Documents Required For Ration Card Correction Karnataka: ಕರ್ನಾಟಕದಲ್ಲಿ ರೇಷನ್ ಕಾರ್ಡ್ ಬಹುತೇಕ ಕೆಲಸಗಳಿಗೆ ಅಗತ್ಯವಾದ ದಾಖಲೆ ಆಗಿದೆ. ರೇಷನ್ ಕಾರ್ಡ್ ಇಲ್ಲವಾದರೆ ಸರ್ಕಾರದ ಯೋಜನೆಗಳ ಲಾಭ, ಪಡಿತರ ಧಾನ್ಯ, ಇತ್ಯಾದಿಗಳಿಂದ ವಂಚಿತರಾಗಬೇಕಾಗುತ್ತದೆ. ಇದೀಗ ನಿಮ್ಮ ಕುಟುಂಬದಲ್ಲಿ ಯಾರಾದರೂ ಸದಸ್ಯರನ್ನು ಸೇರಿಸಬೇಕಿದ್ದರೆ ಅಥವಾ ಕೆಲವು ತಪ್ಪುಗಳನ್ನು ಸರಿಪಡಿಸಬೇಕಿದ್ದರೆ..? ಆನ್ಲೈನ್ ಮೂಲಕ ಕೆಲಸವನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ. ಇದೀಗ ರಾಜ್ಯ ಸರ್ಕಾರ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಒಂದು ಅವಕಾಶವನ್ನು ನೀಡಿದೆ. ಕೆಲವು ದಾಖಲೆ ಕೊಡುವುದರ ಮೂಲಕ ಈಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದು.
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ
ರೇಷನ್ ಕಾರ್ಡ್ ಒಂದು ಸಾಮಾನ್ಯ ದಾಖಲೆ ಅಲ್ಲ ಮತ್ತು ಇದು ಆಧಾರ್ ಕಾರ್ಡ್ ರೀತಿಯಲ್ಲಿಯೇ ಅತಿ ಮುಖ್ಯವಾದ ದಾಖಲೆ ಆಗಿದೆ. ಇದೀಗ ಪಡಿತರ ಚೀಟಿಗೆ ಹೆಸರು ಸೇರ್ಪಡೆ, ಪಡಿತರ ಚೀಟಿ ಯಲ್ಲಿ ಕೆಲವು ತಿದ್ದುಪಡಿ ಮಾಡಬೇಕು ಅಂದುಕೊಂಡಿದ್ದರೆ ರಾಜ್ಯ ಸರ್ಕಾರ ಒಂದು ಅವಕಾಶವನ್ನು ನೀಡಿದೆ. ಇದೀಗ ನೀವು ಕೆಲವು ಅಗತ್ಯ ದಾಖಲೆಯನ್ನು ನೀಡುವ ಮೂಲಕ ಪಡಿತರ ಚೀಟಿಗೆ ಹೊಸ ಸದಸ್ಯರ ಸೇರ್ಪಡೆ, ತಿದ್ದುಪಡಿ, ಅಥವಾ ಮರಣ ಹೊಂದಿದವರ ಹೆಸರನ್ನು ತೆಗೆದುಹಾಕಬಹುದಾಗಿದೆ.
ಅಗತ್ಯವಾಗಿ ಬೇಕಾಗುವ ದಾಖಲೆಗಳು
* ಆಧಾರ್ ಕಾರ್ಡ್
* ಜನನ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಬುಕ್
* ಅಫಿಡವಿಟ್ :
* ಮರಣ ದಾಖಲೆ ಅಥವಾ ವಿವಾಹ ಪ್ರಮಾಣಪತ್ರ (ಬದಲಾವಣೆಗೆ ಸಂಬಂಧಿಸಿದ ದಾಖಲೆ)
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಸ್ಥಳೀಯ ಸೇವಾ ಸಿಂಧು, ಗ್ರಾಮ ಪಂಚಾಯಿತಿ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಮತ್ತು ಆನ್ಲೈನ್ ಮೂಲಕ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಾಗಿದೆ. ದಾಖಲೆಗಳು ಇಲ್ಲವಾದರೆ ನಿಮ್ಮ ಅರ್ಜಿ ತಿರಸ್ಕಾರ ಆಗಬಹುದು. ಮೊದಲು ಆಹಾರ ಇಲಾಖೆಯ (https://ahara.karnataka.gov.in/) ವೆಬ್ ಸೈಟ್ ಗೆ ಭೇಟಿ ನೀಡಿ, ಅಗತ್ಯ ಮಾಹಿತಿಯನ್ನು ತಿಳಿದುಕೊಂಡು, ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್ ಅಥವಾ ತಾಲೂಕು ಆಹಾರ ಇಲಾಖೆ ಕಚೇರಿಗೆ ಹೋಗಿ ಫೋರ್ಮ್ ಪಡೆದುಕೊಂಡು ಬದಲಾವಣೆಯ ವಿವರವನ್ನು ಭರ್ತಿ ಮಾಡಿ, ಅಗತ್ಯ ದಾಖಲೆಯನ್ನು ನೀಡಿ, ಶುಲ್ಕವನ್ನು ಪಾವತಿ ಮಾಡಬೇಕು. ನಂತರ ಅರ್ಜಿ ಸ್ವೀಕೃತಿಯ ಪ್ರಿಂಟ್ ಅನ್ನು ತೆಗೆದುಕೊಂಡು ಇಲಾಖೆಗೆ ನೀಡಬೇಕು. 7 ರಿಂದ 30 ದಿನಗಳ ಒಳಗೆ ಹೊಸ ರೇಷನ್ ಕಾರ್ಡ್ ನಿಮಗೆ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ 1800-425-0093 ಹೆಲ್ಪ್ ಲೈನ್ ಗೆ ಕರೆ ಮಾಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

