Kirik Keerthy: ಅವಳ ಕರಿಮಣಿ ಮಾಲೀಕ ನಾನಲ್ಲ, ಕೋರ್ಟ್ ತೀರ್ಪಿನ ಬೆನ್ನಲ್ಲೇ ವೈರಲ್ ಆಗಿದೆ ಕಿರಿಕ್ ಕೀರ್ತಿ ಪೋಸ್ಟ್.
ಕಾನೂನಿನ ಮುಕಾಂತರ ದೂರವಾದ ಬೆನ್ನಲ್ಲೇ ವೈರಲ್ ಆಗಿದೆ ಕಿರಿಕ್ ಕೀರ್ತಿ ಮಾಡಿದ ಪೋಸ್ಟ್.
Kirik Keerthi And Arpitha Divorce: ಇತ್ತೀಚಿಗೆ ವಿಚ್ಛೇದನದ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ಸೆಲೆಬ್ರೆಟಿಗಳ ದಾಂಪತ್ಯ ಜೀವನ ಅರ್ಧದಲ್ಲಿಯೇ ಕೊನೆಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ.
ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾಗಿರುವುದು ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ (Kirik Keethi) ಅವರು. ಕೀರ್ತಿ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಗಳು ಈಗಾಗಲೇ ಸಾಕಷ್ಟು ಹರಿದಾಡಿದ್ದವು. ಇದೀಗ ಕೀರ್ತಿ ತಮ್ಮ ದಾಂಪತ್ಯ ಜೀವನದಲ್ಲಿ ಬಹುಮುಖ್ಯ ನಿರ್ಧಾರವನ್ನು ಕೈಗೊಂಡಿದ್ದಾರೆ.
ಕೀರ್ತಿ ಹಾಗು ಅರ್ಪಿತಾ ದಾಂಪತ್ಯ ಜೀವನದಲ್ಲಿ ಬಿರುಕು
ಈ ಬಗ್ಗೆ ಕೀರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದರು. ಕೆಲವು ತಿಂಗಳ ಹಿಂದೆ ಕೀರ್ತಿ ಹಾಗೂ ಅವರ ಪತ್ನಿ ಅರ್ಪಿತಾ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಇಬ್ಬರು ಜೊತೆಗಿರುವ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಈ ವೇಳೆ ಕೀರ್ತಿ ಹಾಗೂ ಅರ್ಪಿತಾ ದಾಂಪತ್ಯ ಜೀವನದ ಬಿರುಕಿನ ಬಗ್ಗೆ ಸುದ್ದಿಗಳು ವೈರಲ್ ಆಗಿದ್ದವು.
ಕೀರ್ತಿ ಅವರು ಬಿಗ್ ಬಾಸ್ ನ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ನಂತ್ರ ತಮ್ಮ ಮಾತಿನ ಮೋಡಿಯಲ್ಲಿ ಕನ್ನಡಿಗರನ್ನು ಸೆಳೆದಿದ್ದರು. ಜೋಡಿ ನಂಬರ್ 1 ರಿಯಾಲಿಟಿ ಶೋ ನಲ್ಲಿ ಕೀರ್ತಿ ಹಾಗು ಅರ್ಪಿತಾ ಎಲ್ಲರ ಗಮನ ಸೆಳೆದಿದ್ದರು. ಶೋ ನಡೆದ ಸಮಯದಲ್ಲಿ ಈ ಜೋಡಿ ಪರಸ್ಪರ ಅನ್ಯೂನ್ಯವಾಗಿದ್ದರು.
ಆದರೆ ಕೆಲ ಸಮಯದ ಹಿಂದೆ ಈ ಜೋಡಿಯ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ದಾಂಪತ್ಯ ಜೀವನದಿಂದ ಮನನೊಂದು ಕೀರ್ತಿ ಈ ಹಿಂದೆ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಇದೀಗ ಕೀರ್ತಿ ಹಾಗು ಅರ್ಪಿತಾ ಪರಸ್ಪರ ವಿಚ್ಛೇದನ ಪಡೆದಿದ್ದಾರೆ. ಈ ಬಗ್ಗೆ ನಿರೂಪಕ ಕೀರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
View this post on Instagram
ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಇಟ್ಟ ಕಿರಿಕ್ ಕೀರ್ತಿ
ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ -ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನುಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ.
ಕಾರಣ ಇಷ್ಟೇ, ಅಧಿಕೃತವಾಗಿ ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆ ಬದುಕು ಅವಳಿಗೂ ಸಿಗಲಿ. ಕಹಿ ನೆನಪುಗಳು ಮರೆತು ಹೊಸ ಜೀವನಕ್ಕೆ ನಾಂದಿ ಹಾಡಲಿ. ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರೆಯಲಿ ಎಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಿರಿಕ್ ಕೀರ್ತಿ ತಮ್ಮ ವಿಚ್ಛೇದನದ ಬಗ್ಗೆ ಮಾಹಿತಿ ತಿಳಿಸಿದ್ದಾರೆ.