Solar Power: ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಜಾರಿಗೆ ಬಂತು ಸೋಲಾರ್ ಯೋಜನೆ.

ರೈತರಿಗೆ ಹೊಸ ಸೋಲಾರ್ ಪಂಪ್ ಯೋಜನೆಯನ್ನ ಜಾರಿಗೆ ತಂದ ಕಾಂಗ್ರೆಸ್ ಸರ್ಕಾರ.

Karnataka Solar Power Scheme: ಸದ್ಯ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ವಿವಿಧ ಯೋಜನೆಗಳನ್ನು ಪರಿಚಯಿಸುತ್ತ ರಾಜ್ಯದ ಜನತೆಗೆ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ಈಗಾಗಲೇ ರಾಜ್ಯ ಸರಕಾರ ರಾಜ್ಯದ ರೈತರಿಗಾಗಿ ಅನೇಕ ಸೌಲಭ್ಯವನ್ನು ಒದಗಿಸುತ್ತ ರೈತರಿಗೆ ಆರ್ಥಿಕವಾಗಿ ಬೆಂಬಲವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಸದ್ಯ ಎಲ್ಲೆಡೆ ಮಳೆಯ ಅಭಾವದಿಂದ ಜನರು ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನಬಹುದು. ರೈತರಿಗೆ ನೀರಾವರಿ ಸೌಲಭ್ಯ ನೀಡಲು ಸರ್ಕಾರ ವಿವಿಧ ರೀತಿಯಲ್ಲಿ ನೆರವಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ರೈತರಿಗೆ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ.

Karnataka Solar Power Scheme
Image Source: The Economic Times

ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ
ಕರ್ನಾಟಕ ಸರ್ಕಾರವು ಲಕ್ಷಾಂತರ ನೀರಾವರಿ ಪಂಪ್ ಸೆಟ್‌ಗಳನ್ನು ಸೌರಶಕ್ತಿ ಚಾಲಿತ ಪಂಪ್‌ ಸೆಟ್‌ ಗಳಾಗಿ ಪರಿವರ್ತಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಪಂಪ್ ಸೆಟ್‌ ಗಳಿಗೆ ನೀಡಲಾಗುವ ವಿದ್ಯುತ್ ಸಬ್ಸಿಡಿಯ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮೂಲಕ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.

ರಾಜ್ಯದಲ್ಲಿ ಜಾರಿಗೆ ಬಂತು ಸೋಲಾರ್ ಯೋಜನೆ
ಸದ್ಯ ರಾಜ್ಯ ಸರ್ಕಾರ ರೈತರಿಗಾಗಿ ಸೋಲಾರ್ ಯೋಜನೆಯನ್ನು ಪರಿಚಯಿಸಲು ಮುಂದಾಗಿದೆ. ಸೋಲಾರೈಸೇಶನ್ ಯೋಜನೆಯಡಿ, ನೀರಾವರಿ ಪಂಪ್‌ ಗಳಿಗೆ ವಿದ್ಯುತ್ ಸರಬರಾಜು ಮಾಡಲು ಸಬ್‌ ಸ್ಟೇಷನ್‌ ಗಳ ಬಳಿ ಸೌರ ಘಟಕಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸರಕಾರ ಕಂದಾಯ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಎಕರೆಗೆ 1 ರೂ., ಖಾಸಗಿ ಭೂಮಿಯನ್ನು ಮಾರುಕಟ್ಟೆ ಬೆಲೆಗೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.

siddaramaih about new scheme for ladies
Image Credit: Original Source

ರೈತರ ಮಾಲಿಕತ್ವದ ನೀರಾವರಿ ಪಂಪ್ ಸೆಟ್ (ಐಪಿ) ಹಾಗೂ ಸಬ್ ಸ್ಟೇಷನ್ ಹಂತದಲ್ಲಿ ಸೋಲಾರೈಸೇಶನ್ ಮಾಡಲು ಸರ್ಕಾರ ನಿರ್ಧರಿಸಿದೆ. ಐಪಿ ಸೆಟ್ ಗಳಿಗೆ ಶೇ. 70 ರಿಂದ 80 ರಷ್ಟು ವಿದ್ಯುತ್ ಪೂರೈಕೆ ಮಾಡುವ ಸಬ್ ಸ್ಟೇಷನ್ ಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ರಾಜ್ಯದಲ್ಲಿ 34 ಲಕ್ಷ ಐಪಿ ಸೆಟ್ ಗಳಿದ್ದು, ಇದಕ್ಕೆ ವಿದ್ಯುತ್ ಸಬ್ಸಿಡಿಗಾಗಿ ಸರ್ಕಾರ ವಾರ್ಷಿಕ 15000 ಕೋಟಿ ರೂ. ಖರ್ಚು ಮಾಡುತ್ತಿದೆ. ಈಗ ವಾರ್ಷಿಕ 1 ಲಕ್ಷ ಐಪಿ ಸೆಟ್ ಗಳನ್ನೂ ಸೌರ ವಿದ್ಯುತ್ ವ್ಯಾಪ್ತಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ.

Join Nadunudi News WhatsApp Group

Join Nadunudi News WhatsApp Group