Ration Facility: ಇನ್ನುಮುಂದೆ ರೇಷನ್ ಕಾರ್ಡ್ ಇದ್ದವರಿಗೆ ಸಿಗಲ್ಲ ಈ ಸೌಲಭ್ಯ, ರಾಜ್ಯ ಸರ್ಕಾರದ ಇನ್ನೊಂದು ಘೋಷಣೆ.
ರೇಷನ್ ಪಡೆಯದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ರಾಜ್ಯ ಸರ್ಕಾರ.
Karnataka Ration Card Facilities: ಸದ್ಯ ರಾಜ್ಯದಲ್ಲಿ Gruha Lakshmi ಹಾಗೂ Anna Bhagya ಯೋಜನೆಗಳಿಗೆ Ration Card ಮುಖ್ಯ ಪುರಾವೆಯಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಪಡಿತರ ಚೀಟಿದಾರರಿಗೊಂದು ಮಹತ್ವದ ಸುದ್ದಿ ಹೊರ ಬಿದ್ದಿದೆ. ಪಡಿತರ ಚೀಟಿ ಹೊಂದಿರುವವರು ಈ ಸುದ್ದಿಯನ್ನು ತಿಳಿದುಕೊಳ್ಳಲೇ ಬೇಕು.
ಇಂತವರ ರೇಷನ್ ಕಾರ್ಡ್ ಅಮಾನತು
ಇದೀಗ ಆರು ತಿಂಗಳಿಂದ ಪಡಿತರ ಪಡೆಯದ ಕುಟುಂಬದ BPL ಕಾರ್ಡ್ ಗಳನ್ನೂ ರದ್ದು ಮಾಡಲು ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. Ration Card ಜೊತೆಗೆ ಸೌಲಭ್ಯವು ಕಡಿತವಾಗುವ ಸಾಧ್ಯತೆ ಇದೆ. ಹೌದು ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರ ಪಡೆದುಕೊಳ್ಳದ BPL ಕಾರ್ಡ್ ರದ್ದು ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.
ಪಡಿತರ ಪಡೆಯದವರ ರೇಷನ್ ಕಾರ್ಡ್ ಜೊತೆ ಸೌಲಭ್ಯವೂ ಕಡಿತ
ರಾಜ್ಯದಲ್ಲಿ ಒಟ್ಟು 11695029 BPL ಕಾರ್ಡ್ ಹೊಂದಿದ ಕುಟುಂಬಗಳಿವೆ. ಅದರಲ್ಲಿ 3 .26 ಲಕ್ಷ BPL ಕಾರ್ಡ್ ದಾರರು ಆರು ತಿಂಗಳಿನಿಂದ ಪಡಿತರನ್ನು ಪಡೆದುಕೊಂಡಿಲ್ಲ. ಇಂತಹ ಕಾರ್ಡ್ ಗಳನ್ನೂ ಅಮಾನತು ಮಾಡಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.
ಹಾಗೆ ಕಾರ್ಡ್ ರದ್ದು ಮಾಡುವಾಗ ಪಡಿತರ ಚೀಟಿದಾರರಿಗೆ ಯಾವುದೇ ನೋಟಿಸ್ ನೀಡಲಾಗುದಿಲ್ಲ. ಒಂದು ವೇಳೆ ಅಂತವರ ಪಡಿತರ ಚೀಟಿ ರದ್ದು ಮಾಡಿದರೆ ತೀವ್ರ ಕಾಯಿಲೆಯಿಂದ ಬಳಲುತ್ತಿರುವವರು ಉಚಿತ ಚಿಕಿತ್ಸೆ ಪಡೆಯಲು, ಪಿಂಚಣಿ ಸೌಲಭ್ಯ ಪಡೆಯಲು, RTE ಶಿಕ್ಷಣ ಮುಂತಾದ ಸೌಲಭ್ಯ ಪಡೆಯಲು ಸಾಧ್ಯವಾಗುದಿಲ್ಲ. ರೇಷನ್ ಕಾರ್ಡ್ ರದ್ದು ಮಾಡುದರಿಂದ ಸರ್ಕಾರಕ್ಕೆ 60 ಕೋಟಿ ಉಳಿತಾಯವಾಗುತ್ತದೆ, ಆದರೆ ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗುತ್ತದೆ.