School Opening: ಎಲ್ಲಾ ವಿದ್ಯಾರ್ಥಿಗಳ ಗಮನಕ್ಕೆ, ರಾಜ್ಯದಲ್ಲಿ ಶಾಲಾ ಆರಂಭದ ದಿನಾಂಕ ಪ್ರಕಟವಾಗಿದೆ.
ಮೇ 29 ರಿಂದ ರಾಜ್ಯದಲ್ಲಿ ಎಲ್ಲಾ ಶಾಲೆಗಳು ತೆರೆಯಲಿದೆ ಎಂದು ಸರ್ಕಾರ ಸೂಚನೆಯನ್ನ ನೀಡಿದೆ.
School Opening Date: ಇದೀಗ ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಇಷ್ಟು ದಿನಗಳ ಕಾಲ ಪರೀಕ್ಷೆ ಮುಗಿಸಿ ರಾಜಾ ದಿನಗಳನ್ನು ಕಳೆಯುತ್ತಿದ್ದ ಶಾಲಾ ಮಕ್ಕಳಿಗೆ ಇದೆ ಮೇ 29 ರಂದು ಮತ್ತೆ ಶಾಲೆ ತೆರೆಯಲಿದೆ.
ಮೇ 29 ರಿಂದ ಶಾಲೆಗಳು
2023-24 ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಅದರಂತೆ ಈ ಬಾರಿ ಬೇಸಿಗೆ ರಜೆಯ ಮುಕ್ತಾಯದ ನಂತರ ಮೇ 29 ರಿಂದಲೇ ಶಾಲೆಗಳು ಆರಂಭಗೊಳ್ಳಲಿವೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. 2023-24 ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದು, ರಾಜ್ಯಾದ್ಯಂತ ಏಕರೂಪದ ಯಶಸ್ವಿ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಸಿದ್ದಪಡಿಸಲಾಗಿದೆ ಎಂದಿದ್ದಾರೆ.
ಶಾಲಾ ಕರ್ತವ್ಯದ ದಿನಗಳು
ದಿನಾಂಕ 29-05-2023 ರಿಂದ ದಿನಾಂಕ 07-10 -2023 ರವರೆಗೆ ಮೊದಲನೇ ಅವಧಿಗೆ ಶಾಲಾ ಕರ್ತವ್ಯ ದಿನಗಳನ್ನು ನಿಗದಿಪಡಿಸಲಾಗಿದೆ.
ದಿನಾಂಕ 25-10-2023 ರಿಂದ ದಿನಾಂಕ 10-04-2024 ರವರೆಗೆ ಎರಡನೇ ಅವಧಿಗೆ ಶಾಲಾ ಕರ್ತವ್ಯದ ದಿನಗಳನ್ನು ನಿಗದಿಪಡಿಸಲಾಗಿದೆ.
ಶಾಲಾ ರಜಾ ದಿನಗಳು
ದಸರಾ ರಜೆಯನ್ನು ದಿನಾಂಕ 08-10-2023 ರಿಂದ ದಿನಾಂಕ 24-10-2023 ರ ವರೆಗೆ ನೀಡಲಾಗಿದೆ. ಈ ಬಾರಿ ಶಾಲೆ ಆರಂಭದ ದಿನವೇ ಸಿಗಲಿದೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು. ಇನ್ನು ಬೇಸಿಗೆ ರಜೆಯನ್ನು ದಿನಾಂಕ 11 -04 -2024 ರಿಂದ ದಿನಾಂಕ 28 -05 2024 ರವರೆಗೆ ನೀಡಲಾಗಿದೆ.
ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ. ಈ ಬಾರಿ ವಿದ್ಯಾರ್ಥಿಗಳಿಗೆ ಶಾಲೆಗಳು ಆರಂಭವಾಗುವ ವೇಳೆಗೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲು ನಿರ್ಧರಿಸಲಾಗಿದೆ.