Super Bike: 302 Km ಸ್ಪೀಡ್ ನಲ್ಲಿ ಚಲಿಸುವ ಈ ಬೈಕ್ ಮುಂದೆ ವಿಮಾನ ಕೂಡ ತಲೆಬಾಗಿದೆ, ಬೆಲೆ ಕೊಂಚ ಅಧಿಕ.
302 ಕಿಲೋಮೀಟರು ವೇಗದಲ್ಲಿ ಚಲಿಸುವ ಈ ದುಬಾರಿ ಬೈಕ್ ಗೆ ದೇಶದಲ್ಲಿ ಹೆಚ್ಚಾಗಿದೆ ಬೇಡಿಕೆ
Kawasaki Ninja ZX-10R Bike: ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಲೆ ಇದೆ. ಈ ಕಾರಣದಿಂದಗಿ ಪ್ರತಿಷ್ಠಿತ ವಾಹನ ತಯಾರಾಕ ಕಂಪನಿಗಳು ಹೊಸ ಹೊಸ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್, CNG , ಎಲೆಕ್ಟ್ರಿಕ್ ಚಾಲಿತ ಹಾಗೆ ಬೈಕ್ ಗಳು ಲಭ್ಯವಿದೆ.
ಹಾಗಾಗಿ ಬೈಕ್ ಖರೀದಿಸುವವರಿಗೆ ಯಾವ ರೀತಿಯಿಂದನು ಕೊರತೆಯಂತೂ ಆಗುದಿಲ್ಲ. ಹಾಗೆ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಬೈಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ನಾವು ಕವಾಸಕಿ ಕಂಪನಿ ಬಿಡುಗಡೆ ಮಾಡಿರುವ ಮತ್ತೊಂದು ಸೂಪರ್ ಬೈಕ್ ಬಗ್ಗೆ ನಾವೀಗ ಮಾಹಿತಿ ತಿಳಿದುಕೊಳ್ಳೋಣ.
Kawasaki Ninja ZX-10R Bike Engine Capacity
ಇದೀಗ ಕವಾಸಕಿ ಕಂಪನಿ ಬಿಡುಗಡೆ ಮಾಡಿರುವ ಕೂಲ್ ಬೈಕ್ ಅನ್ನು Kawasaki Ninja ZX-10R ಎಂದು ಹೆಸರಿಸಲಾಗಿದೆ. ಈ ಬೈಕ್ ಅನ್ನು Super Bike ಎಂದು ಕೂಡ ಕರೆಯಬಹುದಾಗಿದೆ. Kawasaki Ninja ZX-10R Bike ನಲ್ಲಿ 998cc ಲಿಕ್ವಿಡ್ -ಕೂಲ್ಡ್, ಫೋರ್ -ಸ್ಟ್ರೋಕ್, ಫ್ಯೂಯಲ್ ಇಂಜೆಕ್ಟೆಡ್ ಇನ್‌ಲೈನ್ -ಫೋರ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 200 bhp ಪವರ್ ಮತ್ತು 115 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆ ಎಂಜಿನ್ 6 -ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ.
Kawasaki Ninja ZX-10R Bike Features
Kawasaki Ninja ZX-10R Bike ಗ್ರಾಹಕರ ಕೈಗೆಟುಕುವ ಮೋಟಾರ್ ಸೈಕಲ್‌ಗಳಲ್ಲಿ ಒಂದಾಗಿದೆ. ಇದು 4 .3 ಇಂಚಿನ TFT ಡಿಸ್ಪ್ಲೇ ಅನ್ನು ಪಡೆದುಕೊಂಡಿದೆ. ಇದಲ್ಲದೆ ಕಾರ್ನರಿಂಗ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಜೊತೆಗೆ ಸ್ಪೋರ್ಟ್, ರೋಡ್, ರೈನ್ ಮತ್ತು ರೈಡರ್ ಎಂಬ 4 ವಿಭಿನ್ನ ಮೋಡ್ ಗಳೊಂದಿಗೆ ಗ್ರಾಹಕರ ಕೈ ಸೇರುತ್ತದೆ.
Kawasaki Ninja ZX-10R Bike Max Speed
Kawasaki Ninja ZX-10R ಬೈಕೆವೇಗದ ಬಗ್ಗೆ ಮಾತಾಡುದಾದರೆ ಈ ಬೈಕ್ ನಲ್ಲಿ ಕೇವಲ 3 ಸೆಕೆಂಡುಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಪಡೆಯಬಹುದಾಗಿದೆ. ಇನ್ನು ರಸ್ತೆಗಳಲ್ಲಿ ಗಂಟೆಗೆ 302 ಕಿಮೀ ವೇಗದಲ್ಲಿ ಚಲಿಸಬಹುದಾಗಿದೆ. ವೇಗದ ಜೊತೆಗೆ ಉತ್ತಮವಾದ ಸಸ್ಪೆನ್ಷನ್ ಗುಣಮಟ್ಟ ಮತ್ತು ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದರಿಂದ ವಾಹನವನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ.
Kawasaki Ninja ZX-10R Bike Price
Kawasaki Ninja ZX-10R Bike ನ ಬೆಲೆ ಎಕ್ಸ್ ಶೋರೂಮ್ ಪ್ರಕಾರ 15 .99 ಲಕ್ಷ ಆಗಿದೆ. ಇದು ಹಳೆಯ ಮಾದರಿಗಿಂತ 62000 ರೂಪಾಯಿಗಳಷ್ಟು ದುಬಾರಿಯಾಗಿದೆ. Kawasaki Ninja ZX-10R ಬೈಕ್ ಲೈಮ್ ಗ್ರೀನ್ ಮತ್ತು ಹೊಸ ಪರ್ಲ್ ರೋಬೋಟಿಕ್ ವೈಟ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ.