NEP: ದ್ವಿತೀಯ PUC ಮತ್ತು ಪದವಿ ಓದುತ್ತಿರುವವರಿಗೆ ಬಂಪರ್ ಗುಡ್ ನ್ಯೂಸ್, ನಿಯಮದಲ್ಲಿ ಬದಲಾವಣೆ.

ರಾಜ್ಯದಲ್ಲಿ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.

Changes In NEP System: ರಾಜ್ಯ ವಿಧಾನಸಭಾ ಚುನಾವಣೆಯ ಮುನ್ನ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈ ವೇಳೆ ಬಿಜೆಪಿ ಸರ್ಕಾರ ಸಾಕಷ್ಟು ಹೊಸ ಹೊಸ ನಿಯಮವನ್ನು ಜಾರಿಗೊಳಿಸಿತ್ತು. ಇನ್ನು ಕಳೆದ ಬಾರಿ ಹಿಂದಿನ ಸರ್ಕಾರ ಪದವಿ ಶಿಕ್ಷಣ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿತ್ತು. ಶಿಕ್ಷಣದ ನೀತಿಯಲ್ಲಿನ ಬದಲಾವಣೆಯ ಪ್ರಕಾರ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದರು.

ಆದರೆ ಮೇ 2023 ರಲ್ಲಿ ನಡೆದ ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ವೇಳೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ನಿಯಮವನ್ನು ಬದಲಿಸಿದೆ. ಇದೀಗ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಪದವಿ ಶಿಕ್ಷಣ ನೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಇದೀಗ ಮಹತ್ವದ ಬದಲಾವಣೆ ತರಲು ನಿರ್ಧಾರ ಕೈಗೊಂಡಿದೆ.

A new rule has been implemented for students pursuing graduation in the state.
Image Credit: youthkiawaaz

ಪದವಿ ಶಿಕ್ಷಣ ನೀತಿಯಲ್ಲಿ ಬದಲಾವಣೆ
ಸಾಮಾನವ್ಯವಾಗಿ ಪದವಿ ಶಿಕ್ಷಣ ಮೂರು ವರ್ಷಗಳ ಕಾಲ ಇರುತ್ತಿತ್ತು. ಪಿಯುಸಿ ಮುಗಿದ ಬಳಿಕ ವಿದ್ಯಾರ್ಥಿಗಳು ತಮ್ಮ ಇಚ್ಛೆಗೆ ಅನುಗುಣವಾಗಿ ಪದವಿ ವಿದ್ಯಾಭಾಸವನ್ನು ಪಡೆಯುತ್ತಿದ್ದರು. ಬಿಜೆಪಿ ಸರ್ಕಾರ ಪದವಿ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (National Education Policy) ಯನ್ನು ಜಾರಿಗೊಳಿಸಲು ನಿರ್ಧರಿಸಿತ್ತು. ಏನ್ ಇಪಿ ಅಡಿಯಲ್ಲಿ ನಾಲ್ಕು ವರ್ಷಗಳ ಅವಧಿಯ ಆನರ್ಸ್ ಪದವಿ ಕೋರ್ಸ್ ಆರಂಭಿಸುವ ತೀರ್ಮಾನ ಕೈಗೊಂಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ರಾಜ್ಯದ ಈ ಶಿಕ್ಷಣ ನೀತಿಯನ್ನು ತಡೆ ಹಿಡಿದಿದೆ.

ನಾಲ್ಕು ವರ್ಷದ ಪದವಿ ಕೋರ್ಸ್ ಗೆ ತಡೆ
ರಾಜ್ಯದಲ್ಲಿ ಏನ್ ಇಪಿ ಅನುಷ್ಠಾನವನ್ನು ಕೈಬಿಟ್ಟು ಪ್ರತ್ಯೇಕವಾದ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪದವಿ ಕೋರ್ಸ್ ಗಳನ್ನೂ ಮೂರು ವರ್ಷಕ್ಕೆ ಸೀಮಿತಗೊಳಿಸುವ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.

4 years degree course is limited to three years
Image Credit: theprint

ಹಿಂದಿನ ಸರ್ಕಾರ ನಿರ್ಧರಿಸಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ನೀಡುವ ತೀರ್ಮಾನವನ್ನು ಕಾಂಗ್ರೆಸ್ ಸರ್ಕಾರ ಕೈಬಿಡುವ ಸಾಧ್ಯತೆ ಇದೆ. ಪದವಿ ತರಗತಿಗಳ ಆರಂಭಕ್ಕೆ ಪೂರ್ವಭಾವಿಯಾಗಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿಗಳಿಗೆ ಸುತ್ತೋಲೆ ಹೊರಡಿಸಿರುವ ಉನ್ನತ ಶಿಕ್ಷಣ ಇಲಾಖೆ, ಐದು ಮತ್ತು ಆರನೇ ಸೆಮಿಸ್ಟರ್ ಗಳಿಗೆ ಮಾತ್ರ ಪಠ್ಯಕ್ರಮ ರೂಪಿಸುವಂತೆ ಸೂಚನೆ ನೀಡಿದೆ. ಇನ್ನುಮುಂದೆ ಏನ್ ಇಪಿ ಅಡಿಯಲ್ಲಿ ನಾಲ್ಕು ವರ್ಷದ ಪದವಿ ಕೋರ್ಸ್ ಸ್ಥಗಿತ ಆಗಲಿದೆ.

Join Nadunudi News WhatsApp Group

Join Nadunudi News WhatsApp Group