Karnataka Toll Gates: ಆಶ್ಚರ್ಯಕ್ಕೆ ಕಾರಣವಾಯಿತು ಐದು ವರ್ಷದಲ್ಲಿ ವಾಹನ ಸವಾರರು ಕಟ್ಟಿದ ಒಟ್ಟು ಟೋಲ್ ಮೊತ್ತ.

Karnataka Toll Gates Collection: ರಾಷ್ಟ್ರೀಯ ಹಾಗು ರಾಜ್ಯ ಹೆದ್ದಾರಿಗಳ ಟೋಲ್ ಶುಲ್ಕ (Toll Fee) ಸಂಗ್ರಹಿಸುವುದು ಸಾಮಾನ್ಯ ಸಂಗತಿ.

ಆದರೆ ಟೋಲ್ ಪಾವತಿ ಮಾಡಿದರು ಸಹ ರಸ್ತೆಗಳ ಗುಣಮಟ್ಟ ಸರಿ ಇಯುವುದಿಲ್ಲ ಎಂಬ ಆರೋಪ ವಾಹನ ಸವಾರರಿಂದ ಪದೇ ಪದೇ ಕೇಳಿ ಬರುತ್ತಿರುತ್ತದೆ. ಅಲ್ಲದೆ ಅತಿ ಹೆಚ್ಚು ಶುಲ್ಕ ಪಡೆಯಲಾಗುತ್ತದೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ.

The total amount of toll paid by motorists in five years was surprising.
Image Source: India Today

ದೇಶದಲ್ಲಿ ಹೆಚ್ಚಳವಾದ ಟೋಲ್ ಶುಲ್ಕ
ಕಳೆದ ಐದು ವರ್ಷಗಳಲ್ಲಿ ಅಂದರೆ 2018 ರ ಏಪ್ರಿಲ್ ನಿಂದ 2022 ರ ಡಿಸೆಂಬರ್ ವರೆಗೆ ಸಂಗ್ರಹವಾಗಿರುವ ಟೋಲ್ ಶುಲ್ಕ ದಂಗಾಗಿಸುವಂತಿದೆ. ಈ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ ಒಂದೂವರೆ ಲಕ್ಷ ಕೋಟಿ ರೂಪಾಯಿ ಸಂಗ್ರವಾಗಿದ್ದರೆ ಈ ಪೈಕಿ ಕರ್ನಾಟಕದ ಪಾಲು ಸರಿಸುಮಾರು 10,000 ಕೋಟಿ ರೂಪಾಯಿಗಳಾಗಿವೆ.

The total amount of toll paid by motorists in five years was surprising.
Image Source; India Today

ಟೋಲ್ ಸಂಗ್ರಹಣೆಯಲ್ಲಿ ರಾಜಸ್ತಾನಕ್ಕೆ ಎರಡನೇ ಸ್ಥಾನ
ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಟೋಲ್ ಸಂಗ್ರಹದಲ್ಲಿ ಗಣನೀಯ ಹೆಚ್ಚಳವಾಗಿದ್ದು ಐದು ವರ್ಷಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 17,242 .9 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ರಾಜಸ್ತಾನದಲ್ಲಿ 16,565.9 ಕೋಟಿ ರೂಪಾಯಿ.

The total amount of toll paid by motorists in five years was surprising.
Image Source: India Today

ಟೋಲ್ ಸಂಗ್ರಹಣೆಯಲ್ಲಿ ಕರ್ನಾಟಕಕ್ಕೆ ಆರನೇ ಸ್ಥಾನ
ಇನ್ನು ಮೂರನೇ ಸ್ಥಾನದಲ್ಲಿ ಇರುವ ಗುಜರಾತಿನಲ್ಲಿ 15332.2 ಕೋಟಿ ರೂಪಾಯಿ ಸಂಗ್ರಹವಾಗಿದೆ. ಟೋಲ್ ಸಂಗ್ರಹಣೆಯಲ್ಲಿ ಕರ್ನಾಟಕ 6 ನೇ ಸ್ಥಾನದಲ್ಲಿದ್ದು ಐದು ವರ್ಷಗಳ ಅವಧಿಯಲ್ಲಿ ಒಟ್ಟು 9982.6 ಕೋಟಿ ರೂಪಾಯಿ ಸಂಗ್ರಹವಾಗಿದೆ.

Join Nadunudi News WhatsApp Group

ಈ ಪೈಕಿ 2018-19 ರಲ್ಲಿ 1830.1 ಕೋಟಿ ರೂಪಾಯಿ. 2021- 22 ರಲ್ಲಿ 2269.2 ಕೋಟಿ ರೂಪಾಯಿ ಹಾಗು 2022 ರಲ್ಲಿ 2268.9 ಕೋಟಿ ರೂಪಾಯಿ ಸಂಗ್ರಹ ಆಗಿದೆ.

The total amount of toll paid by motorists in five years was surprising.
Image Source: India Today

Join Nadunudi News WhatsApp Group