Karnataka Scheme: ಗೃಹಲಕ್ಷ್ಮಿ ಬೆನ್ನಲ್ಲೇ BPL ರೇಷನ್ ಕಾರ್ಡ್ ಇರುವರಿಗೆ ಇನ್ನೊಂದು ಯೋಜನೆ ಜಾರಿ, ಸಿಗಲಿದೆ 3000 ರೂ.

BPL ರೇಷನ್ ಕಾರ್ಡ್ ಹೊಂದಿರುವವರಿಗೆ ಈ ಯೋಜನೆಯಲ್ಲಿ ಸಿಗಲಿದೆ 3000 ಸಾವಿರ ರೂಪಾಯಿ.

Karnataka Samagra Mathru Arogya Palana Scheme: ರಾಜ್ಯ ಸರ್ಕಾರ ಇತ್ತೀಚಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಐದು ಯೋಜನೆಗಳನ್ನು ಅನುಷ್ಠಾನಗೊಳಿಸುವ ಭರವಸೆ ನೀಡಿತ್ತು.ಈಗಾಗಲೇ ರಾಜ್ಯದಲ್ಲಿ ನಾಲ್ಕು ಯೋಜನೆಗಳು ಜಾರಿಯಾಗಿದ್ದವು. ಇನ್ನು ಒಂದು ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಸದ್ಯದಲ್ಲೇ ಯುವ ನಿಧಿ ಯೋಜನೆಯ ಅರ್ಜಿ ಸಲ್ಲಿಕೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಮನೆ ಒಡತಿಯರು 2000 ಮಾಸಿಕ ಭತ್ಯೆ ಪಡೆಯಲು ಕಾಯುತ್ತಿದ್ದಾರೆ. ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಹೆಚ್ಚಾಗಿ ಮಹಿಳೆಯರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದೆ. ಇದೀಗ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಮತ್ತೊಂದು ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೆ. ರಾಜ್ಯದ ಮಹಿಳೆಯರು ಕರ್ನಾಟಕ ಸರ್ಕಾರದ ಈ ಹೊಸ ಯೋಜನೆ ಲಾಭವನ್ನು ಪಡೆಯಬಹುದಾಗಿದೆ.

Karnataka Samagra Mathru Arogya Palana Scheme update
Image Credit: Goodreturns

ಗೃಹಲಕ್ಷ್ಮಿ ಬೆನ್ನಲ್ಲೇ BPL ರೇಷನ್ ಕಾರ್ಡ್ ಇರುವ ಇನ್ನೊಂದು ಯೋಜನೆ ಜಾರಿಗೆ
ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಈಗಾಗಲೇ ಲಕ್ಷಾಂತರ ಮಹಿಳೆಯರು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಬೆನ್ನಲ್ಲೇ BPL ರೇಷನ್ ಕಾರ್ಡ್ ಹೊಂದಿರುವವರಿಗಾಗಿ ಸರ್ಕಾರ ಇನ್ನೊಂದು ಯೋಜನೆ ಜಾರಿಗೆ ತಂದಿದೆ. ಪ್ರಮುಖವಾಗಿ ಗರ್ಭಿಣಿಯರಿಗಾಗಿ ಈ ಹೊಸ ಯೋಜನೆಯನ್ನು ರೂಪಿಸಲಾಗಿದೆ. ರಾಜ್ಯದಲ್ಲಿನ ಗರ್ಭಿಣಿಯರು, ಬಾಣಂತಿಯರಿಗಾಗಿ ಕರ್ನಾಟಕ ಸರ್ಕಾರ ಕರ್ನಾಟಕ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆಯನ್ನು ಜಾರಿಗೊಳಿಸಿದೆ.

ಕರ್ನಾಟಕ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆ
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ, ಹೆರಿಗೆಗೂ ಮುನ್ನ ಮತ್ತು ನಂತರ ವೆಚ್ಚಗಳನ್ನು ನೋಡಿಕೊಳ್ಳಲು ಹಣಕಾಸಿನ ನೆರವು ನೀಡುವುದು, ಮಡಿಲು ಕಿಟ್ ಮೂಲಕ 19 ವಸ್ತುಗಳ ಕಿಟ್ ಒದಗಿಸುವುದು ಈ ಕರ್ನಾಟಕ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆಯ ಉದ್ದೇಶವಾಗಿದೆ. ತಾಯಿ ಭಾಗ್ಯ ಯೋಜನೆ, ತಾಯಿ ಭಾಗ್ಯ ಪ್ಲಸ್ ಯೋಜನೆ, ಪ್ರಸೂತಿ ಅರೈಕೆ ಯೋಜನೆ, ಮಡಿಲು ಕಿಟ್ ಯೋಜನೆಯೇ ಎಂಬ ನಾಲ್ಕು ಪ್ರಮುಖ ಪ್ರಯೋಜವನ್ನು ಈ ಯೋಜನೆಯಡಿ ಪಡೆಯಬಹುದು.

Karnataka Samagra Mathru Arogya Palana Scheme latest news
Image Credit: Goodreturns

ಈ ಯೋಜನೆಯಡಿ 3000 ಹಣ ಪಡೆಯಬಹುದು
ತಾಯಿ ಭಾಗ್ಯ ಪ್ಲಸ್ ಯೋಜನೆಯು ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಯಾದವರಿಗೆ 1000 ರೂ. ಆರ್ಥಿಕ ನೆರವನ್ನು ನೀಡಲಿದೆ. ಇನ್ನು ಪ್ರಸೂತಿ ಆರೈಕೆ ಯೋಜನೆಯಡಿ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸೇರಿದ್ ಹಾಲುಣಿಸುವ ತಾಯಿಗೆ 3000 ರೂ. ಬಿಪಿಎಲ್ ಕಾರ್ಡ್ ಹೊಂದಿರುವ ಮಗುವಿಗೆ ಹಾಲುಣಿಸುವ ತಾಯ್ಗೆ 2000 ರೂ. ಹಾಗೆ ಮಡಿಲು ಕಿಟ್ ಯೋಜನೆಯಡಿ 19 ವಸ್ತುಗಳಿರುವ 1500 ರೂ. ಮೌಲ್ಯದ ಕಿಟ್ ಅನ್ನು ನೀಡಲಾಗುತ್ತದೆ. ಆಶಾ ಕಾರ್ಯಕರ್ತೆ ಅಥವಾ ಕಿರಿಯ ಕುಟುಂಬ ಆರೋಗ್ಯ ಅಧಿಕಾರಿಯು ಮಹಿಳೆಯರನ್ನು ಸಂಪರ್ಕಿಸುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group