Vehicle Scrappage Policy Karnataka: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ 2021 ರಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು 1.38 ಕೋಟಿ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಇವುಗಳಲ್ಲಿ 79 ಲಕ್ಷದಷ್ಟು 15 ವರ್ಷಕ್ಕಿಂತ ಹಳೆಯದಾದ ವಾಹನಗಳಿವೆ. ದೇಶದ ಬೇರೆ ಯಾವ ರಾಜ್ಯದಲ್ಲೂ ಸಹ ಇಷ್ಟು ಪ್ರಮಾಣದಲ್ಲಿ ಹಳೆ ವಾಹನಗಳಿಲ್ಲ ಎಂದು ಮಾಹಿತಿಯಿಂದ ತಿಳಿದುಬಂದಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದಲ್ಲಿ ಗುಜರಿ ನೀತಿಯನ್ನು ಜಾರಿಗೆ ತಂದಿದೆ. ಹೊಸ ಗುಜರಿ ನೀಡಿ ಸದ್ಯ ಹಳೆಯ ವಾಹನ ಹೊಂದಿರುವವರ ಸಂಕಷ್ಟಕ್ಕೆ ಕಾರಣವಾಗಿದೆ. ಹಾಗಾದರೆ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಬಂದಿರುವ ಹೊಸ ಗುಜರಿ ನೀತಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಗುಜರಿ ನೀತಿ
ಗುಜರಿ ನೀತಿ (Vehicle Scrappage Policy) ಎಂದರೆ ಹಳೆಯ, ಹೆಚ್ಚು ಮಾಲಿನ್ಯ ಮಾಡುವ ವಾಹನಗಳನ್ನು ಹಂತ ಹಂತವಾಗಿ ರಸ್ತೆಯಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಜಾರಿಗೊಳಿಸಿದ ನೀತಿಯಾಗಿದೆ. 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳಿಗೆ ಹಾಗೂ ಖಾಸಗಿ ವಾಹನಗಳಿಗೆ 20 ವರ್ಷದ ನಂತರ ಫಿಟ್ ನೆಸ್ ಟೆಸ್ಟ್ ಕಡ್ಡಾಯವಾಗಿದೆ. ಈ ಟೆಸ್ಟ್ ಉತ್ತೀರ್ಣವಾಗದಿದ್ದರೆ ಗುಜರಿ ಹಾಕಬೇಕು. ಇದಲ್ಲದೆ ಗುಜರಿ ಹಾಕಿದವರಿಗೆ ಹೊಸ ವಾಹನ ಖರೀದಿ ಮೇಲೆ ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹಧನ ನೀಡಲಾಗುತ್ತದೆ. ಪರಿಸರ ಮಾಲಿನ್ಯ ತಗ್ಗಿಸುವುದು, ರಸ್ತೆ ಸುರಕ್ಷತೆ ಹೆಚ್ಚಿಸುವುದು ಮತ್ತು ಆಟೋ ಮೊಬೈಲ್ ಉದ್ಯಮವನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶ ಆಗಿದೆ.
ಹಳೆಯ ವಾಹನಗಳಿಗೆ ಸರ್ಕಾರದ ಕ್ರಮ
ಸಾರಿಗೆ ಸಚಿವರಾಗಿರುವ ರಾಮಲಿಂಗ ರೆಡ್ಡಿ ಅವರು ವಿಧಾನ ಪರಿಷತ್ ನಲ್ಲಿ ಮಾಹಿತಿ ನೀಡಿದ ಪ್ರಕಾರ, 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳಿಗೆ ಹಾಗೂ ಖಾಸಗಿ ವಾಹನಗಳಿಗೆ 20 ವರ್ಷದ ನಂತರ ಫಿಟ್ ನೆಸ್ ಟೆಸ್ಟ್ ಕಡ್ಡಾಯವಾಗಿದೆ. ಈ ಟೆಸ್ಟ್ ಉತ್ತೀರ್ಣವಾಗದಿದ್ದರೆ ಗುಜರಿ ಮಾಡಲಾಗುದು ಎಂದು ಹೇಳಿಕೆ ನೀಡಿದ್ದಾರೆ. ಈಗಾಗಲೇ 18,552 ಸರ್ಕಾರಿ ವಾಹನಗಳ ನೋಂದಣಿ ರದ್ದು ಮಾಡಲಾಗಿದೆ. ಇದರಲ್ಲಿ 17,000 ಕ್ಕೂ ಹೆಚ್ಚು ವಾಹನಗಳನ್ನು ಗುಜರಿ ಮಾಡುವ ಯೋಜನೆ ಇದೆ. ಸಾರಿಗೆ ನಿಗಮಗಳ 3,212 ಬಸ್ ಗಳನ್ನು ಈಗಾಗಲೇ ಗುಜರಿ ಮಾಡಲಾಗಿದೆ.
ಹೊಸ ಗುಜರಿ ನೀತಿಯ ಲಾಭ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೂ, ಹಳೆಯ ವಾಹನಗಳು ಮಾತ್ರ ಇನ್ನೂ ಸಂಚಾರ ನಿಲ್ಲಿಸಿಲ್ಲ. ಇವುಗಳಿಂದಲೇ ವಾಯುಮಾಲಿನ್ಯ ಹೆಚ್ಚಾಗುತ್ತಲೇ ಇದೆ. ಹಳೆಯ ವಾಹನವನ್ನು ನೋಂದಾಯಿತ ಗುಜರಿ ಕೇಂದ್ರದಲ್ಲಿ (RVSF) ಗುಜರಿ ಮಾಡಿದರೆ Certificate of Deposit ಸಿಗುತ್ತದೆ. ಇದರಿಂದ ಹೊಸ ವಾಹನ ಖರೀದಿಸುವಾಗ ರೋಡ್ ಟ್ಯಾಕ್ಸ್ ನಲ್ಲಿ 25% ವರೆಗೆ ವಿನಾಯಿತಿ, ರಿಜಿಸ್ಟ್ರೇಷನ್ ಶುಲ್ಕ ವಿನಾಯಿತಿ ಮತ್ತು ತಯಾರಕರಿಂದ 5% ಡಿಸ್ಕೌಂಟ್ ಸಿಗುತ್ತದೆ. ಹಾಗೆ ಪರಿಸರ ಮಾಲಿನ್ಯ ಕೂಡ ಕಡಿಮೆ ಆಗುತ್ತದೆ.
ಹೊಸ ಗುಜರಿ ನೀತಿಯ ಪ್ರಮುಖ ಉದ್ದೇಶ
* ಪರಿಸರ ರಕ್ಷಣೆ
ಹಳೆಯ ವಾಹನಗಳಿಂದಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡುವುದು.
* ರಸ್ತೆ ಸುರಕ್ಷತೆ
ಹಳೆಯ ವಾಹನಗಳಿಂದ ಸಂಭವನೀಯ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು.
* ಆರ್ಥಿಕ ಉತ್ತೇಜನ
ವಾಹನ ಉದ್ಯಮವನ್ನು ಮತ್ತು ಉಕ್ಕು ಉದ್ಯಮವನ್ನು ಪ್ರೋತ್ಸಾಹಿಸುವುದು.
* ಹೊಸ ಉದ್ಯೋಗ ಸೃಷ್ಟಿ
ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ ಸ್ಥಾಪನೆಯಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.
* ಎಲೆಕ್ಟ್ರಿಕ್ ವಾಹನಗಳ ಉತ್ತೇಜನ
ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ವಲಸೆ ಹೋಗಲು ಪ್ರೇರೇಪಿಸುವುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

