Tech Tips: : ಕರ್ನಾಟಕದಲ್ಲಿ ಮೊಬೈಲ್ ಬಳಕೆ ಮಾಡುವವರಿಗೆ ರಾಜ್ಯ ಪೊಲೀಸ್ ಇಲಾಖೆಯ ಹೊಸ ಆದೇಶ
ಇದೀಗ ಜನಸಾಮಾನ್ಯರು Mobile Phone ಅನ್ನು ಕಳೆದುಕೊಂಡರೆ ಚಿಂತಿಸುವ ಅಗತ್ಯ ಇಲ್ಲ. ಇದಕ್ಕಾಗಿ ಹೊಸ Application ಅನ್ನು ಕಂಡು ಹಿಡಿಯಲಾಗಿದೆ.
Karnataka State Police Application: ಸಾಮಾನ್ಯವಾಗಿ ಮೊಬೈಲ್ ಫೋನ್ ಗಳನ್ನೂ (Mobile Phone) ಎಲ್ಲರು ಬಳಸುತ್ತಾರೆ. ಇತ್ತೀಚಿಗೆ ಮೊಬೈಲ್ ಫೋನ್ ಮಾನವನ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಜನರು ಅಷ್ಟೊಂದು ಮೊಬೈಲ್ ಫೋನ್ ಗೆ ಅವಲಂಭಿಸಿದ್ದಾರೆ.
ಈಗಿನ ಕಾಲದಲ್ಲಿ ಎಲ್ಲ ಕೆಲಸವನ್ನು ತಮ್ಮ ಸ್ಮಾರ್ಟ್ ಫೋನುಗಳ ಮೂಲಕವೇ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ವ್ಯಕ್ತಿಗಳ ಹೆಚ್ಚಿನ ದಾಖಲೆಗಳನ್ನು ಅವರು ಸ್ಮಾರ್ಟ್ ಫೋನ್ ನಲ್ಲಿಯೇ ಇಟ್ಟುಕೊಳ್ಳುತ್ತಾರೆ. ಇದೀಗ ನಿಮ್ಮ ಸ್ಮಾರ್ಟ್ ಫೋನ್ ಕಳುವಾದರೆ ಸಹಾಯವಾಗಲು ಹೊಸ ಸೌಲಭ್ಯವನ್ನು ಪರಿಚಯಿಸಲಾಗಿದೆ.
ನಿಮ್ಮ Mobile Phone ಕಳುವಾದರೆ ಚಿಂತಿಸುವ ಅಗತ್ಯವಿಲ್ಲ
ಒಂದು ವೇಳೆ ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಅದರಲ್ಲಿರುವ ಎಲ್ಲ ಮಾಹಿತಿಯು ಹೋಗುತ್ತದೆ. ಜನರ ಹಿತದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಡೇಟಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಂಚಾರ್ ಸಾಥಿ ಪೋರ್ಟಲ್ ಸೇವೆಗಳನ್ನು ಒದಗಿಸುತ್ತಿದೆ.
ಇದೀಗ ಜನಸಾಮಾನ್ಯರು Mobile Phone ಅನ್ನು ಕಳೆದುಕೊಂಡರೆ ಚಿಂತಿಸುವ ಅಗತ್ಯ ಇಲ್ಲ. ಇದಕ್ಕಾಗಿ ಹೊಸ Application ಅನ್ನು ಕಂಡು ಹಿಡಿಯಲಾಗಿದೆ. ಈ ಹೊಸ Application ನ ಮೂಲಕ ನೀವು ಸುಲಭವಾಗಿ ನಿಮ್ಮ Mobile Phon ಗಳನ್ನೂ Block ಮಾಡಬಹುದಾಗಿದೆ.
KSP Application
ನಿಮ್ಮ ಮೊಬೈಲ್ ಫೋನ್ ಗಳು ಕಳೆದು ಹೋದರೆ ಅದರಿಂದ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಏಕೆಂದರೆ ಮೊಬೈಲ್ ಫೋನ್ ನಲ್ಲಿ ಹೆಚ್ಚಿನ ವೈಯಕ್ತಿಕ ಮಾಹಿತಿಗಳು ಇರುತ್ತದೆ. ಫೋನ್ ಕಳೆದು ಹೋಗಿರುವ ಸಮಯದಲ್ಲಿ ನಿಮ್ಮ ಖಾಸಗಿ ಮಾಹಿತಿಗಳು ಲೀಕ್ ಆಗುವ ಬಗ್ಗೆ ನಿಮಗೆ ಭಯವಿರುತ್ತದೆ. ಇನ್ನುಮುಂದೆ ನಿಮ್ಮ ಮೊಬೈಲ್ ಫೋನ್ ಕಳುವಾದರೆ Karnataka Police Department ಆರಂಭಿಸಿರುವ Karnataka State Police App ನಿಮಗೆ ಸಹಾಯವಾಗುತ್ತದೆ.
Lost your phone? Secure it with KSP app! Follow these steps to block your lost phone.
ನಿಮ್ಮ ಫೋನ್ ಕಳೆದುಹೋಗಿದೆಯೇ? ಹಾಗಿದ್ದಲ್ಲಿ, KSP ಅಪ್ಲಿಕೇಶನ್ ನಲ್ಲಿ ನಿಮ್ಮ ಕಳೆದುಹೋದ ಫೋನ್ ಅನ್ನು ಬ್ಲಾಕ್ ಮಾಡಲು ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ.#WeServeWeProtect #CyberSafe pic.twitter.com/SJDjzZojx5
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) September 21, 2023
ಈ ಅಪ್ಲಿಕೇಶನ್ ನ ಮೂಲಕ ದೂರು ನೀಡುವುದು ಹೇಗೆ
*ನೀವು ಬೇರೆ ಯಾವುದೇ ಫೋನ್ ನಲ್ಲಿ KSP Application ಅನ್ನು ಡೌನ್ಲೋಡ್ ಮಾಡಿಕೊಂಡು ಇದರ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ.
*ಮೊಬೈಲ್ ದೂರನ್ನು E-Lost ನಲ್ಲಿ ವರದಿ ಮಾಡಲು KSP Application ಅನ್ನು ಓಪನ್ ಮಾಡಿಕೊಳ್ಳಿ. ಅಲ್ಲಿಂದ E-Lost ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
*ಈಗ E-Lost ವರದಿಯನ್ನು ನೊಂದಾಯಿಸಿಕೊಂಡು ಈ ಆಪ್ಶನ್ ಅನ್ನು ಆಯ್ಕೆ ಮಾಡಿರಿ.
ಬಳಿಕ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿ ನೊಂದಾಯಿಸಿರಿ.
*ನಂತರ ಮುಂದಿನ ಆಪ್ಶನ್ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಮೊಬೈಲ್ ನ ಬಿಲ್ ಇದ್ದರೆ ಅದನ್ನು ಅಪ್‌ಲೋಡ್ ಮಾಡಿ ನಂತರ ನೆಕ್ಸ್ಟ್ ಒತ್ತಿರಿ.
*ಇದಾದ ಬಳಿಕ Mobile Option ಅನ್ನು ಆಯ್ಕೆ ಮಾಡಿ. ಮೊಬೈಲ್ ಮಾಹಿತಿಯನ್ನು ನೀಡಿದ ಮೇಲೆ Add Option ಅನ್ನು ಆರಿಸಿ.
*ಕೊನೆಯದಾಗಿ ನಿಮ್ಮ ಮೊಬೈಲ್ ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ನೀಡಿ Submit ಆಯ್ಕೆಯ ಮೇಲೆ ಕ್ಲಿಕ್ ಮಾಡಿ.