MLAs Salary: ಕರ್ನಾಟಕದ ಶಾಸಕರಿಗೆ ಪ್ರತಿ ತಿಂಗಳು ಎಷ್ಟು ಸಂಬಳ ಕೊಡಲಾಗುತ್ತದೆ, ಯಾವ ಉದ್ಯೋಗಿಗೂ ಸಿಗಲ್ಲ.

ಕರ್ನಾಟಕ ಶಾಸಕರುಗಳಿಗೆ ಒಂದು ತಿಂಗಳಿಗೆ ಎಷ್ಟು ಸಂಭಾವನೆಯನ್ನ ಕೊಡಲಾಗುತ್ತದೆ ತಿಳಿದುಕೊಳ್ಳಿ.

Salary of MLAs: ಕರ್ನಾಟಕ ವಿಧಾನಸಭಾ ಚುನಾವಣೆ (Assembly Election) ಮುಗಿದಿದ್ದು ಮೇ 13 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಶಾಸಕರ (MLA) ಆಯ್ಕೆಯಾಗಿದೆ.

ಹಲವಡೆ ಕಾಂಗ್ರೆಸ್ ಅಭ್ಯರ್ಥಿಗಳು ಶಾಸಕರ ಹುದ್ದೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಕೂಡ ಗೆದ್ದು ಶಾಸಕರಾಗಿದ್ದಾರೆ. ಇದೀಗ ಶಾಸಕರ ಹುದ್ದೆಗೆ ಎಷ್ಟು ವೇತನ ಸಿಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Salary For The Post Of MLA
Image Credit: google

ಶಾಸಕರ ಹುದ್ದೆಗೆ ಸಿಗುವ ವೇತನ ಎಷ್ಟು
ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ತನ್ನ ಅಧಿಕಾರವನ್ನು ಗಿಟ್ಟಿಸಿಕೊಂಡಿದೆ. ಇನ್ನು ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದು ರಾಜ್ಯದ ಜನತೆಯಲ್ಲಿ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಡುವೆ ಬಾರಿ ಪೈಪೋಟಿ ನಡೆಯುತ್ತಿದೆ.

ಇನ್ನು ವಿವಿಧ ಕ್ಷೇತ್ರದಲ್ಲಿ ಶಾಸಕರಾಗಿ ನಿಂತು ಸಾಕಷ್ಟು ಅಭ್ಯರ್ಥಿಗಳು ಶಾಸಕರ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಶಾಸಕರ ಹುದ್ದೆಗೆ ಮಾಸಿಕ ವೇತನ ಎಷ್ಟು ಸಿಗಲಿದೆ ಎನ್ನುವ ಬಗ್ಗೆ ತಿಳಿಯೋಣ.

ಶಾಸಕರ ಮೂಲ ವೇತನ 40 ಸಾವಿರ (MLA Basic Salary) 
ಇನ್ನು ಶಾಸಕರ ಮೂಲ ವೇತನ 40 ಸಾವಿರ ರೂ ಆಗಿದೆ. ಜನಸಾಮಾನ್ಯರು ಕಟ್ಟುವ ತೆರಿಗೆ ಹಣದ ಮೂಲಕ ಶಾಸಕರಿಗೆ ವೇತನವನ್ನು ನೀಡಲಾಗುತ್ತದೆ. ಇನ್ನು ಕ್ಷೇತ್ರದಲ್ಲಿ ಓಡಾಡಲು ಶಾಸಕರಿಗೆ ಪ್ರತಿ ತಿಂಗಳು ಕ್ಷೇತ್ರ ಭತ್ಯೆಯಾಗಿ 60 ಸಾವಿರ ಹಣವನ್ನು ನೀಡಲಾಗುತ್ತದೆ. ಜನರ ಸಮಸ್ಯೆಯ ನಿವಾರಣೆ ಮಾಡಲು ಈ ಹಣವನ್ನು ನೀಡಲಾಗುತ್ತದೆ.

Join Nadunudi News WhatsApp Group

The people of the state are curious about who will be the Chief Minister.
Image Credit: news18

ಶಾಸಕರ ಕಚೇರಿಗೆ ಯಾವುದೇ ವ್ಯಕ್ತಿ ಭೇಟಿ ನೀಡಿದಾಗ ಅಥವಾ ಮತದಾರರು ಕಚೇರಿಗೆ ಭೇಟಿ ನೀಡಿದಾಗ ಅವರಿಗೆ ಆತಿಥ್ಯ ಮಾಡಲು ಆಥಿತ್ಯ ಭತ್ಯೆಯಾಗಿ 21 ಸಾವಿರ ರೂಗಳನ್ನು ನೀಡಲಾಗುತ್ತದೆ. ಹಾಗೆಯೆ ದಿನ ಭತ್ಯೆಗಾಗಿ 2500 ಹಾಗೂ ಹೊರ ರಾಜ್ಯದ ಪ್ರವಾಸಕ್ಕಾಗಿ 7000 ರೂ. ಗಳನ್ನೂ ನೀಡಲಾಗುತ್ತದೆ.

Join Nadunudi News WhatsApp Group