Kerala court dismisses Hombale film petition: ಕಾಂತಾರ ಚಿತ್ರಕ್ಕೆ ಇನ್ನೊಂದು ಆಘಾತ ನೀಡಿದ ಕೋರ್ಟ್, ಚಿತ್ರಕ್ಕೆ ನಿಲ್ಲದ ಸಂಕಷ್ಟ.
Kerala court dismisses Hombale film petition: ಸೆಪ್ಟೆಂಬರ್ 30,2022 ರಲ್ಲಿ ಬಿಡುಗಡೆಯಾದ ಚಿತ್ರ ಕಾಂತಾರ. ಈ ಸಿನಿಮಾ ಕನ್ನಡಿಗರ ಹೆಮ್ಮೆಯ ಚಿತ್ರ. ರಿಷಬ್ ಶೆಟ್ಟಿ (Rishab shetty) ಅಭಿನಯಿಸಿದ ಈ ಚಿತ್ರ ತುಳುನಾಡಿನ ದಂತ ಕಥೆ ಯಾಗಿದೆ. ಕಾಂತಾರ ತುಳುನಾಡಿನ ದೈವದ ಮಹತ್ವದ ಬಗ್ಗೆ ತಿಳಿಸಿಕೊಟ್ಟ ಸಿನಿಮಾ. ಈ ಸಿನಿಮಾ ತೆರೆಮೇಲೆ ಬಂದ ದಿನವೇ ಎಲ್ಲರ ಬಾಯಲ್ಲಿ ಸೈ ಎನಿಸಿಕೊಂಡಿತ್ತು.
ಕಾಂತಾರದ ಒಂದೊಂದು ದ್ರಶ್ಯಾವು ಮೈ ಜುಮ್ಮ್ ಎನಿಸುತ್ತದೆ. ತುಳುನಾಡಿನ ಸಂಸ್ಕ್ರತಿಯನ್ನು ಎತ್ತಿ ಹಿಡಿದು ಈ ಸಿನಿಮಾ ತುಳು ನಾಡಿನ ದೈವದ ಬಗ್ಗೆ ಜನರಿಗೆ ಅರಿವು ಮೂಡಿಸಿದೆ. ರಿಷಬ್ ಶೆಟ್ಟಿ ನಟಿಸಿರುವ ಈ ಚಿತ್ರ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಕಾಣಿಸಿಗೊಳ್ಳಲಿದೆ.
ಈ ಚಿತ್ರ ವೀಕ್ಷಿಸಿದ ಹಲವು ನಟರು ಈ ಸಿನಿಮಾವನ್ನು ಮತ್ತು ರಿಷಬ್ ಶೆಟ್ಟಿ ಇವರನ್ನು ಹಾಡಿ ಹೊಗಳಿದ್ದಾರೆ. ಈ ಸಿನಿಮಾದಲ್ಲಿ ಬರುವ ಒಂದೊಂದು ಸಾಂಗ್ ಸಹ ಹಿಟ್ ಆಗಿದೆ. ವರಾಹ ರೂಪಂ ಸಾಂಗ್ ಗೆ ಸಾಮಾನ್ಯ ಜನರಲ್ಲದೆ ದೊಡ್ಡ ದೊಡ್ಡ ನಟ ನಟಿಯರು ಫಿದಾ ಆಗಿದ್ದಾರೆ.
ಹೊಂಬಾಳೆ ಫಿಲಂಸ್ ಅರ್ಜಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್
ವರಾಹ ರೂಪಂ ಸಾಂಗ್ ಎಲ್ಲೆಡೆ ಫೇಮಸ್ ಆಗಿತ್ತು. ಈ ಸಾಂಗ್ ಕೇಳಿ ಫಿದಾ ಆದವರು ಅದೆಷ್ಟು ಮಂದಿ. ಎಲ್ಲರ ಬಾಯಲ್ಲೂ ವಿರಹ ರೂಪಂ ಸಾಂಗ್ ಹಾಗೆ ಪ್ರತಿನಿತ್ಯ ವಾಟ್ಸ್ ಆಪ್ ಸ್ಟೇಟಸ್ (WhatsApp Status) ಗಳಲ್ಲಿ ಈ ಸಾಂಗ್ ಮಿಂಚುತ್ತಿದೆ. ಆದರೆ ಈಗ ಇದೆ ಸಾಂಗ್ ಗೆ ವಿವಾದ ಉಂಟಾಗಿದೆ.
ಕೇರಳ ಹೈಕೋರ್ಟ್ (Kerala High court) ಹೊಂಬಾಳೆ ಫಿಲಂಸ್ ಅವರ ಅರ್ಜಿಯನ್ನು ವಜಾಗೊಳಿಸಿತು. Kerala Court Dismisses Hombale Films Petition on Varaha Rupam Copyright. ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ಬಳಕೆಗೆ ನೀಡಲಾಗಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಬೇಕೆಂದು ಕೋರಿ ಹೊಂಬಾಳೆ ಫಿಲಂಸ್ ಸಲ್ಲಿಸಿದ ಅರ್ಜಿಯನ್ನು ತೆರವುಗೊಳಿಸಿದ ಕೇರಳ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಸಿ ಯಸ್ ಡಯಾಸ್ ಅವರ ಏಕಸದಸ್ಯ ಪೀಠವು ಅರ್ಜಿದಾರರು ಭಾರತ ಸಂವಿಧಾನದ 22 ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಲಿದ್ದಾರೆ. ಸಿವಿಲ್ ಪ್ರಕ್ರಿಯೆ ಕಾರ್ಯವಿಧಾನವನ್ನು ಸಂಪೂರ್ಣ ಬೈಪಾಸ್ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೆಳ ನ್ಯಾಯಾಲಯಗಳು ಹೊರಡಿಸಿದ ಪ್ರತಿಯೊಂದು ಮಧ್ಯಂತರ ಮಧ್ಯಂತರ ಆದೇಶಗಳಿಗೆ ನಾವು ಆದೇಶಗಳನ್ನು ನೀಡಲು ಸಾಧ್ಯವಿಲ್ಲ. ಒಂದುವೇಳೆ ಆದೇಶ ನೀಡಿದರೆ ಮೂಲ ನ್ಯಾಯವ್ಯಾಪ್ತಿಯ ನ್ಯಾಯಾಲಯಗಳು ಮತ್ತು ಮೇಲ್ಮನವಿ ನ್ಯಾಯಾಲಯಗಳು ನಿಷ್ಕ್ರಿಯವಾಗುತ್ತವೆ.
ಈ ನ್ಯಾಯಾಲಯವು ಇಂತಹ ಕೇಸ್ಗಳಿಂದ ತುಂಬಿ ತುಳುಕುತ್ತದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.
ಈ ಅರ್ಜಿಯ ಕುರಿತು ವಿಚಾರಗಳು ಹೊರಹೊಮ್ಮುತ್ತಿದೆ. ಕೋರ್ಟ್ ಕಾನೂನು ಮಾರ್ಗಗಳನ್ನು ಅನುಸರಿಸಿ ಹೊಂಬಾಳೆ ಫಿಲಂಸ್ ಅವರಿಗೆ ಸಲಹೆ ನೀಡಿತು.