ಒಬ್ಬ ಮನುಷ್ಯನ ಆರೋಗ್ಯ ಆತನ ತೂಕದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಹೆಚ್ಚಿನ ತೂಕ ಮಾನವನ ಆರೋಗ್ಯದ ಮೇಲೆ ನೇರ ಪರಿಣಾಮವನ್ನ ಬಿರುವುದು ಮಾತ್ರವಲ್ಲದೆ ಅದು ಆತನಿಗೆ ಮುಜುಗರ ಕೂಡ ಉಂಟುಮಾಡುತ್ತದೆ ಎಂದು ಹೇಳಬಹುದು. ಇನ್ನು ನಮ್ಮ ಈ ಭೂಮಿಯ ಮೇಲೆ ಅದೆಷ್ಟೋ ತೂಕವಿರುವ ಮಾನವರನ್ನ ನಾವು ನೋಡಿದ್ದೇವೆ. ಹೆಚ್ಚಿನ ತೂಕ ಮಾಡಿಕೊಳ್ಳುವುದು ಮಾನವನಿಗೆ ದೊಡ್ಡ ವಿಷಯವಾಗುದಿಲ್ಲ ಬದಲಾಗಿ ಅದನ್ನ ಇಳಿಸಿಕೊಳ್ಳುವುದೆ ದೊಡ್ಡ ವಿಷಯವಾಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ನಾವು ತೂಕ ಹೆಚ್ಚಾದಾಗ ಆದನ್ನ ಇಳಿಸಿಕೊಳ್ಳಲು ನಾನಾರೀತಿಯಲ್ಲಿ ಪ್ರಯತ್ನವನ್ನ ಮಾಡುತ್ತೇವೆ.
ಜಿಮ್ ಮೂಲಕ, ಊಟವನ್ನ ಬಿಡುವುದರ ಮೂಲಕ, ವ್ಯಾಯಾಮ ಮತ್ತು ಯೋಗ ಮಾಡುವುದರ ಮೂಲಕ ನಾವು ತೂಕವನ್ನ ಇಳಿಸಿಕೊಳ್ಳುತ್ತೇವೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ, ಒಂದು ಕಾಲದಲ್ಲಿ ಬರೋಬ್ಬರಿ 609 ಕೆಜಿ ತೂಕವನ್ನ ಹೊಂದಿದ್ದ ಒಬ್ಬ ಯುವಕ ಈಗ ಎಷ್ಟು ಕೆಜಿ ಇಳಿಸಿಕೊಂಡಿದ್ದಾನೆ ಎಂದು ಕೇಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ. ಹಾಗಾದರೆ ಈ ಯುವಕ ಯಾರು ಮತ್ತು ಈತ ಅಷ್ಟೊಂದು ತೂಕ ಇಳಿಸಿಕೊಳ್ಳಲು ಮಾಡಿದ ಕಸರತ್ತು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈತನ ತೂಕ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ಸೌದಿ ಅರೇಬಿಯಾದ ಖಾಲಿದ್ ಮೊಹ್ಸಿನ್ ಅಲ್ ಶೇರಿ ಅನ್ನುವ ಒಂದು ಕಾಲದಲ್ಲಿ ಪ್ರಪಂಚದಲ್ಲಿ ಇರುವ ಅತಿ ಹೆಚ್ಚಿನ ತೂಕವನ್ನ ಹೊಂದಿರುವ ಮಾನವರಲ್ಲಿ ಒಬ್ಬರಾಗಿದ್ದ, ಆದರೆ ಈಗ ಈತನನ್ನ ನೋಡಿದರೆ ಗುರುತು ಹಿಡಿಯುವುದೇ ಕಷ್ಟವಾಗುತ್ತದೆ. ಖಾಲಿದ್ ಮೊಹ್ಸಿನ್ ಸೌದಿಯ ಜಾರ್ಜನ್ ಮೂಲದವರು. ಖಾಲಿದ್ 17 ವರ್ಷದವನಾಗಿದ್ದಾಗ 609 ಕೆಜಿ ತೂಕ ಹೊಂದಿದ್ದ. ಖಾಲಿದ್ ಎಷ್ಟು ಭಾರವಾಗಿದ್ದನೆಂದರೆ ಹಾಸಿಗೆಯಿಂದ ಸರಿಯಾಗಿ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಏನು ಮಾಡಬೇಕು ಎಂದು ತೋಚದ ಈತನಿಗೆ ನಂತರ ತೂಕವನ್ನ ಇಳಿಸಿಕೊಳ್ಳಲು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನ ನೀಡಲಾಯಿತು. ಇನ್ನು ಈತನಿಗೆ ಚಿಕಿತ್ಸೆಯನ್ನ ನೀಡಿದ 7 ತಿಂಗಳಲ್ಲಿ ಈತ ಬರೋಬ್ಬರಿ 543 ಕೆಜಿ ತೂಕವನ್ನ ಕಳೆದುಕೊಂಡ.
2013 ರಲ್ಲಿ ತಂಡವು ಅವನನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದಾಗ ಖಲೀದ್ ನನ್ನು ಮನೆಯ ಮೆಟ್ಟಿಲುಗಳಿಂದ ಕೆಳಗಿಳಿಸುವುದು ಕಷ್ಟವಾಗಿತ್ತು ಮತ್ತು ಮನೆಯಿಂದ ಹೊರಗೆ ತರಲು ಅವರ ಮನೆಯ ಒಂದು ಭಾಗವನ್ನು ಕೆಡವಬೇಕಾಯಿತು ಮತ್ತು ಆತನನ್ನ ಕ್ರೇನ್ ಸಹಾಯದಿಂದ ಆಂಬ್ಯುಲೆನ್ಸ್ ಗಳಲ್ಲಿ ಇರಿಸಲಾಯಿತು, ನಂತರ ಅವರನ್ನು ವಿಮಾನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಖಾಲಿದ್ ಮೊಹ್ಸಿನ್ ಅಲ್ ಶೇರಿ ಅನ್ನು 30 ವೈದ್ಯರು ಚಿಕಿತ್ಸೆಗೆ ಒಳಪಡಿಸಿದರು. ಈ ಸಮಯದಲ್ಲಿ, ಖಾಲಿದ್ ಗೆ ಶಸ್ತ್ರಚಿಕಿತ್ಸೆಯಿಂದ ಹಿಡಿದು ವಿವಿಧ ವ್ಯಾಯಾಮಗಳು ಮತ್ತು ಚಿಕಿತ್ಸೆಯನ್ನು ನೀಡಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ 543 ಕಿಲೋ ತೂಕವನ್ನು ಕಡಿಮೆ ಮಾಡಿದ್ದಾರೆ. ಸ್ನೇಹಿತರೆ ಈತನ ಈಗಿನ ತೂಕ ಕೇವಲ 63 ಕೆಜಿ ಮಾತ್ರ. ಸ್ನೇಹಿತರೆ ಈತನ ಈ ಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.