Hostel Students: ಹಾಸ್ಟೆಲ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ, ಸರ್ಕಾರದ ಇನ್ನೊಂದು ಘೋಷಣೆ.

ಹಾಸ್ಟೆಲ್ ನಲ್ಲಿ ಓದುತ್ತಿರುವ ಮಕ್ಕಳಿಗಾಗಿ ಹೊಸ ಯೋಜನೆಯನ್ನ ಜಾರಿಗೆ ತಂದ ಕಾಂಗ್ರೆಸ್ ಸರ್ಕಾರ.

New Scheme For Karnataka Hostel Students: ಕರ್ನಾಟಕ ರಾಜ್ಯ ಸರ್ಕಾರ (Karnataka State Government) ರಾಜ್ಯದಲ್ಲಿ ಈಗಾಗಲೇ ಹಲವು ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಜನರ ವಿಶ್ವಾಸವನ್ನ ಗಳಿಸಿಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಅಧಿಕಾರಕ್ಕೆ ಬರುವ ಮುನ್ನಡೆ ಹಲವು ಘೋಷಣೆಯನ್ನ ಮಾಡಿದ್ದ ಕಾಂಗ್ರೆಸ್ ಸರ್ಕಾರ (Congress Government) ಈಗಾಗಲೇ ನಾಲ್ಕು ಘೋಷಣೆಯ ಯೋಜನೆಯನ್ನ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು ಮುಂದಿನ ಡಿಸೆಂಬರ್ ನಲ್ಲಿ ಐದನೇ ಘೋಷಣೆಯಾದ ಯುವ ನಿಧಿ ಯೋಜನೆಯನ್ನ (Yuva Nidhi Scheme) ಜಾರಿಗೆ ತರುವುದರ ಬಗ್ಗೆ ಭರವಸೆಯನ್ನ ನೀಡಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಸದ್ಯ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಮುಂದಿನ ಭವಿಷ್ಯದ ಉದ್ದೇಶದಿಂದ ಈಗ ಇನ್ನೊಂದು ಘೋಷಣೆಯನ್ನ ರಾಜ್ಯ ಸರ್ಕಾರ ಮಾಡಿದ್ದು ಇದು ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ. ಹಾಗಾದರೆ ಈ ಹೊಸ ಯೋಜನೆ ಯಾವುದು ಮತ್ತು ಯಾರು ಯಾರಿಗೆ ಇದರ ಲಾಭ ಸಿಗಲಿದೆ ಎಂದು ತಿಳಿಯೋಣ.

New Scheme For Karnataka Hostel Students
Image Credit: Hindustantimes

ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಹೌದು ರಾಜ್ಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ದೂರ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸವನ್ನ ಮಾಡುತ್ತಿದ್ದಾರೆ ಮತ್ತು ಮಕ್ಕಳು ಕಾಲೇಜಿನ ಹಾಸ್ಟೆಲ್ ನಲ್ಲಿ ಇದ್ದುಕೊಂಡು ತಮ್ಮ ವ್ಯಾಸಂಗವನ್ನ ಮಾಡುತ್ತಿದ್ದಾರೆ. ಸದ್ಯ ಹಾಸ್ಟೆಲ್ ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಸಿದ್ದರಾಮಯ್ಯ (Siddaramaiah) ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಇನ್ನೊಂದು ಘೋಷಣೆಯನ್ನ ಮಾಡಿದ್ದಾರೆ.

ಹಾಸ್ಟೆಲ್ ನಲ್ಲಿ ಓದುತ್ತಿರುವ ಈ ವಿದ್ಯಾರ್ಥಿಗಳಿಗೆ ಹೊಸ ಯೋಜನೆ
ಹೌದು ಪ್ರಸ್ತುತ ಸಾಲಿನಲ್ಲಿ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಲವು ಕಿಟ್ ಗಳನ್ನ ಒದಗಿಸಲು ಈಗ ರಾಜ್ಯ ಸರ್ಕಾರ ತೀರ್ಮಾನವನ್ನ ಮಾಡಿದೆ.

Hostel Students
Image Credit: Vijay Karnataka

ಮಕ್ಕಳಿಗೆ ಕೊಡುವ ಕಿಟ್ ನಲ್ಲಿ ಏನೇನು ಇರಲಿದೆ
ಸರ್ಕಾರ ಘೋಷಣೆ ಮಾಡಿರುವಂತೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಡುವ ಕಿಟ್ ನಲ್ಲಿ ಸೂಚಿ ಸಂಭ್ರಮ ಕಿಟ್, ಸಿರಿಗಂಧ ಕಿಟ್, ನಿರ್ಮಲ ಕಿಟ್ ಮತ್ತು ಸ್ಫೂರ್ತಿ ಕಿಟ್ ಗಳನ್ನ ನೀಡಲಾಗುತ್ತದೆ. ಇನ್ನು ಈ ಯೋಜನೆಗಾಗಿ ರಾಜ್ಯ ಸರ್ಕಾರ ಸುಮಾರು 87.65 ಕೋಟಿ ರೂಪಾಯಿಯನ್ನ ಮೀಸಲು ಇಟ್ಟಿದೆ ಎಂದು ಹೇಳಬಹುದು. ಮೇಲ್ಕಂಡ ವರ್ಗಕ್ಕೆ ಸೇರಿದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯ ಲಾಭವನ್ನ ಸಂಪೂರ್ಣವಾಗಿ ಪಡೆದುಕೊಳ್ಳಬಹುದು ಎಂದು ಸರ್ಕಾರ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.

Join Nadunudi News WhatsApp Group

ಬೇಸರ ಹೊರಹಾಕಿದ ವಿದ್ಯಾರ್ಥಿಗಳು
ಸದ್ಯ ಸರ್ಕಾರ ಈ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಈ ಕಿಟ್ ಗಳನ್ನ ಘೋಷಣೆ ಮಾಡಿದ್ದು ಅವರ ಜೊತೆಯಲ್ಲಿ ನಾವು ಕೂಡ ವ್ಯಾಸಂಗ ಮಾಡುತ್ತಿದ್ದು ನಮಗೆ ಯಾಕಿಲ್ಲ ಎಂದು ಪ್ರಶ್ನೆಯನ್ನ ಕೂಡ ಇಟ್ಟಿದ್ದಾರೆ. ಸರ್ಕಾರ ಯೋಜನೆಯ ಲಾಭ ಎಲ್ಲಾ ಮಕ್ಕಳಿಗೆ ಸಿಗುವಂತೆ ಮಾಡಬೇಕು ಅನ್ನುವುದು ಹಲವು ವಿದ್ಯಾರ್ಥಿಗಳ ಅಭಿಪ್ರಾಯ ಆಗಿರುತ್ತದೆ.

Join Nadunudi News WhatsApp Group