IPL 2024: 30 ಕೋಟಿಗೆ ಸ್ಟಾರ್ ಆಟಗಾರನನ್ನ ಖರೀದಿ ಮಾಡಲು ಮುಂದಾದ ಸನ್ ರೀಸರ್ಸ್ ಹೈದೆರಾಬಾದ್, ಈ ಬಾರಿ ಕಪ್ ಇವರದ್ದೇ.

ಈ ಆಲ್‌ ರೌಂಡರ್‌ ಗಾಗಿ 30 ಕೋಟಿ ರೂ. ಖರ್ಚು ಮಾಡಲಿರುವ ಕಾವ್ಯಾ ಮಾರನ್.

Kavya Maran Bidding Money For Rachin Ravindra in IPL 2024: ಪ್ರಸ್ತುತ ವಿಶ್ವಕಪ್ (World Cup) 2023 ರ ಕ್ರಿಕೆಟ್ ಅನ್ನು ಭಾರತದಲ್ಲಿ ಆಯೋಜಿಸಿದ್ದು ಈ ಟೂರ್ನಿಯಲ್ಲಿ ವಿಶ್ವದ ಟಾಪ್ 10 ತಂಡಗಳು ಭಾಗವಹಿಸುತ್ತಿವೆ. ಈ ಬಾರಿಯಾ ವಿಶ್ವಕಪ್ ಗೆಲುವಿಗಾಗಿ ಎಲ್ಲ ತಂಡಗಳು ಕುತೂಹಲರಾಗಿದ್ದಾರೆ. ವಿಶ್ವಕಪ್ 2023 ಮುಗಿದ ನಂತರ ಐಪಿಎಲ್ 2024 ಹರಾಜಿನ ಕ್ರೇಜ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಲಿದೆ.

ಯಾವ ತಂಡ ಯಾವ ಆಟಗಾರನನ್ನು ಉಳಿಸಿಕೊಳ್ಳುತ್ತದೆ ಎನ್ನುವ ಬಗ್ಗೆ ಎಲ್ಲರು ಕೌತುಕರಾಗಿದ್ದಾರೆ. ಹಾಗೆಯೆ ಯಾವ ತಂಡವು ತನ್ನ ತಂಡಕ್ಕೆ ಯಾವ ಆಟಗಾರನನ್ನು ಸೇರಿಸಿಕೊಳ್ಳಲು ಕೋಟ್ಯಾಂತರ ರೂಪಾಯಿಗೆ ಬಿಡ್ ಮಾಡಬಹುದು..? ಎಂಬ ಬಗ್ಗೆ ಕೂಡ ಕುತೂಹಲ ಇರಬಹುದು.

ಇನ್ನು ಐಪಿಎಲ್ 2024 ರ ಹರಾಜಿಗೆ ಸಂಬಂಧಿಸಿದಂತೆ ಸನ್‌ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕ Kavya Maran ಅವರು 2023 ರ ವಿಶ್ವಕಪ್‌ ನಲ್ಲಿ ಆಡುವ ಈ ಆಲ್‌ ರೌಂಡರ್‌ ಗಾಗಿ 30 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ ಎಂಬ ಮಾಹಿತಿಯ ಬಗ್ಗೆ ನಿಮಗೆ ತಿಳಿದಿದೆಯಾ..? ಹೌದು ಒಬ್ಬ ಆಟಗಾರನಿಗಾಗಿ ಇವರಿ 30 ಕೋಟಿ ಬಿಡ್ ಮಾಡಲು ಮುಂದಾಗಿದ್ದು ಸದ್ಯ ಈ ಸ್ಟಾರ್ ಆಟಗಾರ ದೊಡ್ಡ ಮೊತ್ತಕ್ಕೆ ಸೇಲ್ ಆಗಲಿದ್ದಾರೆ ಎಂದು ಹೇಳಬಹುದು.

