SSLC and PUC Passing Marks In Karnataka: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇತ್ತೀಚಿಗೆ SSLC ಹಾಗೂ PUC ಪರೀಕ್ಷೆಯಲ್ಲಿ ಹಲವಾರು ಬದಲಾವಣೆಗಳನ್ನ ಜಾರಿಗೆ ತಂದಿದೆ. ಕಳೆದ ಕೆಲವು ವರ್ಷಗಳಿಂದ SSLC ಹಾಗೆ PUC ಪರೀಕ್ಷೆಯಲ್ಲಿ ಮಕ್ಕಳ ಉತ್ತೀರ್ಣ ಶೇಕಡಾವಾರು ಕಡಿಮೆಯಾಗುತ್ತಿತ್ತು, ಈ ಕಾರಣಕ್ಕಾಗಿ ಈಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ SSLC ಹಾಗೆ PUC ಪರೀಕ್ಷೆಯ ಪಾಸಿಂಗ್ ಅಂಕವನ್ನು ಕಡಿಮೆ ಮಾಡಲು ಮುಂದಾಗಿದೆ. ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯಕವಾಗಲಿದೆ. ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
SSLC ಮತ್ತು PUC ಪಾಸಿಂಗ್ ಅಂಕ ಕಡಿತ
ಹೌದು ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಕ್ಕಳ ಭವಿಷ್ಯದ ಉದ್ದೇಶದಿಂದ ಪಾಸಿಂಗ್ ಅಂಕವನ್ನು ಕಡಿತ ಗೊಳಿಸಿದೆ. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸ್ಫಷ್ಟನೆಯೊಂದಿಗೆ ಈ ನಿಯಮವನ್ನು ಜಾರಿಗೆ ತಂದಿದೆ. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ SSLC ಮತ್ತು PUC ಪಾಸಿಂಗ್ ಅಂಕವನ್ನು 35% ನಿಂದ 33% ಗೆ ಇಳಿಕೆ ಮಾಡಿದೆ. ಈ ನಿಯಮ 2025-26 ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬಂದಿದೆ.
ಪಾಸಿಂಗ್ ಅಂಕ ಕಡಿಮೆ ಮಾಡಲು ಕಾರಣ
ಕಳೆದ ಕೆಲವು ವರ್ಷದಿಂದ SSLC ಹಾಗೂ PUC ಪರೀಕ್ಷೆಯ ಉತ್ತೀರ್ಣದ ಅಂಕ ಶೇಕಡಾವಾರು ಕಡಿಮೆಯಾಗುತ್ತಿತ್ತು. ಹೌದು ವೆಬ್ ಕಾಸ್ಟಿಂಗ್ ಮತ್ತು ಕಟ್ಟುನಿಟ್ಟಾದ ನಿಯಮದಿಂದ ಪಾಸಿಂಗ್ ಅಂಕ ಶೇಕಡಾ 62 ಕ್ಕಿಂತ ಕಡಿಮೆಯಾಗಿರುತಿತ್ತು. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಬೇಸತ್ತಿದ್ದರು. ಇದನ್ನು ಗಮನಿಸಿದ ಸರ್ಕಾರ ಈ ಸಮಸ್ಯೆಗೆ ಪರಿಹಾರ ಹುಡುಕಿ, ಕರ್ನಾಟಕ ಅಡ್ಮಿಸ್ಟ್ರೇಟಿವ್ ರಿಪೋರ್ಮ್ಸ್ ಕಮಿಷನ್ – 2 ರ ಶಿಫಾರಸ್ಸಿನ ಆಧಾರದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. 15 ದಿನಗಳ ಸಾರ್ವಜನಿಕ ಸಮಾಲೋಚನೆಯಲ್ಲಿ 701 ಪತ್ರಗಳು ಬೆಂಬಲವನ್ನು ನೀಡಿದ್ದವು ಮತ್ತು 8 ಪತ್ರಗಳು ವಿರೋಧವನ್ನು ವ್ಯಕ್ತಪಡಿಸಿದ್ದವು.
ಪಾಸಿಂಗ್ ಅಂಕದ ವಿವರ
SSLC ಪಾಸಿಂಗ್ ಅಂಕವನ್ನು 35 % ನಿಂದ 33 % ಗೆ ಇಳಿಕೆ ಮಾಡಿದ್ದು ( 625 ರಲ್ಲಿ ಕನಿಷ್ಠ 206 ) ಪ್ರತಿ ವಿಷಯಕ್ಕೆ 30 % ಅಗತ್ಯವಾಗಿದೆ. ಹಾಗೆ PUC ಪಾಸಿಂಗ್ ಅಂಕವನ್ನು 35 % ನಿಂದ 33 % ಗೆ ಇಳಿಕೆ ಮಾಡಿದ್ದು ( 600 ರಲ್ಲಿ ಕನಿಷ್ಠ 198 ) ಪ್ರತಿ ವಿಷಯಕ್ಕೆ 30 % ಅಗತ್ಯವಾಗಿದೆ. ಇಂಟರ್ನಲ್ ಅಸೈನ್ಮೆಂಟ್ ಗಳನ್ನೂ ಸೇರಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಈ ನಿಯಮ 2025-26 ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬಂದಿದೆ.
ಸಚಿವ ಮಧು ಬಂಗಾರಪ್ಪ ಹೇಳಿಕೆ
ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರು “ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದು ಸಹಾಯಕ ಆಗಲಿದೆ, ಇದು ಉದ್ಯೋಗ, ಡೈವಿಂಗ್ ಲೈಸನ್ಸ್ ಗಳಿಗೆ ಉಪಯೋಗ ಆಗಲಿದೆ. ಇತರ ರಾಜ್ಯದಲ್ಲಿ ಕೂಡ 30 % – 33 % ನಿಯಮವಿದ್ದು ಕರ್ನಾಟಕ ಕೂಡ ಅದರೊಂದಿಗೆ ಹೊಂದಿಕೊಳ್ಳುತ್ತದೆ. ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗದಂತೆ ಇದು ರಕ್ಷಣೆ ನೀಡುತ್ತದೆ. ಆದರೆ ಇದು ಶಿಕ್ಷದ ಗುಣಮಟ್ಟ ಕಡಿಮೆ ಮಾಡುತ್ತದೆ. ಇದರಿಂದ ಪಾಸಿಂಗ್ ಶೇಕಡಾವಾರು ಹೆಚ್ಚಾಗಲಿದ್ದು, ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಹೊಸ ದಿಕ್ಕು ಸಿಗುತ್ತದೆ ” ಎಂದು ಹೇಳಿದ್ದಾರೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

