Ration Card: ಹೊಸ BPL ಮತ್ತು APL ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ, ಇನ್ನೊಂದು ಘೋಷಣೆ.

ಇಂತವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ

Ration Card New Update: ರಾಜ್ಯ ಮತ್ತು ಕೇಂದ್ರ ಸರ್ಕಾರ ಜನಸಾಮಾನ್ಯರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇನ್ನು ನಿಮಗೆ ತಿಳಿದಿರುವ ಹಾಗೆ ಸರ್ಕಾರ ಯೋಜನೆಗಳ ಲಾಭವನ್ನು ಪಡೆಯಲು Ration Card ಪ್ರಮುಖ ದಾಖಲೆಯಾಗಿದೆ.

ರೇಷನ್ ಕಾರ್ಡ್ ಇಲ್ಲದೆ ಇದ್ದಾರೆ ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ರಾಜ್ಯದ ಸಾಕಷ್ಟು ಜನರು ಹೊಸ APL ಹಾಗೂ BPL Ration Card ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಹೊಸ APL ಹಾಗೂ BPL Ration Card ಗಾಗಿ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಬಿಗ್ ಅಪ್ಡೇಟ್ ನೀಡಿದೆ.

Ration Card New Updates
Image Credit: DNA India

ಹೊಸ BPL ಮತ್ತು APL ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ
ರಾಜ್ಯದಾದ್ಯಂತ ಹೊಸ ರೇಷನ್‌ ಕಾರ್ಡ್‌ ಗೆ 2.95 ಲಕ್ಷ ಜನರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಲ್ಲಿಕೆಯನ್ನು ಆಹಾರ ಇಲಾಖೆ ಪರಿಷಕರಿಸುತ್ತಿದೆ. ಶೀಘ್ರದಲ್ಲೇ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುತ್ತದೆ ಎಂದು ಸರ್ಕಾರ ಘೋಷಿಸಿತ್ತು. ಜೂನ್ ನಲ್ಲಿ ಹೊಸ ರೇಷನ್ ಕಾರ್ಡ್ ಅನ್ನು ಪಡೆಯಬಹುದು ಎನ್ನುವ ನಿರೀಕ್ಷೆಯಲ್ಲಿ ಜನರು ಕಾದು ಕುಳಿತಿದ್ದರು. ಆದರೆ ಇದೀಗ ಆಹಾರ ಇಲಾಖೆ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯ ವಿಚಾರವಾಗಿ ಜನಸಾಮಾನ್ಯರಿಗೆ ಬೇಸರದ ಸುದ್ದಿಯೊಂದನ್ನು ನೀಡಿದೆ. ಹೌದು, ಸದ್ಯಕ್ಕೆ ಯಾವುದೇ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ, ವಿಲೇವಾರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಆಹಾರ ಇಲಾಖೆ ಅಧಿಕೃತವಾಗಿ ಘೋಷಿಸಿದೆ.

ಇಂರವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ
ಹೊಸ ಪಡಿತರ ಚೀಟಿಗಾಗಿ 2.95 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಅಪ್ಲಿಕೇಶನ್‌ ಗಳಲ್ಲಿ, ಕ್ಯಾನ್ಸರ್, ಮೂತ್ರಪಿಂಡ, ಹೃದಯ ಸಮಸ್ಯೆಗಳು ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರೂ ಇದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು, ಅಂತಹವರಿಗೆ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ವಿತರಿಸಲು ನಿರ್ಧರಿಸಿದ್ದು, ಶೀಘ್ರದಲ್ಲಿಯೇ ಕಾರ್ಡ್ ವಿತರಿಸಲಾಗುವುದು ಎಂದು ತಿಳಿದುಬಂದಿದೆ. ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಹೊಸ ರೇಷನ್ ಕಾರ್ಡ್ ಅನ್ನು ಪಡೆಯಲು ಇನ್ನು ಹೆಚ್ಚು ಸಮಯ ಕಾಯಬೇಕಾಗಿದೆ. ಈ ತಿಂಗಳಿನಲ್ಲಿ ಕ್ಯಾನ್ಸರ್, ಕಿಡ್ನಿ, ಹೃದಯ ಮತ್ತಿತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೊಸದಾಗಿ ಬಿಪಿಎಲ್ ನೀಡಲು ಆಹಾರ ಇಲಾಖೆ ಸಿದ್ಧವಾಗಿದೆ.

Karnataka Ration Card
Image Credit: Informal Newz

Join Nadunudi News WhatsApp Group

Join Nadunudi News WhatsApp Group