Ads By Google

Keerthy Suresh: ಮದುವೆಯಾಗುವ ಹುಡುಗನನ್ನ ಪರಿಚಯಿಸಿದ ನಟಿ ಕೀರ್ತಿ ಸುರೇಶ್, ಅಷ್ಟಕ್ಕೂ ಈತ ಯಾರು.

Actress Keerthy Suresh shared information about the wedding boy.
Ads By Google

Keerthy Suresh Future Husband: ಬಹುಭಾಷಾ ನಟಿ ಕೀರ್ತಿ ಸುರೇಶ್ (Keerthy Suresh) ಅವರು ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಕೀರ್ತಿ ಸುರೇಶ್ ಬಹುಬೇಡಿಕೆಯ ನಟಿಯಾಗಿ ಬಾಲಿವುಡ್, ಟಾಲಿವುಡ್, ಮಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ನಟಿ ಕೀರ್ತಿ ಸುರೇಶ್ ಮದುವೆ ವಿಚಾರ ಸಾಕಷ್ಟು ದಿನಗಳಿಂದ ಸುದ್ದಿಯಾಗುತ್ತಿದೆ. ಇದೀಗ ನಟಿ ಕೀರ್ತಿ ಸುರೇಶ್ ಅವರು ಮದುವೆ ವಿಚಾರವಾಗಿಯೇ ಸುದ್ದಿಯಲ್ಲಿದ್ದಾರೆ ಎನ್ನಬಹುದು.

Image Credit: indiatoday

ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡ ನಟಿ ಕೀರ್ತಿ ಸುರೇಶ್

ನಟಿ ಕೀರ್ತಿ ಸುರೇಶ್ ದಳಪತಿ ವಿಜಯ್ ಜೊತೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಈ ಎಲ್ಲ ಸುಳ್ಳು ಸುದ್ದಿಗಳಿಗೆ ಕೀರ್ತಿ ಸುರೇಶ್ ಅವರ ತಾಯಿ ಬ್ರೇಕ್ ಹಾಕಿದ್ದರು. ಈಗ ನಟಿ ಕೀರ್ತಿ ಸುರೇಶ್ ಉದ್ಯಮಿಯೊಬ್ಬರ ಜೊತೆ ಕಾಣಿಸಿಕೊಂಡ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಸುದ್ದಿ ಹರಡುತ್ತಿದೆ.

ಇವರು ಕೀರ್ತಿ ಸುರೇಶ್ ಬಾಯ್ ಫ್ರೆಂಡ್ ಇರಬಹುದು, ಕೀರ್ತಿ ಸುರೇಶ್ ಅವರ ಬಾಯ್ ಫ್ರೆಂಡ್ ನ ಪರಿಚಯ ಮಾಡಿಸಿದ್ದಾರಾ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ.

Image Credit: publictv

ಬಾಯ್ ಫ್ರೆಂಡ್ ಫೋಟೋ ಹಂಚಿಕೊಂಡ ನಟಿ ಕೀರ್ತಿ ಸುರೇಶ್
ನಟಿ ಕೀರ್ತಿ ಸುರೇಶ್ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಇದೀಗ ವೈರಲ್ ಆಗುತ್ತಿದೆ. ಒಬ್ಬರ ಜೊತೆ ಕೀರ್ತಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಅವರ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಅವನೊಂದಿಗೆ ಇರುವ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಟಿ ಶುಭಾಶಯ ಕೋರಿದ್ದಾರೆ.

ಫೋಟೊ ವೈರಲ್ ಆಗುತ್ತಿದ್ದಂತೆ ಕೀರ್ತಿ ಜೊತೆಗಿರುವ ಆ ವ್ಯಕ್ತಿ ಯಾರು ಎಂದು ಕೆಲವರು ಹುಡುಕಾಟ ಶುರು ಮಾಡಿದ್ದಾರೆ. ಅವನ ಹೆಸರು ಫರ್ಹಾನ್ ಬಿನ್ ಲೈತ್. ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದಾರಂತೆ.

Image Credit: publictv

ಫರ್ಹಾನ್ ಬಿನ್ ಲೈತ್ ಸ್ವಂತ ರೆಸ್ಟೋರೆಂಟ್ ಹೊಂದಿದ್ದು ಕೀರ್ತಿ ಸುರೇಶ್ ಜೊತೆ ಉತ್ತಮ ಸ್ನೇಹದಲ್ಲಿ ಇದ್ದಾರೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆ ಎಂದು ಹೇಳಲಾಗುತ್ತಿದೆ. ಇನ್ನು ಈ ಸುದ್ದಿಯ ಬಗ್ಗೆ ನಟಿ ಕೀರ್ತಿ ಸುರೇಶ್ ಅವರು ಎಲ್ಲಿಯೂ ಕೂಡ ಸ್ಪಷ್ಟನೆಯನ್ನ ನೀಡಿಲ್ಲ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in