವನ್ನು ಪಡೆಯಲು ಅರ್ಹಳೆ ಎನ್ನುವ ಕುರಿತು ನ್ಯಾಯಾಲಯದ್ಲಲಿ ನಿಯಮವಿದೆ. ಆದರೆ ಭಾರತೀಯ ಕಾನೂನಿನ ಪ್ರಕಾರ ಕೆಲವರು ಜೀವನಾಂಶವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
ಸದ್ಯ ಕರ್ನಾಟಕ ಹೈಕೋರ್ಟ್ ಇಂತಹ ಮಹಿಳೆಯರು ವಿಚ್ಛೇಧನದ ನಂತರ ಗಂಡನಿಂದ ಯಾವುದೇ ಜೀವನಾಂಶ ಕೇಳುವಂತಿಲ್ಲ ಎಂದು ಮಹತ್ವವಾದ ತೀರ್ಪನ್ನು ನೀಡಿದೆ. ಅಷ್ಟಕ್ಕೂ ಯಾವ ಮಹಿಳೆಯು ಜೀವನಾಂಶವನ್ನು ಪಡೆಯಲು ಅರ್ಹಳಲ್ಲ ಎನ್ನುವ ಬಗ್ಗೆ ವಿವರ ಇಲ್ಲಿದೆ.
ಇಂತಹ ಮಹಿಳೆಯರು ವಿಚ್ಛೇಧನದ ನಂತರ ಗಂಡನಿಂದ ಜೀವನಾಂಶ ಪಡೆಯಲು ಅರ್ಹರಲ್ಲ
ಸದ್ಯ ಪತಿ ಪತ್ನಿಯ ವಿಚ್ಛೇದನದ ಜೀವನಾಂಶಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲೇರಿದೆ. ಪತ್ನಿ ಪರ ಪುಷನೊಂದಿಗೆ ಸಂಬಂಧದಲ್ಲಿದ್ದು, ಪತಿಯು ತನ್ನ ಜೀವನದ ನಿರ್ವಹಣೆಗೆ ಜೀವನಾಂಶ ನೀಡಬೇಕು ಎಂದು ಕೋರಿ ಪತ್ನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ನ್ಯಾಯಾಲಯ ಈ ಕುರಿತು ತೀರ್ಪನ್ನು ನೀಡಿದೆ.
“ವಿವಾಹಿತ ಮಹಿಳೆಯು ಪತ್ನಿಯನ್ನು ತೊರೆದು ಪರ ಪುರುಷನೊಂದಿಗೆ ಸಹಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಪತಿಯಿಂದ ಜೀವನಾಂಶವನ್ನು ಕೋರುವ ಪರಿಸ್ಥಿತಿ ಉದ್ಭವಿಸುವುದಿಲ್ಲ” ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಮನೆ ಹಾಗೂ ಪತಿಯನ್ನು ಬಿಟ್ಟು ಪರ ಪುರುಷನೊಂದಿಗೆ ಇರುವ ಮಹಿಳೆಯು ಪತಿಯ ಬಳಿ ಜೀವನಾಂಶವನ್ನು ಕೇಳುವ ಹಕ್ಕನ್ನು ಹೊಂದುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.