ಕತ್ರಿನಾ ಮದುವೆಯಾಗುತ್ತಿರುವ ವಿಕ್ಕಿ ಕೌಶಲ್ ಕತ್ರಿನಾಗಿಂತ ಎಷ್ಟು ವರ್ಷ ಚಿಕ್ಕವನು ಗೊತ್ತಾ, ಇಬ್ಬರ ವಯಸ್ಸಿನ ಅಂತರ ಎಷ್ಟು ನೋಡಿ.

ನಟಿ ಕತ್ರಿನಾ ಕೈಫ್​ ದೇಶಕಂಡ ಖ್ಯಾತ ನಟಿಯರಲ್ಲಿ ಈ ನಟಿ ಕೂಡ ಒಬ್ಬರು ಎಂದು ಹೇಳಬಹುದು. ಹಲವು ಹಿಂದೂ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟಿ ಕತ್ರಿನಾ ಕೈಫ್​ ಅವರಿಗೆ ದೇಶಾದ್ಯಂತ ಅಪಾರವಾದ ಅಭಿಮಾನಿ ಬಳಗ ಇದೆ ಎಂದು ಹೇಳಬಹುದು. ಇನ್ನು ಸದ್ಯ ನಟಿ ಕತ್ರಿನಾ ಕೈಫ್​ ಅವರ ಅಕ್ಷಯ್ ಕುಮಾರ್ ಅವರ ಜೊತೆ ನಟನೆ ಮಾಡಿದ ಸೂರ್ಯವಂಶಿ ಚಿತ್ರ ನಮ್ಮ ದೇಶ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರದರ್ಶನವನ್ನ ಕಾಣುತ್ತಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ದೊಡ್ಡ ದಾಖಲೆಯನ್ನ ಸೃಷ್ಟಿಮಾಡಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದೂ ಕತ್ರಿನಾ ಕೈಫ್​ ಅವರ ಮದುವೆಯನ್ನ ವಿಷಯವೆಂದು ಹೇಳಬಹುದು.

ಹೌದು ನಟಿ ಕತ್ರಿನಾ ಕೈಫ್​ ಅವರಿಗೆ 38 ವರ್ಷವಾಗಿದ್ದು ಅವರು ಇಲ್ಲಿಯತನಕ ಮದುವೆಯನ್ನ ಮಾಡಿಕೊಂಡಿರಲಿಲ್ಲ, ಆದರೆ ಈಗ ನಟಿ ಕತ್ರಿನಾ ಕೈಫ್​ ಅವರು ವಿಕ್ಕಿ ಕೌಶಲ್ ಪ್ರೀತಿಯಲ್ಲಿ ಬಿದ್ದಿದ್ದು ಇಬ್ಬರು ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆಯನ್ನ ಏರಲಿದ್ದಾರೆ ಎಂದು ಹೇಳಬಹುದು. ಇನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿರುವ ವಿಷಯ ಏನು ಅಂದರೆ ಅದೂ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ನಡುವಿನ ವಯಸ್ಸಿನ ಅಂತರದ ಬಗ್ಗೆ ಆಗಿದೆ. ಹಾಗಾದರೆ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ನಡುವಿನ ವಯಸ್ಸಿನ ಅಂತರ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

katrika kaif and vicky kaushal age

ಹೌದು ಕತ್ರಿನಾ ಕೈಫ್​ ಅವರು ವಿಕ್ಕಿ ಕೌಶಲ್​ ನಟನೆಯನ್ನು ನೋಡಿ ಮೆಚ್ಚಿಕೊಂಡಿದ್ದರು ಮತ್ತು ಅವರ ಜತೆ ನಟಿಸಬೇಕು ಎನ್ನುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಇದಾದ ನಂತರದಲ್ಲಿ ಇಬ್ಬರೂ ಭೇಟಿ ಆದರು ಮತ್ತು ಗೆಳೆತನ ಪ್ರೀತಿಗೆ ತಿರುಗಿತ್ತು, ಆದರೆ ಇವರ ನಡುವೆ ವಯಸ್ಸಿನ ಅಂತರದ ಪ್ರಶ್ನೆ ಮೂಡಿಯೇ ಇಲ್ಲ. ಪ್ರೀತಿ ಪ್ರೇಮದ ವಿಚಾರದಲ್ಲಿ ಕತ್ರಿನಾ ಕೈಫ್​ ಈ ಮೊದಲು ಸಾಕಷ್ಟು ನೊಂದಿದ್ದರು, ಕೊನೆಗೂ ಅವರು ಪ್ರೀತಿಸಿಯೇ ಮದುವೆ ಆಗುತ್ತಿದ್ದಾರೆ. ಸ್ನೇಹಿತರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಡುವೆ 5 ವರ್ಷ ವಯಸ್ಸಿನ ಅಂತರ ಇದೆ. ವಿಕ್ಕಿ ಕೌಶಲ್​ ಹುಟ್ಟಿದ್ದು 1988 ಮೇ 16 ರಂದು ಮತ್ತು ಈಗ ಅವರ ವಯಸ್ಸು 33 ವರ್ಷ.

ಇನ್ನು ನಟಿ ಕತ್ರಿನಾ ಕೈಫ್ ಹುಟ್ಟಿದ್ದು 1983 ಜುಲೈ 16 ರಂದು ಮತ್ತು ಅವರ ವಯಸ್ಸಿ 38 ವರ್ಷ ಆಗಿದೆ. ಕತ್ರಿನಾ ಕೈಫ್ ಅವರು ವಿಕ್ಕಿ ಕೌಶಲ್ ಗಿಂತ ಐದು ವರ್ಷ ದೊಡ್ಡವರಾಗಿದ್ದು ಇದು ಕೆಲವರ ಆಶ್ಚರ್ಯಕ್ಕೆ ಕಾರಣವಾದರೆ ಇನೂ ಕೆಲವರಿಗೆ ಇದು ಮಾದರಿಯಾಗಿದೆ ಎಂದು ಹೇಳಲಾಗುತ್ತಿದೆ. ವಿಕ್ಕಿ ಹಿಂದು ಮತ್ತು ಕತ್ರಿನಾ ಕೈಫ್​ ಮುಸ್ಲಿಂ ಮತ್ತು ಈ ಕಾರಣಕ್ಕೆ ಎರಡೂ ಧರ್ಮದ ಪ್ರಕಾರ ಮದುವೆ ಕಾರ್ಯ ನಡೆಯಲಿದೆ ಎನ್ನಲಾಗುತ್ತಿದೆ. ವಿವಾಹ ಕಾರ್ಯಕ್ರಮಕ್ಕೆ ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಸಕಲ ಸಿದ್ಧತೆ ನಡೆದಿದ್ದು, ಬಾಲಿವುಡ್​ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಸೆಲೆಬ್ರಿಟಿ ಮದುವೆ ಆದ ಕಾರಣ ಸಾಕಷ್ಟು ಭದ್ರತೆ ಕೂಡ ಒದಗಿಸಲಾಗುತ್ತಿದೆ. ಸ್ನೇಹಿತರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶನ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

katrika kaif and vicky kaushal age

Join Nadunudi News WhatsApp Group