IPL 2024
Image Source: Mint

ಈ ಆಲ್‌ ರೌಂಡರ್‌ ಗಾಗಿ 30 ಕೋಟಿ ರೂ. ಖರ್ಚು ಮಾಡಲಿರುವ ಕಾವ್ಯಾ ಮಾರನ್
ಐಪಿಎಲ್ 2023 ರ ಸೀಸನ್ ಸನ್‌ ರೈಸರ್ಸ್ ಹೈದರಾಬಾದ್‌ ಗೆ ವಿಶೇಷವೇನಲ್ಲ. ಸನ್‌ ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಕೆಳಭಾಗದಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸನ್‌ ರೈಸರ್ಸ್ ಹೈದರಾಬಾದ್ ಮಾಲೀಕರು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್‌ ರೌಂಡರ್ ‘ರಚಿನ್ ರವೀಂದ್ರ’ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಹಲವು ತಂಡಗಳೊಂದಿಗೆ ಹೋರಾಡಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಕಾವ್ಯಾ ಮಾರನ್ ರಚಿನ್ ರವೀಂದ್ರಗಾಗಿ 30 ಕೋಟಿ ರೂ. ವರೆಗೆ ಬಿಡ್ ಮಾಡಲಿದ್ದಾರೆ ಎನ್ನುವ ಬಗ್ಗೆ ವರದಿಯಾಗಲಿದೆ.

ಯುವ ಆಲ್‌ ರೌಂಡರ್ Rachin Ravindra
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಯುವ ಆಲ್‌ ರೌಂಡರ್ ರಚಿನ್ ರವೀಂದ್ರ 2023 ರ ವಿಶ್ವಕಪ್‌ ನಲ್ಲಿ ಇದುವರೆಗಿನ ತನ್ನ ಆಲ್‌ ರೌಂಡ್ ಪ್ರದರ್ಶನದ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಾರೆ. ಅದರಲ್ಲೂ ಬ್ಯಾಟಿಂಗ್ ಮೂಲಕ ರಚಿನ್ ರವೀಂದ್ರ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 290 ರನ್ ಗಳಿಸಿದ್ದಾರೆ. ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರವೀಂದ್ರ ಐದನೇ ಸ್ಥಾನದಲ್ಲಿದ್ದಾರೆ. ರಚಿನ್ ರವೀಂದ್ರ ತಮ್ಮ ಬೌಲಿಂಗ್‌ ನಿಂದ ಪ್ರಮುಖ ಸಂದರ್ಭಗಳಲ್ಲಿ ತಂಡಕ್ಕೆ ವಿಕೆಟ್‌ ಗಳನ್ನು ತಂದುಕೊಟ್ಟಿದ್ದಾರೆ.

Join Nadunudi News WhatsApp Group

IPL 2024
Image Source: The Cricket Legue

IPL 2024 ರಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಈ ಸ್ಟಾರ್ ಆಟಗಾರ
ಐಪಿಎಲ್ 2024 ರ ಹರಾಜಿನಲ್ಲಿ ರಚಿನ್ ರವೀಂದ್ರ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಸನ್‌ ರೈಸರ್ಸ್ ಹೈದರಾಬಾದ್ ಮಾಲೀಕ ಕಾವ್ಯಾ ಮಾರನ್ ನಿರ್ಧಾರ ಮಾಡಿದ್ದಾರೆ. ಈ ಸ್ಟಾರ್ ಆಟಗಾರ ತಂಡಕ್ಕೆ ಬಂದರೆ  ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮೂಲಕ ತಂಡಕ್ಕೆ ಪ್ರಮುಖ ವಿಕೆಟ್‌ ಗಳನ್ನು ಪಡೆಯಬಹುದು. ರಚಿನ್ ರವೀಂದ್ರ ಅವರು ಐಪಿಎಲ್ 2024 ರಲ್ಲಿ ತಮ್ಮ ವಿಶ್ವಕಪ್ 2023 ರ ಪ್ರದರ್ಶನವನ್ನು ಪುನರಾವರ್ತಿಸುವಲ್ಲಿ ಯಶಸ್ವಿಯಾದರೆ, ಅವರು 2016 ರ ನಂತರ ಐಪಿಎಲ್ ಟ್ರೋಫಿಯನ್ನು ಸನ್‌ ರೈಸರ್ಸ್ ಹೈದರಾಬಾದ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುವ ಆಟಗಾರ ಆಗಬಹುದು.

Join Nadunudi News WhatsApp Group