KSPHC Job: ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ, 60,000 ರೂ ಸಂಬಳ, ಇಂದೇ ಅರ್ಜಿ ಸಲ್ಲಿಸಿ.

KSPHC ಖಾಲಿ ಇರುವ ಹುದ್ದೆಗೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.

Karnataka State Police Housing Corporation Limited Job Recruitment: ಕರ್ನಾಟಕ ಸರ್ಕಾರ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶ ನೀಡುತ್ತಿದೆ. ಖಾಲಿ ಇರುವ ಉದ್ಯೋಗಗಳಿಗೆ ಅರ್ಜಿ ಅಹ್ವಾನ ಪ್ರಕ್ರಿಯೆ ಆರಂಭವಾಗಿದೆ.

ದೇಶದಲ್ಲಿ ಇತ್ತೀಚಿಗೆ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಲಕ್ಷಾಂತರ ವಿದ್ಯಾವಂತರು ಉದ್ಯೋಗ ಇಲ್ಲದೆ ಈಗಲೂ ಕೂಡ ಖಾಲಿ ಕೂತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳು ಹರಿದಾಡುತ್ತಿವೆ.

Job Vacancy in KSPHC
Image Credit: Careerindia

KSPHC ಯಲ್ಲಿ ಉದ್ಯೋಗಾವಕಾಶ
ಇದೀಗ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಲಿಮಿಟೆಡ್ (Karnataka State Police Housing Corporation Limited) ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ನೀಡಲು ಮುಂದಾಗಿದೆ. KSPHC ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಖಾಲಿ ಇರುವ ಹುದ್ದೆಗೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ
ಒಟ್ಟು 1 ಮ್ಯಾನೇಜರ್ ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಕೆಗೆ ಜುಲೈ 28 ಕೊನೆಯ ದಿನಾಂಕವಾಗಿದೆ. ಆಸಕ್ತಿ ಇರುವವರು ಕರ್ನಾಟಕ ಸರ್ಕಾರದ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಇನ್ನು ಆಯ್ಕೆ ಆದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನು ಆಯ್ದ ಅಭ್ಯರ್ಥಿಗೆ ಮಾಸಿಕ 60,000 ವೇತನ ನೀಡಲಾಗುತ್ತದೆ. ಇನ್ನು ಅಭ್ಯರ್ಥಿಗಳು ಪಬ್ಲಿಕ್ ಲಿಮಿಟೆಡ್ ಕಂಪನಿಗಳಲ್ಲಿ ಕನಿಷ್ಠ ಒಂದು ವರ್ಷದ ಅನುಭವನ್ನು ಹೊಂದಿರಬೇಕು.

Join Nadunudi News WhatsApp Group

Karnataka State Police Housing Corporation Limited Job Recruitment
Image Credit: Surplusing

ಅರ್ಜಿದಾರರ ವಿದ್ಯಾರ್ಹತೆ
ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ACA ಅಥವಾ AICWA ಪೂರ್ಣಗೊಳಿಸಿರಬೇಕು.

ಇನ್ನು ಅರ್ಜಿದಾರರು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳು ಮತ್ತು ರೆಸ್ಯುಮ್ ನೊಂದಿಗೆ aaoksphidcl@gmail.com ಇ ಮೇಲ್ ಐಡಿಗೆ ಮೇಲ್ ಮಾಡಬಹುದು. ಅಥವಾ ಸಹಾಯಕ ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ನಿಯಮಿತ. #59 ರಿಚ್ಮಂಡ್ ರಸ್ತೆ, ಜನರಲ್ ಕೆ. ಎಸ್ ತಿಮ್ಮಯ್ಯ ರಸ್ತೆ, ಬೆಂಗಳೂರು- 560025 ಗೆ ಪೋಸ್ಟ್ ಮಾಡಬಹುದು.

Join Nadunudi News WhatsApp Group